ಬಸವರಾಜ ಕಟ್ಟಿಮನಿ ಜನ್ಮಶತಮಾನೋತ್ಸವ ಕಥೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು: ಡಾ.ಅಮರೇಶ

ಬೆಳಗಾವಿ, 05: ಕಥೆಗಳು ಬೇರೆ ಬೇರೆ ಸೈದ್ಧಾಂತಿಕ ನೆಲೆಯಲ್ಲಿ ಹುಟ್ಟಿಕೊಂಡಿರುತ್ತವೆ. ಆದ್ದರಿಂದ ಪ್ರತಿಯೊಬ್ಬರು ಕಥೆಯನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ಹಂಪಿ ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕರು ಕಾದಂಬರಿಕಾರರಾದ ಡಾ.ಅಮರೇಶ ನುಗಡೋಣಿ ಅವರು ಹೇಳಿದರು.

ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ವತಿಯಿಂದ ನಗರದ ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ಶನಿವಾರ(ಅ.5) ಏರ್ಪಡಿಸಲಾಗಿದ್ದ ಬಸವರಾಜ ಕಟ್ಟಿಮನಿ ಅವರ ಜನ್ಮಶತಮಾನೋತ್ಸವ  ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡದಲ್ಲಿ ವಿಭಿನ್ನ ಸೈದ್ಧಾಂತಿಕ ನೆಲೆಯಲ್ಲಿ ಓದುವ, ಬರೆಯುವ ಪದ್ದತಿ ಹಾಗೂ ವಿಮಶರ್ೆ ನಡೆಯುತ್ತಿದೆ. ಕಾದಂಬರಿಯಲ್ಲಿ ದೇಶಿಯ ನೆಲೆಯಲ್ಲಿ ಕಥೆಗಳನ್ನು ವಿರ್ಮಶೆ ಮಾಡುವ ಮಾದರಿ ಬೆಳೆದಿದೆ. ನಂತರದ ದಿನಗಳಲ್ಲಿ ರೂಪನಿಷ್ಟ ಮತ್ತು ಸ್ತ್ರೀವಾದಿ ನೆಲೆಯಿಂದ ಕಥೆಯನ್ನು ವಿಮಶರ್ೆ ಮಾಡುವುದು ಕಂಡುಬಂದಿದೆ ಎಂದು ತಿಳಿಸಿದರು.

ಪ್ರತಿಯೊಬ್ಬ ವಿಮರ್ಶಕರು ಮತ್ತು ಕಥೆಗಾರರಲ್ಲಿ ಸೈದ್ಧಾಂತಿಕ ಬದ್ಧತೆ ಇರವುದು ಹೆಮ್ಮೆಯ ವಿಷಯ. ಈ ತೆಲೆಮಾರಿನ ಕಾದಂಬರಿಕಾರರಲ್ಲಿ ಸರಳವಾಗಿ ಬಹಳ ಲಘುವಾಗಿ ಹಾಗೂ ಹಾಸ್ಯ ದೃಷ್ಟಿಯಲ್ಲಿ ಕಥೆಗಳು ಹೊರಹೊಮ್ಮಿವೆ. ಉತ್ತರ ಕನರ್ಾಟಕ ಮತ್ತು ದಕ್ಷಿಣ ಕನರ್ಾಟಕ ಲೇಖಕರ ಬರವಣಿಗೆಯಲ್ಲಿ ಬಹಳಷ್ಟು ವ್ಯತ್ಯಾಸವಿದೆ ಎಂದು ಡಾ.ಅಮರೇಶ್ ನುಗಡೋಣಿ ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮಲ್ಲಿಕಾಜರ್ುನ ಹಿರೇಮಠ ಅವರು, ಕಥೆಗಳು ಸಂವೇದನೆಗಳನ್ನು ಜಾಗೃತಿಗೊಳಿಸಬೇಕು ಹಾಗೂ ಓದುಗನಿಗೆ ಗಾಢವಾದ ಪರಿಣಾಮವನ್ನು ಬೀರುವಂತಿರಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿ.ಎಸ್.ಭೀಮರಾಯ ಅವರು ಒಬ್ಬ ಲೇಖಕನಿಗೆ ಸಾಮಾಜಿಕ ಚಿಂತನೆ ಇರಬೇಕು. ಭಾಷೆಯ ತಾಂತ್ರಿಕ ಶೈಲಿ ಹಾಗೂ ಪ್ರತಿಯೊಂದು ಕಥಾವಸ್ತುಗಳನ್ನು ನೆನಪಿನಲ್ಲಿಟ್ಟಕೊಂಡು ಕಥೆಯನ್ನು ರೂಪಿಸಬೇಕು ಎಂದು ಹೇಳಿದರು.

ನವ್ಯ ಮಾದರಿಯ ಕಥೆಯಲ್ಲಿ ಗಟ್ಟಿತನ ಇರುವುದು ಬಹಳ ವಿರಳ. ಆದ್ದರಿಂದ ಸಾಮಾಜಿಕ ನೆಲೆಗಟ್ಟಿನಲ್ಲಿ ಕಥೆಯನ್ನು ರೂಪಿಸಬೇಕು. ಕಥೆಗಾರರ  ಚಿಂತನೆ ವ್ಯಕ್ತಿಗತವಾಗಿದ್ದು, ಸೂಕ್ಷ್ಮತೆಯಿಂದ ಕಥೆಯನ್ನು ರಚಿಸಬೇಕು ಎಂದು ಹೇಳಿದರು.

ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಸದಸ್ಯ ಸಂಚಾಲಕರಾದ ಬಾಳಾಸಾಹೇಬ ಲೋಕಾಪುರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಟ್ಟಿಮನಿ ಅವರ 40 ಲೇಖನಗಳು 4 ಸಂಪುಟಗಳಲ್ಲಿ ಕಾದಂಬರಿಯನ್ನು ಮುಂದಿನ ತಿಂಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದಲಿತ ಬಂಡಾಯ ಮಾದರಿಯ ಬಗ್ಗೆ ಹಾಗೂ ಮಹಿಳಾ ಅಸ್ಮಿತೆಯ ಕಥೆಗಳ ಬಗ್ಗೆ ವಿಚಾರಗೋಷ್ಠಿಗಳು ನಡೆದವು.

ನೀಲಕಂಠ ಅವರು ನಿರೂಪಿಸಿ, ವಂದಿಸಿದರು. ಅಶ್ವಿನಿ ಪ್ರಾಥರ್ಿಸಿದರು, ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಸದಸ್ಯ ಸಂಚಾಲಕರಾದ ಬಾಳಾಸಾಹೇಬ ಲೋಕಾಪುರ ಅವರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಡಾ. ಸುಮಂಗಲಾ ಮೇಟಿ, ಜ್ಯೋತಿ ಕುಲಕಣರ್ಿ, ಬಸವರಾಜ ಕಟ್ಟಿಮನಿ ಸಂಚಾಲಕ ಸದಸ್ಯರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.