ದೇಹ ತ್ಯಾಗ : 5 ಜನರನ್ನು ವಶಕ್ಕೆ ಪಡೆದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು

ದೇಹ ತ್ಯಾಗ : 5 ಜನರನ್ನು ವಶಕ್ಕೆ ಪಡೆದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು Body Sacrifice: 5 people taken into custody and admitted to Belgaum District Hospital

ಸಂಬರಗಿ 07: ಅನಂತಪೂರ ಗ್ರಾಮದ ಹೊರವಲಯದ ಇರಕರ ತೋಟದಲ್ಲಿ ಸೆ. 8ರಂದು ದೇಹ ತ್ಯಾಗ ಮಾಡುವ ಘಟನೆ ಒಂದಿನ ಮುಂಚಿತವಾಗಿ ಭಾನುವಾರ ಬೆಳಗಿನ ಜಾವ ಪೋಲಿಸ ಇಲಾಖೆ ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸೇರಿ ತೋಟದ ಮೇಲೆೆ ಜಾಲ ಬೀಸಿ ಇರಕರ ಕುಟುಂಬದ 5 ಜನರನ್ನು ವಶಕ್ಕೆ ಪಡೆದು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಒಳಪಡಿಸಿ ದೇಹ ತ್ಯಾಗ ನಿರ್ಧಾರಕ್ಕೆ ತಡೆಯೊಡ್ಡಿದ್ದಾರೆ. ಇದರಿಂದ ಗಡಿ ಭಾಗದ ಜನ ತಾಲುಕಾಡಳಿತ ಹಾಗೂ ಪೋಲಿಸ ಇಲಾಖೆಗೆ ಅಭಿನಂದಿಸಿದ್ದಾರೆ 

 ಕಳೆದ 15 ದಿನಗಳಿಂದ ಇರಕರ ಹಾಗೂ ಅವನ ಕುಟುಂಬ ಸೇರಿ 5 ಜನರು ರಾಮಪಾಲ ಮಹಾರಾಜರ ಶಿಷ್ಯರಿದ್ದು ಅವರ ಭಕ್ತಿಯಲ್ಲಿ ಲೀನರಾಗಿ ಸೆ. 8ರಂದು ದೇಹ ತ್ಯಾಗ ಮಾಡಲು ನಿರ್ಧರಿಸಿದ್ದರು. ಕಳೆದ ವಾರದಲ್ಲಿ ತಹಶೀಲ್ದಾರ ಸಿದರಾಯ ಬೊಸಗೆ, ತಾಲುಕಾಡಳಿತ, ಚಿಕ್ಕೋಡಿ ಉಪವಿಭಾಗದ ಅಸಿಸ್ಟೆಂಟ್ ಕಮಿಶನರ ಸುಭಾಸ ಸಂಪಗಾಂವೆ, ತಾಲೂಕಾ ಆರೋಗ್ಯಾಧಿಕಾರಿ ಬಸಗೌಡಾ ಕಾಗೆ ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ ಹಾಗೂ ಮಠಾಧೀಶರು ಸೇರಿ ಇರಕರ ಕುಟುಂಬವನ್ನು ಭೇಟಿ ಮಾಡಿ ಅವರ ಮನಸನ್ನು ಪರಿವರ್ತನೆ ಮಾಡಲು ಪ್ರಯತ್ನ ಮಾಡಿದರು. ಸ್ವಲ್ಪ ಮಟ್ಟಿಗೆ ನಿರ್ಧಾರ ಬದಲಾವಣೆ ಮಾಡಿದರೂ ನಂತರ ಮರುದಿನ ಅದೆ ರಾಗ ಅದೆ ಹಾಡು ನಡೆಸಿದರು. ಮರಳಿ ತೀರ್ಥ ಪ್ರಸಾದ ಮಾಡಿ ದೇಹ ತ್ಯಾಗ ಮಾಡಲು ನಿರ್ಧರಿಸಿದರು. ಇವರ ಮೇಲೆ ನಿಗಾ ಇಡಲು ಉಪ ತಹಸಿಲ್ದಾರ ಅಮಿತ ಢವಳೆಶ್ವರ ಕಂದಾಯ ನಿರಿಕ್ಷಕರು ವಿನೋದ ಕದಮ್ ಗ್ರಾಮ ಆಡಳಿತ ಅಧಿಕಾರಿ ನಾಗೇಶ ಖಾನಾಪುರೆ ಇವರು ದಿನ ನಿತ್ಯ ಪರೀಶೀಲನೆ ಮಾಡಿ ಅವರ ವಸತಿಗೆ ಪೋಲಿಸ್ ಬಿಗಿ ಭದ್ರತೆ ಒದಗಿಸಿದರು. ಆದರೆ ಅವರಲ್ಲಿ ಯಾವುದೆ ತರಹದ ಬದಲಾವಣೆ ತೋರಲಿಲ್ಲ. ಸೆಪ್ಟಂಬರ 8 ಸಮಿಪಿಸುತ್ತಿದ್ದಂತೆ ಭಾನುವಾರ ಬೆಳಗಿನ ಜಾವ ಜಾಲ ಬೀಸಿ ಅವರನ್ನು ವಶಕ್ಕೆ ಪಡೆದುಕೊಂಡರು. ಬೆಳಗಿನ ಜಾವ ನೂರಾರು ಗ್ರಾಮದ ಜನರು ಸರದಿ ಸಾಲಿನಲ್ಲಿ ನಿಂತು ನೋಡಲು ಬರುತ್ತಿದ್ದರು. 

ತುಕಾರಾಮ ಇರಕರ, ಪತ್ನಿ ಸಾವಿತ್ರಿ, ಮಗ ರಮೇಶ, ಸೊಸೆ ವೈಷ್ಣವಿ ಮಹಾರಾಷ್ಟ್ರದ ಕುಡನುರ ಗ್ರಾಮದ ಮಗಳು ಮಾಯಾ ಶಿಂದೆ ಇವರನ್ನು ಅನಂತಪೂರ ಪ್ರಾಥಮಿಕ ಆರೋಗ್ಯ ಕೆಂದ್ರ ವೈದ್ಯಾಧಿಕಾರಿ ಶಿವರಾಜ ಕರೋಲಿ ಇವರ ತಂಡ ವೈದ್ಯಕೀಯ ಪರೀಶೀಲನೆಗೆ ಒಳಪಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ದೇಹ ತ್ಯಾಗ ಸದ್ಯದ ಸ್ಥಿತಿಯಲ್ಲಿ ಇದೊಂದು ಮೂಢನಂಬಿಕೆಯಾಗಿದೆ. ಅವರು ಮನೋರೋಗಿ ಆಗಿದ್ದಾರೆ. ಎಂದು ಗ್ರಾಮಸ್ಥರು ಹೇಳಿದರು. ಸಿ.ಪಿ.ಆಯ್ ಸಂತೋಷ ಹಳ್ಳೂರ, ಪಿಎಸ್‌ಆಯ್ ಗಿರಮಲ್ಲಪ್ಪಾ ಉಪ್ಪಾರ, ಉಪತಹಸಿಲ್ದಾರ ಅಮಿತ ಡವಳೆಶ್ವರ, ಕಂದಾಯ ನೀರೀಕ್ಷಕರು ವಿನೋದ ಕದಮ, ನಾಗೇಶ ಖಾನಾಪುರ ಇವರ ಪ್ರಯತ್ನದಿಂದ 5 ಜನರ ಪ್ರಾಣ ಉಳಿಯಿತು. 

ಈ ಕುರಿತು ತಾಲುಕಾ ವೈದ್ಯಾಧಿಕಾರಿ ಬಸಗೌಡಾ ಕಾಗೆ ಇವರನ್ನು ಸಂಪರ್ಕಿಸಿದಾಗ ಇರಕರ ಅವರ ಕುಟುಂಬ ಮನೋರೋಗಕ್ಕೆ ತುತ್ತಾಗಿರಬಹುದು ಎಂದು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಿದರು. 

ಈ ಕುರಿತು ಖ್ಯಾತ ನ್ಯಾಯವಾದಿ, ಕನ್ನಡಪರ ಹೋರಾಟಗಾರ ಎಸ್‌.ಎಸ್‌. ಪಾಟಿಲ ಇವರನ್ನು ಸಂಪರ್ಕಿಸಿದಾಗ ದೇಹ ತ್ಯಾಗ ಮಾಡಲು ತಡೆಗಟ್ಟಲು ಯಶಸ್ವಿಯಾಗಿದ್ದಾರೆ. ಸಂಪೂರ್ಣ ಗುಣಮುಖ ಆಗುವವರೆಗೆ ಅವರನ್ನು ಬಿಡುಗಡೆ ಮಾಡಬಾರದೆಂದು ಹೇಳಿದರು. 

ಬೆಳಗಿನ ಜಾವ ಪೋಲಿಸ್ ಇಲಾಖೆ ಇರಕರ ಕುಟುಂಬಕ್ಕೆ ಪೋಲಿಸ ಸರಾ​‍್ಗವಲು ಇಟ್ಟು ಮನೆಯಲ್ಲಿ ಇರುವ ಎಲ್ಲಾ ದಾಖಲಾತಿ ಹಾಗೂ ಮೋಬೈಲನ್ನು ವಶಪಡಿಸಿಕೊಂಡರು ತಾಲೂಕಾ ಇಲಾಖೆ ಹಾಗೂ ಪೊಲೀಸ ಇಲಾಖೆ ಅವರ ಮನಸ್ಸು ಪರಿವರ್ತನೆ ಮಾಡಿ ಚಿಕಿತ್ಸೆಗಾಗಿ ಅಂಬುಲೆನ್ಸನಲ್ಲಿ ಬೆಳಗಾವಿಗೆ ರವಾನಿಸಿದರು. ತುಕಾರಾಮ ಇರಕರ ಅವರ ತಂದೆ ಪಾಂಡುರಂಗ ಇರಕರ ಎನಾದರು ಮಾಡಿ ನನ್ನ ಮಗನನ್ನು ಗುಣಮುಖರನ್ನಾಗಿಸಿ ಎಂದು ಆಳುವು ತೋಡಿಕೊಂಡರು. ಮನೆಯಲ್ಲಿ ರಾಮಪಾಲ ಮಾಹಾರಾಜ ಹೆಸರಿನಿಂದ ಕೂಗಿ ಅಂಬುಲೆನ್ಸನಲ್ಲಿ ಕುಳಿತರು.