ದಸರಾ ರಜೆ 10 ದಿನ ವಿಸ್ತರಣೆ ಸರಕಾರಕ್ಕೆ ಬೀರ​‍್ಪ ಅಂಡಗಿ ಅಭಿನಂದನೆ

ದಸರಾ ರಜೆ 10 ದಿನ ವಿಸ್ತರಣೆ ಸರಕಾರಕ್ಕೆ ಬೀರ​‍್ಪ ಅಂಡಗಿ ಅಭಿನಂದನೆ Birpa Andagi congratulates the government for extending the Dussehra holiday by 10 days

ದಸರಾ ರಜೆ 10 ದಿನ ವಿಸ್ತರಣೆ ಸರಕಾರಕ್ಕೆ ಬೀರ​‍್ಪ ಅಂಡಗಿ ಅಭಿನಂದನೆ 

ಕೊಪ್ಪಳ 08:  ದಸರಾ ರಜಾ ದಿನವನ್ನು 10 ದಿನಗಳ ಕಾಲ ವಿಸ್ತರಣೆ ಮಾಡಿರುವ ಸರಕಾರದ ನಿರ್ಧಾರವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಬೀರ​‍್ಪ ಅಂಡಗಿ ಚಿಲವಾಡಗಿ ಅವರು ಸ್ವಾಗತಿಸಿ ಅಭಿನಂದನೆ ಸಲ್ಲಿಸಿದ್ದಾರೆ. 

 ಈ ವಿಚಾರದ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ವರ್ಷದ ದಸರಾ ರಜೆಯಲ್ಲಿ ರಾಜ್ಯ ಸರಕಾರವು ಕೈಗೊಂಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯದಲ್ಲಿ ತೊಡಗಿದ್ದರಿಂದ ಶಿಕ್ಷಕರಿಗೆ ರಜೆಗಳು ಸಿಕ್ಕಿರಲಿಲ್ಲಾ.ಇದನ್ನು ಮನಗಂಡು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮುಖ್ಯಮಂತ್ರಿಗಳ ಗಮನಕ್ಕೆ ತರುವುದರ ಜೊತೆಯಲ್ಲಿ ಸತತ ಪ್ರಯತ್ನ ಮಾಡಿತ್ತು.ಇದರ ಅಂಗವಾಗಿ ರಾಜ್ಯದ ಮುಖ್ಯಮಂತ್ರಿಗಳು ಶಿಕ್ಷಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ದಸರಾ ರಜೆಯನ್ನು 10 ದಿನಗಳ ಕಾಲ ವಿಸ್ತರಣೆ ಮಾಡಿದೆ.10 ದಿನಗಳ ರಜೆಯನ್ನು ವಿಸ್ತರಣೆ ಮಾಡಿದ ರಾಜ್ಯ ಸರಕಾರಕ್ಕೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ರಾಜ್ಯದ ಎಲ್ಲಾ ಶಿಕ್ಷಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.