ವಿಶ್ವ ಬಂಧುತ್ವ ದಿನದ ಅಂಗವಾಗಿ ರಕ್ತದಾನ ಶಿಬಿರ
Blood donation camp as part of World Fraternity Day
ರಾಯಬಾಗ, 25 ; ಮನುಷ್ಯನ ವಿಚಾರ ಶುದ್ಧ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ದೈಹಿಕವಾಗಿ ಸದೃಢವಾಗಿರಲು ಸಾಧ್ಯವೆಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಯಬಾಗ ಕೇಂದ್ರ ಮುಖ್ಯಸ್ಥೆ ಪುಷ್ಪಾ ಅಕ್ಕನವರು ಹೇಳಿದರು.
ಸೋಮವಾರ ಪಟ್ಟಣದ ಬಾನೆ ಆಸ್ಪತ್ರೆಯ ಹಿಂಭಾಗದ ಬ್ರಹ್ಮಾಕುಮಾರಿಸ್ ಸಭಾಂಗಣದಲ್ಲಿ ರಾಯಬಾಗ ಸಾರ್ವಜನಿಕ ಆಸ್ಪತ್ರೆ, ಬೆಳಗಾವಿ ಬೀಮ್ಸ್ ಸಹಯೋಗದಲ್ಲಿ ರಾಜಯೋಗಿನಿ ದಾದಿ ಪ್ರಕಾಶಮಣಿ ಜೀ ಅವರ ಸ್ಮರಣಾರ್ಥ ವಿಶ್ವ ಬಂಧುತ್ವ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ರಹ್ಮಕುಮಾರಿಸ್ ಕೇಂದ್ರಗಳಿಂದ 1 ಲಕ್ಷ ಯುನಿಟ್ ರಕ್ತ ಸಂಗ್ರಹ ಮಾಡಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ರಾಯಬಾಗ ಸಮುದಾಯ ಆರೋಗ್ಯ ಕೇಂದ್ರ ವೈದ್ಯ ಡಾ.ಮಹಾಂತೇಶ ಲೋಠೆ ಮಾತನಾಡಿ, ರಕ್ತದಾನ ಮಾಡುವುದರಿಂದ ಅಪಘಾತ, ಶಸ್ತ್ರಚಿಕಿತ್ಸೆ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಸಂಕಷ್ಟದಲ್ಲಿ ಇರುವ ಜೀವಗಳನ್ನು ಉಳಿಸಲು ಸಾಧ್ಯ. ರಕ್ತದಾನ ದಿಂದ ಒಂದು ಜೀವ ಉಳಿಸುವುದರ ಜೊತೆಗೆ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಹೃದಯ ರೋಗದ ಅಪಾಯ ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ರಕ್ತದಾನ ಮಾಡಬೇಕೆಂದರು.
ಬಿಮ್ಸ್ ಬ್ಲಡ್ ಬ್ಯಾಂಕ್‌ನ ಡಾ.ಜಾರ್ಜ, ಬಿ.ಎಮ್.ಮಾಳಿ, ನಾರಾಯಣ ಮೇತ್ರಿ, ಸಚೀನ ದೇವಕುಳೆ, ನಾಜೀಯಾ ಜಿನ್ನಾಬಡೆ, ಶ್ರೀಶೈಲ ಶಿರೂರ, ಡಿ.ಎಲ್.ಮಿರ್ಜೆ, ವಿದ್ಯಾ ಪೂಜೇರಿ, ತಬಸೀಮ್ ಮೊಮಿನ, ಹೇಮಾ ಕಡ್ಡಿ, ಅಣ್ಣಪ್ಪ ಮೇತ್ರಿ, ಕಸ್ತೂರಿ ಸಂಕಪಾಳ, ಮಾಲಾ ಮೇತ್ರಿ, ಸೋನಕ್ಕಾ ಜಾಧವ, ಅರುಣ ಮೇತ್ರಿ, ತಾರಾ ಭಿರಡಿ, ಅಭಿಷೇಕ, ವೈಶಾಲಿ, ರುದ್ರಮ್ಮ ಹಾಗೂ ಬಿಮ್ಸ್ ಬ್ಲಡ್ ಬ್ಯಾಂಕ್, ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಮತ್ತು ರಕ್ತದಾನಿಗಳು ಪಾಲ್ಗೊಂಡಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 