ಬಸವ ಜಯಂತಿ ಹಾಗೂ ಗೋಣಿ ಬಸವೇಶ್ವರ ರಥೋತ್ಸವದ ಅಂಗವಾಗಿ ರಕ್ತದಾನ ಶಿಬಿರ
Blood donation camp as part of Basava Jayanti and Goni Basaveshwara Chariot Festival
ಸವಣೂರ 23 : ಬಸವ ಜಯಂತಿ ಹಾಗೂ ಗೋಣಿ ಬಸವೇಶ್ವರ ರಥೋತ್ಸವದ ಅಂಗವಾಗಿ ಕಲಿವಾಳ ಗ್ರಾಮಸ್ಥರು, ಪ್ರಾಥಮಿಕ ಆರೋಗ್ಯ ಕೇಂದ್ರ ಕಡಕೋಳ, ಹಿಮ್ಸ್ ರಕ್ತನಿಧಿ ಕೇಂದ್ರ ಹಾವೇರಿ ಹಾಗೂ ತಾಲೂಕು ಆಸ್ಪತ್ರೆ ರಕ್ತ ಶೇಖರಣಾ ಘಟಕ ಸವಣೂರ ಇವರ ಸಂಯುಕ್ತ ಆಶ್ರಯದಲ್ಲಿ ಕಲಿವಾಳ ಗ್ರಾಮದಲ್ಲಿ 4ನೇ ಬಾರಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರಿ್ಡಸಲಾಗಿತ್ತು. ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಕಲಿವಾಳ ಯಲ್ಲಾಲಿಂಗೇಶ್ವರ ಮಹಾಸ್ವಾಮಿಗಳು ಜಗತ್ತಿಗೆ ಸಮಾನತೆ, ಮಾನವೀಯತೆಯ ತತ್ವವನ್ನು ಜಗತ್ತಿಗೆ ಸಾರಿ ಹೇಳಿದ ಬಸವಣ್ಣನವರು,12 ನೇ ಶತಮಾನದಲ್ಲಿ ಕಾಯಕವೇ ಕೈಲಾಸ ಎಂಬ ತತ್ವದಡಿ ಬದುಕಿದವರು.
"ಸ್ವಚ್ಛತೆ, ಕಾಯಕ, ಸಮಾನತೆ ಇವು ಬಸವಣ್ಣ ಕಂಡ ಸಮಾಜದ ಮೌಲ್ಯಗಳೇ ಇಂದಿನ ಸಮಗ್ರ ಆರೋಗ್ಯದ ಅಡಿಪಾಯ". ಆದ್ದರಿಂದ ಎಲ್ಲ ಯುವಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ವ್ಯಾಯಾಮ, ಯೋಗವನ್ನು ರೂಡಿಸಿಕೊಳ್ಳಬೇಕು, ಮಿತವಾದ ಆಹಾರ ಸೇವನೆ ಅದರ ಜೊತೆಗೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಮತ್ತೊಂದು ಜೀವಕ್ಕೆ ಜೀವದಾನ ಮಾಡಿದ ಪುಣ್ಯ ಬರುತ್ತದೆ, ಹಾಗೆ ನಮ್ಮ ದೇಹದಲ್ಲಿ ಕೂಡಾ ಹೊಸ ರಕ್ತ ಉತ್ಪತ್ತಿಯಾಗಿ ಹೃದಯಾಘಾತ, ಪಾರ್ಶ್ವವಾಯು, ಬಿಪಿ, ಶುಗರ್ ಹಾಗೂ ಕ್ಯಾನ್ಸರ್ ತರಹದ ರೋಗಗಳು ಮನುಷ್ಯನಿಗೆ ಬರುವ ಪ್ರಮಾಣ ಗಣನೀಯವಾಗಿ ಕಡಿಮೆ ಆಗುತ್ತದೆ ಎಂದು ವೈದ್ಯಕೀಯ ವಿಜ್ಞಾನ ಸಂಶೋಧನೆಗಳ ಮೂಲಕ ಖಚಿತಪಡಿಸಿದ್ದಾರೆ ಎಂದು ಹೇಳಿದರು.
ಶಿಬಿರದಲ್ಲಿ ಒಟ್ಟು 25 ಜನರು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಆಯೋಜಕರಾದ ಶಿದ್ದು ಶೀಲವಂತರ, ಬಸವರಾಜ ನವಲಿ, ವೀರುಪಾಕ್ಷಪ್ಪ ಕಲ್ಲೂರ, ನೀಲಪ್ಪ ದೊಡ್ಡಮನಿ, ಸಿದ್ಧಪ್ಪ ವಡವಿ, ರಾಜು ಮಠಪತಿ, ಕಡಕೋಳ ಆರೋಗ್ಯ ಕೇಂದ್ರದ ಸಿಬ್ಬಂದಿ ಶರಣಪ್ಪ ಕಲ್ಲಮ್ಮನವರ, ಎಂ ವೈ ಪಟೇಲ್, ಹಾವೇರಿ ರಕ್ತ ಭಂಡಾರದ ಸಿಬ್ಬಂದಿಗಳು ಸಿದ್ದು ಹಿರಗಣ್ಣನವರ ಪ್ರವೀಣ ಪಾಟೀಲ, ರೋಜ ನದಾಫ್, ಮಹಾಂತೇಶ ಹೊಳೆಮ್ಮನವರ ಶಾಲಾ ಮುಖ್ಯೋಪಾಧ್ಯಾಯ ರಾಜು ರಜಪೂತ ಭಾಗವಹಿಸಿದ್ದರು. ರಕ್ತದಾನ ಮಾಡಿದವರಿಗೆ ಸಿದ್ಧಪ್ಪ ವಡವಿ ಇವರು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಶರಣಪ್ಪ ಕಲ್ಲಮ್ಮನವರ ಕಾರ್ಯಕ್ರಮ ನಿರೂಪಿಸಿದರು.
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು 