ವಿದ್ಯಾರ್ಥಿ ಪರೀಕ್ಷಾ ಪ್ರವೇಶಪತ್ರಕ್ಕೆ ಬೈಕ್ ಆಡವು: ಸಾರ್ವಜನಿಕರ ಆಕ್ರೋಶ, ಸಂಸ್ಥೆ ರದ್ದುಪಡಿಸಲು ಕಬ್ಬಾರ ಆಗ್ರಹ

ವಿದ್ಯಾರ್ಥಿ ಪರೀಕ್ಷಾ ಪ್ರವೇಶಪತ್ರಕ್ಕೆ ಬೈಕ್ ಆಡವು: ಸಾರ್ವಜನಿಕರ ಆಕ್ರೋಶ, ಸಂಸ್ಥೆ ರದ್ದುಪಡಿಸಲು ಕಬ್ಬಾರ ಆಗ್ರಹ Bike racing for student exam admit card: Public outrage, Kabbar demands to abolish the institution

  ರಾಣೆಬೆನ್ನೂರು :1 ನಗರದ ಹಲಗೇರಿ ರಸ್ತೆ ಬಿಎಜೆಎಸ್ ಎಸ್ ಕಾಲೇಜು ಆವರಣದಲ್ಲಿರುವ, ಡಿ.ಬಿ. ಎಸ್ ಮೆಡಿಕಲ್ ಅಕಾಡೆಮಿ ಸೈನ್ಸ್‌ ಪಿಯುಸಿ  ಕಾಲೇಜಿನ ಸಂಸ್ಥೆಯ, ಡಿ ಬಿ ಸುನಿತಾ ಅವರು ಓರ್ವ  ವಿದ್ಯಾರ್ಥಿಗೆ, ಪರೀಕ್ಷೆಯ ವಿಷಯವಾಗಿ ಅವಮಾನ ಮಾಡಿರುವುದಾಗಿ ಆರೋಪಿಸಿರುವ ಹನುಮಂತಪ್ಪ ಕಬ್ಬಾರ್, ಘಟಣೆಯನ್ನು   ಖಂಡಿಸಿ, ಕೂಡಲೇ ಡಿ. ಬಿ. ಸುನಿತಾ ಅವರ ಮೇಲೆ ಕ್ರಮ ಕೈಗೊಂಡು, ಅವರು ನಡೆಸುತ್ತಿರುವ ಕಾಲೇಜು  ರದ್ದುಪಡಿಸಬೇಕೆಂದು ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಅವರು ಆಗ್ರಹಿಸಿದ್ದಾರೆ. ಈ ಕುರಿತು ರವಿವಾರ ಇಲ್ಲಿನ  ಪ್ರವಾಸಿ ಮಂದಿರದಲ್ಲಿ. ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ, ಈ ಕುರಿತು ಮಾತನಾಡಿದರು. ರಾಣೆಬೆನ್ನೂರು ನಗರದ ಮತ್ತು ತಾಲೂಕಿನ ಹಾಗೂ ಜಿಲ್ಲೆಯ ಹೆಮ್ಮೆಯ ಸಂಸ್ಥೆ ಬಿಎಜೆಎಸ್‌ಎಸ್ ಕಾಲೇಜು. ಡಿ ಬಿ ಸುನೀತಾ ಅವರು ವಿದ್ಯಾರ್ಥಿಯ ಪರೀಕ್ಷಾ ಸಂಬಂಧಿಸಿದಂತೆ ಹಣ ಕಟ್ಟುವ ವಿಷಯವಾಗಿ   ಅವಮಾನಿಸಿ, ನಿಂದಿಸಿದ್ದಾರೆ

ಇವರ ಈ ವರ್ತನೆಯಿಂದಾಗಿ ಪಾಲಕರು ಮಾನಸಿಕ ವೇದನೆ ಅನುಭವಿಸುವಂಥಾಗಿದೆ. ವಿದ್ಯಾರ್ಥಿಗೆ ಈ ಕುರಿತು ಸೂಕ್ಷ್ಮವಾಗಿ ತಿಳಿಸಬಹುದಾಗಿತ್ತು ಆದರೆ ಸುನಿತಾ ಅವರು ಈ ರೀತಿ ನಡೆದುಕೊಂಡು ಶಿಕ್ಷಣ ಇಲಾಖೆಗೆ ಮತ್ತು ಇವರಿಗೆ ಬಾಡಿಗೆ ನೀಡಿದ ಬಿ.ಎ.ಜೆ ಎಸ್‌. ಎಸ್‌. ಕಾಲೇಜಿಗೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.   ಘಟನೆ ಕುರಿತು ಮಧ್ಯ ಪ್ರವೇಶಿಸಿದ ವ್ಯಕ್ತಿಯಿಂದ ಅವರ ಬೈಕ್ ಮತ್ತು ಮೊಬೈಲ್ ಅಡವಿಟ್ಟುಕೊಂಡು ಪ್ರವೇಶ ಪತ್ರ ನೀಡಿದ್ದಾರೆ  ಇದರಿಂದ ಸಾರ್ವಜನಿಕ ವಲಯದಲ್ಲಿ ಇವರ ಮೇಲೆ ಕೂಡಲೆ ಕ್ರಮ  ಕೈಗೊಳ್ಳಬೇಕು, ಇವರ ಸಂಸ್ಥೆ ಡಿಬಿಎಸ್  ರದ್ದುಗೊಳಿಸಬೇಕು ಎಂದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸರಕಾರಿ ನೌಕರಿಯಲ್ಲಿದ್ದು, ತನ್ನದೇ ಆದ ಸಂಸ್ಥೆಯನ್ನು ಕಟ್ಟಿಕೊಂಡು ಈ ರೀತಿ ಉದ್ದಟತನ ಮೆರೆಯುವುದು ಎಷ್ಟು ಸರಿ ಎಂದು ಕಬ್ಬಾರ್ ಬಲವಾಗಿ ಪ್ರಶ್ನಿಸಿದ್ದಾರೆ?. ಮಾಧ್ಯಮಗೋಷ್ಠಿಯಲ್ಲಿ ಶಿವಪುತ್ರ​‍್ಪ ಮೇಡ್ಲೇರಿ, ಬಸವರಾಜ ಮೇಗಳಗೇರಿ ಮತ್ತಿತರರು ಉಪಸ್ಥಿತರಿದ್ದರು.