ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ವಾರ್ಷಿಕ ಸಭೆ ಆ.30

ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ವಾರ್ಷಿಕ ಸಭೆ ಆ.30  Bilagi Town Cooperative Bank Annual Meeting on August 30

ಲೋಕದರ್ಶನ ವರದಿ

ಬೀಳಗಿ, ಆ.28: ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ನ 29ನೇ ವಾರ್ಷಿಕ ಸಾಮಾನ್ಯ ಸಭೆ ಆ.30ರಂದು ಬೆಳಿಗ್ಗೆ 11 ಗಂಟೆಗೆ ಬ್ಯಾಂಕ್ನ ಪ್ರಧಾನ ಕಚೇರಿ ಆವರಣದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಎಂ.ಎನ್‌. ಪಾಟೀಲ ತಿಳಿಸಿದರು.  

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಸ್ಯರು ಹಾಗೂ ಗ್ರಾಹಕರ ಸಹಕಾರದಿಂದ ಬ್ಯಾಂಕ್ ನಿರಂತರ ಪ್ರಗತಿ ಸಾಧಿಸುತ್ತಿದೆ. 2026ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕ್ ?3.861 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸುಮಾರು ?90.85 ಕೋಟಿ ಸಾಲ ವಿತರಿಸಿದೆ. ಬ್ಯಾಂಕ್ನಲ್ಲಿ 17,052 ಸದಸ್ಯರಿದ್ದು, 15 ಶಾಖೆಗಳು ಹಾಗೂ ಎರಡು ವಿಸ್ತರಣಾ ಕೌಂಟರ್ಗಳ ಮೂಲಕ ಆಧುನಿಕ ಬ್ಯಾಂಕಿಂಗ್ ಸೇವೆ ಒದಗಿಸಲಾಗುತ್ತಿದೆ ಎಂದರು.  

2025-26ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಕ್ರೀಡಾ ಪ್ರತಿಭೆ ಪ್ರೋತ್ಸಾಹಕ್ಕಾಗಿ ?1.61 ಲಕ್ಷ ನೆರವು ನೀಡಲಾಗಿದೆ. ವಾರ್ಷಿಕ ಸಭೆಯಲ್ಲಿ ಬ್ಯಾಂಕ್ನ ಆಡಳಿತ, ಆರ್ಥಿಕ ಸ್ಥಿತಿ, ಮುಂದಿನ ಅಭಿವೃದ್ಧಿ ಯೋಜನೆಗಳು ಹಾಗೂ ಸದಸ್ಯರ ಹಿತಾಸಕ್ತಿ ಕುರಿತು ಚರ್ಚೆ ನಡೆಯಲಿದೆ. ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಆಗಮಿಸಿ ಸಹಕರಿಸುವಂತೆ ಮನವಿ ಮಾಡಿದರು.  

ಸಂಸ್ಥಾಪಕ ಉಪಾಧ್ಯಕ್ಷ ಎಸ್‌.ಆರ್‌. ಮೇಲ್ನಾಡ, ನಿರ್ದೇಶಕರಾದ ಎ.ಎಚ್‌. ಬೀಳಗಿ, ಬಿ.ಎಸ್‌. ಮೊಕಾಶಿ, ಎಂ.ಎಲ್‌. ಕೆಂಪಲಿಂಗಣ್ಣವರ, ಆರ್‌.ಎ. ಬಾಳಗಿ, ಶ್ರೀಶೈಲ ಅಂಟಿನ ಹಾಗೂ ಪ್ರಧಾನ ವ್ಯವಸ್ಥಾಪಕ ಜಿ.ಎಸ್‌. ಬನಹಟ್ಟಿ ಉಪಸ್ಥಿತರಿದ್ದರು.