ಶಿಕ್ಷಣತಜ್ಞ ಡಾ.ಕೋರೆಯವರ ಜನ್ಮದಿನೋತ್ಸವ
ಹಾವೇರಿ, 01: ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಶಿಕ್ಷಣ ತಜ್ಞ, ಸಮಾಜ ಚಿಂತಕ ಡಾ|| ಪ್ರಭಾಕರ ಬಿ. ಕೋರೆಯವರ 72 ನೇ ಜನ್ಮದಿನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದನ್ವಯ ಸಿಂಧಗಿಮಠದ 30 ಕ್ಕೂ ಹೆಚ್ಚು ಪಾಠಶಾಲಾ ವಿದ್ಯಾಥರ್ಿಗಳಿಗೆ ಹಾಸಿಗೆಗಳನ್ನು, ಸಿಂಧಗಿ ಶಾಂತವೀರೇಶ್ವರ ಆಯುವರ್ೇದ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೇಡ್ ಹಾಗೂ ಹಾಲನ್ನು ವಿತರಿಸಲಾಯಿತು. ನಂತರ ಕಾಲೇಜು ಆವರಣದಲ್ಲಿ ವಿಶ್ವದಾರ ರಕ್ತ ಬಂಢಾರ ಹಾವೇರಿ ಇವರ ಆಶ್ರಯದಲ್ಲಿ 215 ವಿದ್ಯಾಥರ್ಿಗಳ ರಕ್ತಗುಂಪು ಪತ್ತೆಹಚ್ಚುವಿಕೆ ಹಾಗೂ ಸಸಿ ನೆಡುವ ಕಾರ್ಯಕ್ರಮಗಳು ಜರುಗಿದವು.
ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ ಮಾತನಾಡುತ್ತಾ ಶಿಕ್ಷಣ ಕ್ಷೇತ್ರವನ್ನು ಅತ್ಯಂತ ಪ್ರೀತಿಯಿಂದ ಮತ್ತು ಗೌರವದಿಂದ ಕಂಡ ಶ್ರೇಷ್ಠ ವ್ಯಕ್ತಿತ್ವ ಡಾ|| ಪ್ರಭಾಕರ ಕೋರೆಯವರದಾಗಿದೆ. ಸಂಸ್ಥೆಯ ಉದ್ದೇಶಗಳನ್ನು ಸಂಪೂರ್ಣವಾಗಿ ವಿಸ್ತರಿಸುವಲ್ಲಿ ಅವರು ಪಟ್ಟ ಶ್ರಮ ಸಣ್ಣದೇನಲ್ಲ. ಅವರೊಟ್ಟಿಗೆ ಹಗಲಿರುಳು ಶ್ರಮಿಸುತ್ತಿರುವ ಕೆ.ಎಲ್.ಇ. ಪರಿವಾರದ ಎಲ್ಲ ಸದಸ್ಯರು ವಿಶ್ವಾಸಪೂರ್ವಕವಾಗಿ ಕಾಯರ್ೋತ್ಸಾಹ ಮೆರೆಯುತ್ತಿರುವುದು ಆದರ್ಶಪ್ರಾಯವಾಗಿದೆ. ವಯಸ್ಸು ಏರಿದಷ್ಟು ಮಾಡುವ ಕಾರ್ಯದಲ್ಲಿ ಪಕ್ವತೆಯನ್ನು ಕಾಣಬಹುದಾಗಿದೆ. ಶಿಕ್ಷಣ ಕ್ಷೇತ್ರದ ಜೊತೆಗೆ ಸಹಕಾರಿ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹೀಗೆ ಸಾಲು ಸಾಲು ರಂಗಗಳು ಅವರ ಹೆಜ್ಜೆಯ ಗುರುತುಗಳನ್ನು ಮೆಲುಕು ಹಾಕುತ್ತಿವೆ. ಅಮಿತ ಉತ್ಸಾಹದೊಂದಿಗೆ ಇನ್ನೂ ಏನಾದರು ಹೊಸದನ್ನು ಮಾಡಬೇಕೆನ್ನುವ ಅವರ ಉತ್ಸಾಹಕ್ಕೆ ನಾವುಗಳೆಲ್ಲ ಹೆಗಲಾಗಿ ದುಡಿಯಬೇಕಿದೆ. ವಿದ್ಯಾಥರ್ಿಗಳಾದವರು ಇಂತಹ ಮಹಾನ್ ಸಾಧಕೆ ಜನ್ಮದಿನದ ಸಂಭ್ರಮದಲ್ಲಿ ಹಲವು ವಿಧಾಯಕ ಕಾರ್ಯಗಳನ್ನು ಜರುಗಿಸುತ್ತಿರುವುದು ಸಂತೋಷ ತಂದಿದೆ ಎಂದರು.
ಯೂಥ್ ರೆಡ್ ಕ್ರಾಸ್ ಅಧಿಕಾರಿ ಪ್ರೊ. ಎಚ್. ಐ. ಖತೀಬ ಕಾರ್ಯಕ್ರಮ ಆಯೋಜಿಸಿದ್ದರು. ಪ್ರೊ. ಜಿ. ಎಮ್. ಯಣ್ಣಿ, ಪ್ರೊ. ಡಿ. ಎ. ಕೊಲ್ಲಾಪುರೆ, ಡಾ|| ಜಗದೀಶ ಹೊಸಮನಿ, ರೆಡ್ಕ್ರಾಸ್ ಸಹಅಧಿಕಾರಿ ಪ್ರೊ. ಜಿ. ಕೆ. ಮಂಕಣಿ, ಡಾ|| ಎಮ್. ಜಿ. ಯರನಾಳ, ವಿದ್ಯಾಥರ್ಿ ಕಲ್ಯಾಣ ಅಧಿಕಾರಿ ಡಾ|| ಈ. ಬಿ. ಸೇಡಂಕರ, ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ಡಾ|| ಎಮ್. ಪಿ. ಕಣವಿ, ಪ್ರೊ. ಬಿ. ಮಲ್ಲಿಕಾಜರ್ುನಪ್ಪ, ಪ್ರೊ. ಮಹೇಶ ಬೆಂಡಿಗೇರಿ, ವಿದ್ಯಾಥರ್ಿಗಳು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ಬಸ್ ಸೌಕರ್ಯಕ್ಕೆ ಆಗ್ರಹಿಸಿ ಮನವಿ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 