ಪೌರಕಾರ್ಮಿಕರಿಗೆ ಬಟ್ಟೆ, ಸಿಹಿ ವಿತರಿಸಿ ಹುಟ್ಟುಹಬ್ಬ ಆಚರಣೆ

ಪೌರಕಾರ್ಮಿಕರಿಗೆ ಬಟ್ಟೆ, ಸಿಹಿ ವಿತರಿಸಿ ಹುಟ್ಟುಹಬ್ಬ ಆಚರಣೆ Birthday celebration by distributing clothes and sweets to civic workers

ಪೌರಕಾರ್ಮಿಕರಿಗೆ ಬಟ್ಟೆ, ಸಿಹಿ ವಿತರಿಸಿ ಹುಟ್ಟುಹಬ್ಬ ಆಚರಣೆ 

ಕೊಲ್ಹಾರ 05: ಬಡವರ ಪಾಲಿನ ಆಶಾಕಿರಣವಾಗಿರುವ ಚೆನ್ನಪ್ಪ ಅಂತರಗೊಂಡ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಪ್ರತಿ ವರ್ಷ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಡವರ ಪಾಲಿನ ಅನ್ನದಾತನೆನಿಕೊಂಡಿದ್ದಾರೆ.    

ಗುರುವಾರ ಕೊಲ್ಹಾರ ಪಟ್ಟಣ ಪಂಚಾಯತ ಆವರಣದಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿ 58 ಜನ ಪೌರಕಾರ್ಮಿಕರಿಗೆ ಬಟ್ಟೆಗಳನ್ನು ವಿತರಿಸಿ ಸಿಹಿ ಹಂಚಿ ತಮ್ಮ 38 ನೇ ಹುಟ್ಟು ಹಬ್ಬವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಿಕೊಂಡರು. ಚನ್ನಪ್ಪ ಅಂತರಗೊಂಡ ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಢವಳೇಶ್ವರ ಗ್ರಾಮದವರು ಸದ್ಯ ಕೊಲ್ಹಾರ ಪಟ್ಟಣದಲ್ಲಿ ತಮ್ಮದೆ ಆದ ಅನ್ನದಾತ ಅಗ್ರಿಕ್ಲಿನಿಕ ನಡೆಸಿಕೊಂಡು ಪ್ರತಿ ವರ್ಷ ತಮ್ಮ ಜನ್ಮ ದಿನದ ಪ್ರಯುಕ್ತ ದುಂದು ವೆಚ್ಚ ಮಾಡುವ ಬದಲು ಅಂಧ ಅನಾಥ ಮಕ್ಕಳಿಗೆ, ಬಡ ವಿದ್ಯಾರ್ಥಿಗಳಿಗೆ ಪೌರಕಾರ್ಮಿಕರಿಗೆ ಪ್ರತಿ ವರ್ಷ ತಮ ಕೈಲಾದಷ್ಟು ಸಹಾಯ ಮಾಡುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. 

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ನಿಂಗಪ್ಪ ಗಣಿ, ಬನಪ್ಪ ಬಾಲಗೊಂಡ, ಮಂಜುನಾಥ ಮಟ್ಯಾಳ, ಶ್ರೀಶೈಲ ಸೊನ್ನದ, ಗೌಡಪ್ಪ ಕಾರಜೋಳ ಸೇರಿದಂತೆ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಇದ್ದರು.