ಇರಾಕ್ ರಾಜಧಾನಿಯಲ್ಲಿ ಬಾಂಬ್ ಸ್ಫೋಟ : ಕನಿಷ್ಠ 4 ಸಾವು, 30 ಜನರಿಗೆ ಗಾಯ

ಬಾಗ್ದಾದ್, ಆ 24      ಇರಾಕ್ ರಾಜಧಾನಿ ಬಾಗ್ದಾದ್ ದಕ್ಷಿಣ ಬಾಬಿಲ್ ಪ್ರಾಂತ್ಯದಲ್ಲಿ ಮೋಟಾರ್ ಸೈಕಲ್ ಬಾಂಬ್ ದಾಳಿಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು 30 ಮಂದಿ ಗಾಯಗೊಂಡಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಒಳಾಡಳಿತ ಸಚಿವಾಲಯದ ಮೂಲಗಳು, ಜನದಟ್ಟಣೆಯ ಮಾರುಕಟ್ಟೆ ಪ್ರದೇಶ ಅಲ್ - ಮುಸಾಯಬ್ ನಲ್ಲಿ ಬಾಂಬ್ ಹೊತ್ತ ಮೋಟಾರು ವಾಹನ ಸಂಜೆ ಹಾದು ಹೋಗಿ ಈ ಘಟನೆ ನಡೆದಿದೆ ಎಂದು ತಿಳಿಸಿದೆ. ಈ ಸ್ಫೋಟದಲ್ಲಿ ಅನೇಕ ಅಂಗಡಿ ಮುಂಗಟ್ಟುಗಳಿಗೆ, ಸಮೀಪದ ಕಟ್ಟಡಗಳಿಗೆ, ಕಾರ್ ಮೊದಲಾದ ವಾಹನಗಳಿಗೆ ಹಾನಿಯಾಗಿದೆ. ಸ್ಫೋಟದಲ್ಲಿ ಗಾಯಗೊಂಡ 39 ಜನರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಈವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ ಇಂತಹ ಅನೇಕ ದಾಳಿಗಳಿಗೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಕಾರಣವಾಗಿದೆ.     2003 ರಿಂದ ಇರಾಕ್ ನಲ್ಲಿ ಅನೇಕ ಉಗ್ರರ ದಾಳಿಗಳು ನಡೆಯುತ್ತಿವೆಯಾದರೂ 2017 ರಲ್ಲಿ ಇರಾಕ್ ಭದ್ರತಾ ಪಡೆ   ಐಎಸ್ ಉಗ್ರರನ್ನು ಮಟ್ಟ ಹಾಕಿದ ನಂತರ ಪರಿಸ್ಥಿತಿ ಸುಧಾರಿಸಿದೆ.