ಗುರುಸ್ಮರಣೆಯಲ್ಲಿ ರಕ್ತದಾನ ಶಿಬಿರ
Blood Donation Camp in Memory of the Guru
ಲೋಕದರ್ಶನ ವರದಿ
ಸಿಂದಗಿ 07: ನಗರದ ಮಾಂಗಲ್ಯ ಭವನದಲ್ಲಿ ಪ್ರಾತಃಸ್ಮರಣೀಯ ಎಚ್.ಟಿ. ಕುಲಕರ್ಣಿ ಗುರುಗಳ ಗುರುಸ್ಮರಣೆ ಕಾರ್ಯಕ್ರಮದ ನಿಮಿತ್ತ ಶಿಷ್ಯ ಬಳಗದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಶೋಕ ಮನಗೂಳಿ, ಅಕ್ಷರ ಕಲಿಸಿ ಬದುಕಿನ ದಾರಿ ತೋರಿದ ಶಿಕ್ಷಕ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಮಾರ್ಗದರ್ಶಕ ಎಚ್.ಟಿ. ಕುಲಕರ್ಣಿ ಗುರುಗಳ ಸ್ಮರಣೆ ಅಕ್ಷರಗಳಿಗಿಂತಲೂ ಮಿಗಿಲಾದ ಬದುಕಿನ ಪಾಠವಾಗಿದೆ ಎಂದರು.
ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ; ವಿದ್ಯಾರ್ಥಿಗಳ ಬದುಕಿಗೆ ದಿಕ್ಕು ತೋರಿಸುವ ದಾರೀದೀಪ. ಕುಲಕರ್ಣಿ ಗುರುಗಳು ತಮ್ಮ ಸೇವೆಯ ಮೂಲಕ ಈ ಅರ್ಥವನ್ನು ಸಾರ್ಥಕಗೊಳಿಸಿದ್ದಾರೆ. ಅವರ ಶಿಷ್ಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು, ಅವರ ಯಶಸ್ಸಿನ ಹಿಂದೆ ಗುರುಗಳ ಮಾರ್ಗದರ್ಶನ ಪ್ರಮುಖ ಶಕ್ತಿಯಾಗಿದೆ ಎಂದು ಹೇಳಿದರು.
ಗುರುಗಳ ಹೆಸರು ಸಿಂದಗಿ ನಗರದಲ್ಲಿ ಶಾಶ್ವತವಾಗಿ ಉಳಿಯುವಂತೆ ಸ್ಮಾರಕ ಭವನ ಹಾಗೂ ಸೋಂಪುರ ರಸ್ತೆಗೆ ಅವರ ಹೆಸರಿಡುವ ಕುರಿತು ಶಿಷ್ಯ ಬಳಗದ ಮನವಿಯನ್ನು ಪರಿಗಣಿಸಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ಗುರುಸ್ಮರಣೆಯ ಅಂಗವಾಗಿ ವಿಜಯಪುರ ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ದೇಹದಾನ, ಅಂಗಾಂಗ ದಾನ ಹಾಗೂ ನೇತ್ರದಾನ ಶಿಬಿರವೂ ನಡೆಯಿತು. 30ಕ್ಕೂ ಅಧಿಕ ಮಂದಿ ದೇಹದಾನ, 20ಕ್ಕೂ ಅಧಿಕ ಮಂದಿ ನೇತ್ರದಾನ ಹಾಗೂ 10ಕ್ಕೂ ಅಧಿಕ ಮಂದಿ ಅಂಗಾಂಗ ದಾನಕ್ಕೆ ನೋಂದಾಯಿಸಿಕೊಂಡರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 87ಕ್ಕೂ ಅಧಿಕ ಗುರುಗಳ ಶಿಷ್ಯ ಬಳಗದ ಸದಸ್ಯರು ಹಾಗೂ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 