ಸಿದ್ದಪ್ಪನಕೊಳ್ಳ ಎಂದು ಪ್ರಸಿದ್ಧವಾದ ಬೀಳಗಿ ಸಿದ್ದೇಶ್ವರ ದೇವಸ್ಥಾನ
Bilagi Siddeshwara Temple, also known as Siddappanakolla
ಬೀಳಗಿ ಸಿದ್ದೇಶ್ವರ ದೇವಸ್ಥಾನವು 400 ವರ್ಷಗಳ ಹಿಂದಿನ ಪವಿತ್ರ ದೇವಸ್ಥಾನವಾಗಿ ಕಂಡುಬರುತ್ತದೆ. ಇದು ಬಾಗಲಕೋಟೆ ಜಿಲ್ಲೆಯ ಬೀಳಗಿಯಿಂದ ಒಂದು ಕಿಲೋಮೀಟರನಲ್ಲಿ ಕಂಡುಬರುವ ವೈಶಿಷ್ಟ ಪೂರ್ಣ, ಭಾವೈಕ್ಯದ ,ಐತಿಹಾಸಿಕ,ಪರಂಪರೆ ಇಂದ ಕೂಡಿದ ದೇವಸ್ಥಾನವಾಗಿದೆ.
ಸಿದ್ದಪ್ಪನಕೊಳ್ಳ ಎಂದು ಪ್ರಸಿದ್ಧವಾಗಿರುವ ಈ ದೇವಸ್ಥಾನವು ಭಕ್ತರ ಆರಾಧ್ಯದೈವ ಆಗಿದೆ. 1173 ರಲ್ಲಿ ಮಹಾರಾಷ್ಟ್ರದ ಜತ್ತ ತಾಲೂಕಿನ ಸನ್ನೊಳಗಿ ಗ್ರಾಮದಲ್ಲಿ ಕುಡಿಯುರು ಮನೆತನ ಇರುತ್ತದೆ. ಈ ಕುಡಿಯುರು ಮನೆತನ ದಲ್ಲಿ ಮುದುಗೋಡ ಮತ್ತು ಸೋಗ್ಗಳಿಗರ ಮಗನಾಗಿ ಜನಿಸುತ್ತಾನೆ.ಮುಂದೆ ಸನ್ನೊಳಗಿ ಊರುಬಿಟ್ಟು ತಮ್ಮ ಕರ್ಮ ಯೋಗವನ್ನು ತ್ಯಜಿಸಿ, ಯೋಗಿ ಆಗಬೇಕೆಂದು ಅಲ್ಲಮಪ್ರಭುರೊಂದಿಗೆ ಅನುಭವ ಮಂಟಪಕ್ಕೆ ಬರುತ್ತಾರೆ. ಅಲ್ಲಿರುವಂತಹ ಬಸವಣ್ಣನಿಂದ ಪ್ರಭಾವಿತಗೊಂಡು ಅನೇಕ ವಚನಗಳನ್ನು ರಚನೆ ಮಾಡುತ್ತಾರೆ. 12 ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಿಂದ ಶರಣರು ಬೇರೆ ಬೇರೆ ವಚನ ಕಟ್ಟಲು ಹೋಗುತ್ತಾರೆ. ಅಂತದ್ರಲ್ಲಿ ನಮ್ಮ ಬೀಳಗಿಯ ಆರಾಧ್ಯದೈವ ಸಿದ್ದರಾಮನು ಕೂಡಾ ಉಳವಿಯ ಕ್ಷೇತ್ರಕ್ಕೆ ಹೋಗುತ್ತಾರೆ. ಹಾಗೆ ಹೋಗುವಾಗ ಒಂದು ದಟ್ಟ ಅರಣ್ಯದಲ್ಲಿ ಅಂದರೆ ಈಗಿನ ಬೀಳಗಿಯ ಈ ಗುಡ್ಡದಲ್ಲಿ ತಪಸ್ಸು ಮಾಡುತ್ತಾರೆ. ಅದೇ ಗುಡ್ಡ ಈಗ ಸಿದ್ದಪ್ಪನಕೊಳ್ಳವಾಗಿದೆ. ಈಗಿರುವ ಬೀಳಗಿಯ ಗುಡ್ಡದಲ್ಲಿ ಸಿದ್ದರಾಮೇಶ್ವರ ತಪಸ್ಸಿಗೆ ಕುಂತು ಮುಂದೆ ಉಳವಿ ಕ್ಷೇತ್ರಕ್ಕೆ ಹೋಗುತ್ತಾರೆ .
ಅವರು ತಪಸ್ಸಿಗೆ ಕೂತ ಸ್ಥಳದಲ್ಲಿ ಹುತ್ತು ಬೆಳೆದು . ಆ ಹುತ್ತಕ್ಕೆ ದಿನಾಲೂ ಆಕಳು ಅದರ ಹಾಲನ್ನು ಕರೆದು ಹೋಗುತ್ತದೆ. ಅದನ್ನು ಹಿಂಬಾಲಿಸಿದ ಆಕಳಿನ ಮಾಲಿಕ ಆ ಹುತ್ತನ್ನು ತೆಗೆದ ನೋಡಿದಾಗ ಒಂದು ಲಿಂಗದ ದರ್ಶನವಾಗುತ್ತದೆ. ಆ ಆಕಳು ಅಂಜಿ ಒಂದು ಗುಹೆ ಒಳಗೆ ಹೋಗುತ್ತದೆ . ಅದೆ ಈಗ ಆಕಳಭಾವಿ ಆಗಿ ಪರಿವರ್ತನೆಯಾಗಿದೆ. ಅಂದು ತಪಸ್ಸು ಮಾಡಿ ಹೋದ ಜಾಗದಲ್ಲಿ ಸಿಕ್ಕ ಲಿಂಗವೆ ಇವತ್ತಿನ ಆರಾಧ್ಯ ದೈವವೇ ನಮ್ಮ ಬೀಳಗಿ ಸಿದ್ದೇಶ್ವರ ದೇವಸ್ಥಾನ ಆಗಿದೆ.
ಬೀಳಗಿ ಸಿದ್ದೇಶ್ವರ ದೇವಸ್ಥಾನ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ, ಮಹತ್ವ ಪಡೆದಿದೆ. ಇದು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕಂಡುಬರುವಂತಹ ದೇವಸ್ಥಾನವಾಗಿದೆ. ಈ ದೇವಾಲಯದ ಗರ್ಭಗುಡಿಯ ಮೇಲೆ ಕದಂಬ ನಾಗರ ಶೈಲೇ ಶಿಖರವನ್ನು ನೋಡುತ್ತೇವೆ. ಈ ದೇವಾಲಯವು ಚತುರ್ಭುಜಾಕಾರದ ತಳದೆಯನ್ನು ಹೊಂದಿದೆ ಹೊರಭಾಗದಲ್ಲಿ ಚೌಕಕಾರದ ಕಂಬಗಳಿಂದ ಕೂಡಿದ ಮೊಗಸಾಲೆಯನ್ನು ಹೊಂದಿದೆ.ದೇವಾಲಯದ ಮುಖ್ಯ ದ್ವಾರಗಳನ್ನು 1695 ರಲ್ಲಿ ಖಂಡೇರಾವ್ ತಿಮ್ಮಾಜಿ ಎಂಬಾತನು ನಿರ್ಮಿಸಿದನೆಂದು ಮರಾಠಿ ಶಾಸನಗಳು ತಿಳಿಸುತ್ತವೆ. ದೇವಾಲಯದ ಹಿಂಭಾಗದ ಗುಡ್ಡದ ಮೇಲೆ 12 ಮೀಟರ್ ಎತ್ತರದ ದೀಪ ಸ್ತಂಭವಿದ್ದು. 1589 ರಲ್ಲಿ ಹೈದರ್ ಖಾನ್ ಅಧಿಕಾರಿಯಾಗಿದ್ದ ಕಂಡೆರಾವ್ ಸಿಂಹಾಜಿಯಿಂದ ನಿರ್ಮಿಸಲ್ಪಟ್ಟಿದೆ. ಗುಡ್ಡದ ಮೇಲಿರುವ ಮಲ್ಲಸಿದ್ದಪ್ಪನ ಗುಡಿ ಮತ್ತು ಏಳು ಮಠಗಳು ಪ್ರಸಿದ್ಧವಾಗಿವೆ. ಗುಡ್ಡದ ಮೇಲೆ ದೊಡ್ಡದಾದ ನಂದಿ ವಿಗ್ರಹವಿದ್ದು, ಹಸಿರಿನಿಂದ ಕಂಗೊಳಿಸುವ ದೇವಾಲಯದ ವಾಸ್ತುಶಿಲ್ಪವು ಆಕರ್ಷಕವಾಗಿ ಕಂಡುಬರುತ್ತದೆ.
ಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿದಿನ ದೇವರಿಗೆ ಅಭಿಷೇಕ ನೆರವೇರುತ್ತದೆ . ಶ್ರಾವಣ ಮಾಸದಲ್ಲಿ ಸಿದ್ದೇಶ್ವರ ದೇವರ ಜಾತ್ರೆ ಇರುತ್ತದೆ ಮತ್ತು ಕೊನೆಯ ಸೋಮವಾರದಂದು ರಥೋತ್ಸವ ನಡೆಯುತ್ತದೆ. ಈ ದೇವಸ್ಥಾನವು ಭಾವೈಕತೆ ಹೆಸರುವಾಸಿಯಾಗಿದ್ದು. ಇಲ್ಲಿ ಬೇರೆ ಬೇರೆ ಧರ್ಮ,ಜಾತಿ, ಜನಾಂಗ ಎಲ್ಲಾ ರೀತಿಯ ಜನರು ಭೇಟಿ ನೀಡುತ್ತಾರೆ ದೇವರ ದರ್ಶನ ಪಡೆದು ತಮ್ಮ ಜೀವನವನ್ನು ಪಾವನವನ್ನು ಮಾಡಿಕೊಳ್ಳುತ್ತಾರೆ.
ಜಾತ್ರೆಯಲ್ಲಿ ಜನರಿಗೆ ಅನುಕೂಲವಾಗುವಂತೆ ಸಮತಟ್ಟಾದ ನೆಲವನ್ನು ರಚಿಸಲು ಇಳಿಜಾರನ್ನು ಮಾಡಲಾಗಿದೆ. ಬಂಡಿಗೆ ಪದರುಗಳನ್ನು ನೋಡುವುದು ಅದ್ಭುತವಾಗಿದೆ. ಮಳೆಗಾಲದಲ್ಲಿ ಕಲ್ಲಿನ ಇಳಿಜಾರುಗಳಲ್ಲಿ ಧಾರಾಕಾರವಾಗಿ ಹರಿಯುವ ಹೊಳೆಗಳಿಂದ ಈ ಸ್ಥಳವು ಅದ್ಭುತವಾಗಿರುತ್ತದೆ. ಇಂಥ ಒಂದು ಪುಣ್ಯ ಕ್ಷೇತ್ರದಲ್ಲಿ ಸಾಹಿತಿಗಳು,ಖ್ಯಾತ ನಾಟಕಕಾರರು,ಜಾನಪದ ವಿದ್ಮಾಂಸರು, ಕವಿಗಳು, ಅಂದರೆ ವೀರ ಸಿಂಧೂರ ಲಕ್ಷ್ಮಣ, ಸನಾದಿ ಅಪ್ಪಣ್ಣ,ಕಂದಗಲ್ ಹನುಮಂತರಾಯ, ಹನುಮಂತ ರಾಯ ಕಂಠಿ, ಸಿದ್ದಪ್ಪ ಬಿದರಿ, ಡಾ. ಶ್ರೀರಾಮ ಇಟ್ಟನವರ, ಪ್ರಸಿದ್ಧ ವ್ಯಕ್ತಿಗಳನ್ನು ನಾವು ನೋಡುತ್ತೇವೆ ನಾವೇ ಪುಣ್ಣ್ಯವಂತರು.
ಶ್ರೀದೇವಿ ಮುಂಡಗನೂರ
ಸಮಾಜಶಾಸ್ತ್ರ ಉಪನ್ಯಾಸಕರು
ಬಾಗಲಕೋಟೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 