ರಕ್ತದಾನ ಶ್ರೇಷ್ಠ ದಾನ: ಆಶೀಫ್
Blood donation is a noble deed: Aashif
ಶಿಗಾಂವಿ, ಆ. 26: ರಕ್ತದಾನ ಮಾಡುವುದರಿಂದ ಮೂವರು ಜೀವಗಳನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಪ್ರತಿವರ್ಷ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದ್ದು, ಬಡವರ ಪಾಲಿಗೆ ಇದು ಜೀವ ಸಂಜೀವಿನಿಯಾಗಿದೆ ಎಂದು ಮಹಬೂಬ್ ಯುವಕ ಮಂಡಳಿ ಅಧ್ಯಕ್ಷ ಆಶೀಫ್ ಮಾರಂಬೀಡ ಹೇಳಿದರು.
ಪಟ್ಟಣದ ಉರ್ದು ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಮಹಬೂಬ್ ಯುವಕ ಮಂಡಳಿ ಹಾಗೂ ಸಾರಾ ಹೆಲ್ತ್ ಕೇರ್, ಜಿಲ್ಲಾ ಆಸ್ಪತ್ರೆಯ ರಕ್ತದಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಮಹಮ್ಮದ್ ಪೈಗಂಬರ್ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೈಗಂಬರ್ ಅವರ ತತ್ವ-ಸಿದ್ಧಾಂತಗಳು ಪ್ರತಿಯೊಬ್ಬರೂ ಜೀವನದಲ್ಲಿ ಯಾರಿಗೂ ಕೆಡುಕು ಬಯಸಬಾರದು ಎಂಬ ಸಂದೇಶವನ್ನು ಸಾರುತ್ತವೆ. ಅವರು ಶಾಂತಿಯ ದೂತರಾಗಿದ್ದು, ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದು ಅಗತ್ಯ ಎಂದರು.
ಉಪಾಧ್ಯಕ್ಷ ಶಾರುಖ್ ಮೇಲ್ಮುರಿ ಮಾತನಾಡಿ, ಮಹಮ್ಮದ್ ಪೈಗಂಬರ್ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಗುರುಗಳಾಗಿದ್ದಾರೆ. ಅವರ ಜನ್ಮದಿನದ ಅಂಗವಾಗಿ ನಡೆಯುವ ಮೆರವಣಿಗೆಯಲ್ಲಿ ಡಿಜೆ ಬಳಸಿ ನೃತ್ಯ ಮಾಡುವುದಕ್ಕಿಂತ ರಕ್ತದಾನ ಶಿಬಿರ ಆಯೋಜಿಸಿ ಅಗತ್ಯವಿರುವವರಿಗೆ ರಕ್ತ ಒದಗಿಸುವುದು ಪೈಗಂಬರ್ ಅವರ ತತ್ವ-ಸಿದ್ಧಾಂತಗಳಿಗೆ ಅನುಗುಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹಬೂಬ್ ಯುವಕ ಮಂಡಳಿ ಸದಸ್ಯರಾದ ಮೊಹಮ್ಮದ್ ಜಾಫರ್ ಚಿಲ್ಲೂರ್, ಅಬ್ದುಲ್ ರಹೀಮ್ ನಾಯಕ, ಗೌಸ್ ಖಾನ್ ಮಿಟ್ಟೆಖಾನ್, ಅಬ್ದುಲ್ ವಾಹಿದ್ ಮುಗಳಿಕಟ್ಟಿ, ಜಿಲಾನಿ ಮಾರಂಬೀಡ, ನೂರುಲ್ಲಾ ಖಾಜೇಖಾನ್, ಖಾಸಿಂ ಟಪಾಲ್, ಮಲಿಕ್ ರಿಹಾನ್ ಕಾರಡಗಿ ಸೇರಿದಂತೆ ಸಾರಾ ಹೆಲ್ತ್ ಕೇರ್ ಸದಸ್ಯರು ಹಾಗೂ ಜಿಲ್ಲಾ ಆಸ್ಪತ್ರೆಯ ರಕ್ತದಾನ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 