ಹಕ್ಕಿ, ಪ್ರಾಣಿ-ಪಕ್ಷಿ, ಗುಬ್ಬಚ್ಚಿ ಗುಬ್ಬಿ, ಇತರೆ ಎಲ್ಲ ರೀತಿಯ ಜೀವಿಯು ಮಾನವನಂತೆ ಅವು ಸಹ ಬದುಕುವ ಹಕ್ಕು ಇದೆ
Birds, animals, sparrows, and all other living beings have the right to live just like humans
ಲೋಕದರ್ಶನ ವರದಿ
ರಾಣೆಬೆನ್ನೂರು 26: ಹಕ್ಕಿ, ಪ್ರಾಣಿ-ಪಕ್ಷಿ, ಗುಬ್ಬಚ್ಚಿ ಗುಬ್ಬಿ, ಇತರೆ ಎಲ್ಲ ರೀತಿಯ ಜೀವಿಯು ಮಾನವನಂತೆ ಅವು ಸಹ ಬದುಕುವ ಹಕ್ಕು ಇದೆ. ಎಂದು ಓಂ ಪಬ್ಲಿಕ್ ಶಿಕ್ಷಣ ಸಂಸ್ಥೆಯ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಮನೋಜ ಸಾವುಕಾರ ಹೇಳಿದರು. ಅವರು ಸೋಮವಾರ ನಗರ ಹೊರ ವಲಯದ ಓಂ ಪಬ್ಲಿಕ್ ಶಾಲೆಯಲ್ಲಿ ನೀಡ್ಸ್ ಸಂಸ್ಥೆ ಏರಿ್ಡಸಲಾಗಿದ್ದ,ವಿಶ್ವ ಗುಬ್ಬಚ್ಚಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತಿಹಾಸದಲ್ಲಿ ಪ್ರತಿಯೊಬ್ಬರ ಬಾಲ್ಯದ ಜೀವನದಲ್ಲಿ ಹಕ್ಕಿ- ಗುಬ್ಬಿ ಕಾಗೆ, ನವಿಲು, ಜಿಂಕೆ ಮತ್ತಿತರೆ ಪ್ರಾಣಿ ಪಕ್ಷಿಗಳು ಮಾನವನ ಸಹಕಾರಿಗಳಾಗಿ, ಒಗ್ಗಟ್ಟು ನೈತಿಕತೆ, ದಯೇ, ಧರ್ಮ ಅನ್ನುವುದು ಪ್ರಾಣಿ ಪಕ್ಷಿಗಳ ಮೂಲಕ ಹಂಚಿ ತಿನ್ನುವ ಪರಿಪಾಠ ಅವುಗಳಿಂದಲೇ ತಿಳಿಯ ಬಹುದಾಗಿತ್ತು ಎಂದು ವಿವರಿಸಿ ಮಾತನಾಡಿದರು.
ಇಂದಿನ ಆಧುನಿಕ ಜೀವನದ ಬದುಕಿನಲ್ಲಿ ಮಾನವರಾದ ನಾವೆಲ್ಲರೂ ಅನುಭವಿಸುತ್ತಿರುವ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಪರಿಣಾಮ, ಹಕ್ಕಿ, ಗುಬ್ಬಿ ಇತರೆ ಮೂಕ ಪ್ರಾಣಿಗಳು ಮತ್ತು ಗುಬ್ಬಚ್ಚಿಗಳ ಸಂತತಿ ವಿನಾಶದಂಚಿಗೆ ಸಾಗುವಂತಾಗಿದೆ ಎಂದರು. ಗುಬ್ಬಿಗಳ ಸಂತತಿ ಪುನರುತ್ಥಾನವಾಗಬೇಕಾದರೆ ಅವುಗಳಿಗೆ ಸೂಕ್ತ ಸ್ಥಳ, ಮತ್ತು ಒಂದೆಡೆ ಸೇರಲು ಕೃತಕ ಗುಬ್ಬಚ್ಚಿ ಗೂಡುಗಳ ಇಂದಿನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪರಿಸರ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸುತ್ತಿರುವ ನೀಡ್ಸ್ ಸಂಸ್ಥೆ ಈ ಕುರಿತು ಜಾಗೃತಿ ಮೂಡಿಸಲು ಹೊರಟಿರುವ ಕಾರ್ಯವು ಅತ್ಯಂತ ಶ್ಲಾಘನಿಯವಾಗಿದೆ ಎಂದು ಪ್ರಸಂಸಿದರು.
ಮುಖ್ಯ ಅತಿಥಿಯಾಗಿದ್ದ, ಬೆಂಗಳೂರು ಫೇವಾರ್ಡ್ ಕೆ, ರಾಜ್ಯ ಉಪಾಧ್ಯಕ್ಷ ಎಚ್.ಎಫ್. ಅಕ್ಕಿ ಅವರು ಮಾತನಾಡಿ, ಕಳೆದ 40 ವರ್ಷಗಳಿಂದ ಪರಿಸರ ಕ್ಷೇತ್ರದಲ್ಲಿ ತಮ್ಮ ಸಂಸ್ಥೆ ನೀಡ್ಸ್ ಸೇವೆ ಸಲ್ಲಿಸುತ್ತಿದ್ದು, ಪರಿಸರದಿಂದ ನೇಪತ್ಯಕ್ಕೆ ಸರಿಯುತ್ತಿರುವ ಗುಬ್ಬಿಗಳು, ರೈತರ ಜೀವನಾಡಿ. ದೂರ ದೃಷ್ಟಿ ಮತ್ತು ತಮ್ಮ ಸಂಸ್ಥೆಯ ಸಂಕಲ್ಪ ಸಾಕಾರವಾಗಿ, ಅವುಗಳ ಪುನರ್ ರಕ್ಷಣೆಗೆ ಸುಜಲಾನ್ ಕೈಜೋಡಿಸಿದ್ದು ಅದರ ಮೂಲಕ ಗುಬ್ಬಚ್ಚಿಗಳ ರಕ್ಷಣೆ ಕುರಿತು ಅರಿವು ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಗುಬ್ಬಚ್ಚಿಗಳ ಗೂಡು ತಯಾರಿಸಿ, ತಮ್ಮ ಕೌಶಲ್ಯ ಮೆರೆದು ಸಾರ್ವಜನಿಕರ ಗಮನ ಸೆಳೆದ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯ ಡಾ. ಸತೀಶ್ ಆರ್ ಹಿರೇಮಠ, ಪ್ರಧಾನ ಗುರುಮಾತೆ ರೇಷ್ಮಾ ಎಸ್ ಮತ್ತು ಇತರ ಶಿಕ್ಷಕರು ವ್ಯಕ್ತಿತ್ವ ನಿರ್ಮಾಣಕ್ಕೆ ಕೌಶಲ್ಯಗಳು ವಿಷಯಗಳ ಕುರಿತು ಮಾತನಾಡಿ, ಮಕ್ಕಳಿಗೆ ಮಾದರಿಯಾದರು. ವೇದಿಕೆಯಲ್ಲಿ ನೀಡ್ಸ್ ಕಛೇರಿ ವ್ಯವಸ್ಥಾಪಕ ಸುಧೀರ್ ಈ.ಟಿ. ಜಿಲ್ಲಾ ಸಂಯೋಜಕ ತಿಪ್ಪೇಶ್ ಕನ್ನಮ್ಮನವರ ಮತ್ತು ಶಾಲೆಯ ಶಿಕ್ಷಕ- ಶಿಕ್ಷಕಿಯರು ಉಪಸ್ಥಿತರಿದ್ದರು. ಸೌಜನ್ಯ ಸಂಗಡಿಗರು ಪ್ರಾರ್ಥಿಸಿದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 