ಬ್ಯಾಂಕಿನ ಗ್ರಾಹಕರಿಗೆ ರಕ್ತದಾನ ಶಿಬಿರ
Blood donation camp for bank customers
ಸವಣೂರ 04 : ಬ್ಯಾಂಕಿನ ಗ್ರಾಹಕರಿಗೆ ರಕ್ತದಾನ ಶಿಬಿರದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ರಕ್ತದಾನ ಮಾಡಲು ಪ್ರೇರಣೆ ನೀಡಲು ರಕ್ತದಾನ ಶಿಬಿರ ಆಯೋಜನೆ ಮಾಡಲಾಯಿತು ಎಂದು ಎಸ್ ಬಿ ಐ ಬ್ಯಾಂಕ್ ಮ್ಯಾನೇಜರ್ ಸೋನಾಲಿ ಪ್ರಿಯದರ್ಶಿನಿ ಹೇಳಿದರು.
ಇಲ್ಲಿನ ಎಸ್ ಬಿ ಐ ಬ್ಯಾಂಕಿನಲ್ಲಿ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ರಕ್ತ ಕೇಂದ್ರ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ರಕ್ತ ಶೇಖರಣಾ ಘಟಕ, ಸವಣೂರ ಹಾಗೂ ಎಸ್ ಬಿ ಐ ಸವಣೂರ ಶಾಖೆ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗೆ ಚಾಲನೆ ನೀಡಿ ಅವರು ಮಾತನಾಡಿದರು.
ಎಸ್‌ಬಿಐ ಬ್ಯಾಂಕ್ ಸ್ಥಾಪನೆಯಾಗಿ 70 ವರ್ಷಗಳು ಆಗಿದ್ದು,ಸವಿನೆನಪಿಗಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಗ್ರಾಹಕ ಸ್ನೇಹಿ ಬ್ಯಾಂಕ್ ನಮ್ಮದಾಗಿದ್ದು, ಗ್ರಾಹಕರ ಆರೋಗ್ಯದ ಕಾಳಜಿ ಪ್ರಯುಕ್ತವಾಗಿ ರಕ್ತದಾನ ಶಿಬಿರ ಮಾಡಲಾಯಿತು.ಗ್ರಾಹಕರು ಸದಾ ಆರೋಗ್ಯಯುತವಾಗಿ ಇರಲಿ ಎಂದು ಶುಭ ಹಾರೈದರು.ಇದೇ ಅವಧಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಬ್ಯಾಂಕ್ ಸಿಬ್ಬಂದಿಗಳಿಗೆ ಹಾಗೂ ಗ್ರಾಹಕರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಯಿತು. ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ನೀಡಲಾಯಿತು. ಬ್ಯಾಂಕ್ ಮ್ಯಾನೇಜರ್ ಸೋನಾಲಿ ಪ್ರಿಯದರ್ಶಿನಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸವಣೂರ ತಾಲ್ಲೂಕು ಘಟಕದಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಡಾ.ಸುಧಾ,ಹಿರಿಯ ತಾಂತ್ರಿಕ ಅಧಿಕಾರಿ,ಬಸವರಾಜ ಕಮತದ,ರಕ್ತ ಶೇಖರಣಾ ಘಟಕದ ತಾಂತ್ರಿಕ ಅಧಿಕಾರಿ ಮಾಲತೇಶ ಹೊಳೆಮ್ಮನವರ,ರೆಡ್ ಕ್ರಾಸ್ ಸಂಸ್ಥೆಯ ನಿಂಗಪ್ಪ ಆರೇರ,ಕರವೇ ತಾಲ್ಲೂಕ ಅಧ್ಯಕ್ಷರಾದ ಪರಶುರಾಮ ಈಳಗೇರ,ನಾಗಪ್ಪ ಉಪ್ಪಿನ,ಬಸವರಾಜ ಬಡಿಗೇರ,ವೆಂಕಟೇಶ ಕರೆಕಲ್ಲ,ಯಾಶೀನಖಾನ ಬಂಕಾಪುರ,ದೀಪಕ ರಾಸಿನಕರ,ರಮೇಶಗೌಡ್ರ ಪಾಟೀಲ,ಶಿವಕುಮಾರ ಹಿರೇಮಠ, ಯಲ್ಲಪ್ಪ ಮಡಿವಾಳರ,ಎಸ್, ಅನಿತಾ ಕರಡಿಗುಡ್ಡ, ಸಿದ್ದು ಟಿ ಹೆಚ್ ಸೇರಿದಂತೆ ಅನೇಕರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 