ರಕ್ತದಾನ ಶಿಬಿರ: ರಕ್ತದಾನ ಮಹಾದಾನ ಡಾ. ಶೈಲೇಂದ್ರ ಬೆಲ್ದಾಳೆ

ರಕ್ತದಾನ ಶಿಬಿರ: ರಕ್ತದಾನ ಮಹಾದಾನ  ಡಾ. ಶೈಲೇಂದ್ರ ಬೆಲ್ದಾಳೆ Blood Donation Camp: Blood Donation Mahadan Dr. Shailendra Beldale

51 ಜನ ರಕ್ತದಾನ ಮಾಡಿದರು 

ಬೀದರ್  30: ರಕ್ತದಾನವು ಅತ್ಯುತ್ತಮವಾದ ದಾನವಾಗಿದೆ, ಏಕೆಂದರೆ ಇದು ಇನ್ನೊಬ್ಬರ ಜೀವವನ್ನು ಉಳಿಸುವ ಒಂದು ಶ್ರೇಷ್ಠ ಕಾರ್ಯವಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.  

ಬೀದರ್ ನಗರದ ಶಾಸಕರ ಕಚೇರಿಯಲ್ಲಿ ಬೀದರ್ ದಕ್ಷಿಣ ಯುವ ಮೋರ್ಚಾ ವತಿಯಿಂದ ದೇಶದ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನ  ಪ್ರಯುಕ್ತ ಸೇವಾ ಪಾಕ್ಷಿಕ ಅಂಗವಾಗಿ ಹಾಗೂ ಶಾಸಕರ ಜನ್ಮದಿನದ ಅಂಗವಾಗಿ ಏರಿ​‍್ಡಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  

ನಮ್ಮ ಪಕ್ಷದ ಆದೇಶದಂತೆ  ದೇಶದ ಹೆಮ್ಮೆಯ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕ ಅಂಗವಾಗಿ ಕ್ಷೇತ್ರದಾದ್ಯಂತ ಸೆ. 17 ರಿಂದ  ಅ. 2ರ ವರೆಗೆ ಸೇವಾ ಪಾಕ್ಷಿಕ ಅಂಗವಾಗಿ ಸ್ವಚ್ಛತೆ, ಸಸಿನೆಡುವುದು, ರಕ್ತದಾನ ಶಿಬಿರ ಸೇರಿ ಅನೇಕ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಮುಖಂಡರು ಕಾರ್ಯಕರ್ತರು, ಸಾರ್ವಜನಿಕರು ಹುಮ್ಮಸ್ಸಿನಿಂದ ಪಾಲ್ಗೊಂಡು ಅತ್ಯಂತ ಶ್ರಮ ವಹಿಸಿ ಹಗಲಿರುಳು ಶ್ರಮಿಸುತ್ತಿರುವುದು ಅತ್ಯಂತ ಸಂತಶ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.  

ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ  ಜನರ ಜೀವವನ್ನು ಉಳಿಸಬಹುದು, ಏಕೆಂದರೆ ದಾನ ಮಾಡಿದ ರಕ್ತವನ್ನು ಅಗತ್ಯವಿರುವವರಿಗೆ ನೀಡಲಾಗುತ್ತದೆ. ರಕ್ತದಾನದಿಂದ  ಒಂದು ಕುಟುಂಬದ ಜೀವವನ್ನು ಉಳಿಸಬಹುದು ಮತ್ತು ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ, ಆದ್ದರಿಂದ ಇದು ಮಹತ್ವದ ದಾನ ಎಂದು ಪರಿಗಣಿಸಲಾಗಿದೆ ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಇನ್ನೋಬ್ಬರ ಜೀವ ಉಳಿಸಬೇಕು ಎಂದು ಮನವಿ ಮಾಡಿದರು. 

ಪಕ್ಷದ ಮುಖಂಡರು,  ಕಾರ್ಯಕರ್ತರು, ಅಭಿಮಾನಿಗಳು ಸೇರಿಕೊಂಡು  ಪ್ರತಿ ವರ್ಷ ಸೆ.30ರಂದು  ಪ್ರೀತಿಪೂರ್ವಕವಾಗಿ, ಗೌರವ ಹಾಗೂ ಅಭಿಮಾನದಿಂದ ನನ್ನ  ಜನ್ಮ ದಿನ ಕಾರ್ಯಕ್ರಮವನ್ನು  ಸಂಘಟಿಸುತ್ತಿದ್ದರು. ಆದರೆ ಈ ವರ್ಷ ಅತಿವೃಷ್ಟಿಯು ದೊಡ್ಡ ಅನಾಹುತಕ್ಕೆ ಕಾರಣವಾಗಿದೆ. ಜಿಲ್ಲೆ ರೈತರು, ಜನಸಾಮಾನ್ಯರು  ತೊಂದರೆಯಲ್ಲಿದ್ದಾರೆ. ಈ ಕಷ್ಟ ಕಾಲದಲ್ಲಿ ಜನ್ಮ ದಿನ ಆಚರಣೆ ಮಾಡುವುದು, ಮಾಡಿಕೊಳ್ಳುವುದು ಸರಿಯಿಲ್ಲ. ನಾವೆಲ್ಲರೂ ಈ ಸ್ಥಿತಿಯಲ್ಲಿ ರೈತರು, ಸಂಕಷ್ಟದಲ್ಲಿರುವ ಜನರೊಂದಿಗೆ ನಿಂತು ಅವರಿಗೆ ಧೈರ್ಯ, ಆತ್ಮಸ್ಥೈರ್ಯ ತುಂಬಬೇಕಿದೆ. ಸಂಕಷ್ಟದಲ್ಲಿ ಇರುವವರಿಗೆ ಕೈಲಾದಷ್ಟು ಸಾಥ್ ನೀಡಬೇಕಾಗಿದೆ ಹೀಗಾಗಿ ರಕ್ತದಾನ ಶಿಬಿರ ಏರಿ​‍್ಡಸಲಾಗಿದೆ ಎಂದರು. 

ಶಾಸಕರು ಬೆಳಿಗ್ಗೆ ಸೀಮಿ ನಾಗಣ್ಣ, ಚಳಕಾಪುರ ಹನುಮಾನ ದೇವಸ್ಥಾನ, ಬಾಲಮ್ಮ ತಾಯಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಹಾಗೂ ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದರು ಬಳಿಕ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು.  

ರಕ್ತದಾನ ಶಿಬಿರದಲ್ಲಿ ಶಾಸಕರ ಮಗ ಹಾಗೂ ಯುವ ಮೋರ್ಚಾ ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು  ಸಾರ್ವಜನಿಕರು ಸೇರಿ ಸುಮಾರು 51 ಜನ ರಕ್ತದಾನ ಮಾಡುವ ಮೂಲಕ ಸಮಾಜದ ಪ್ರತಿಯೊಬ್ಬರಿಗೂ ಮಾದರಿಯಾದರು. 

ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ  ಬೆಲ್ದಾಳೆ ಅವರ ಮಾಧ್ಯಮ ಸಂಚಾಲಕ, ಸಹಾಯಕ ನಾಗೇಶ ಸಿದ್ದಾ.