ಕಾಂಗ್ರೆಸ್‌ನ್ನು ನಿದ್ದೆಗೆಡಿಸಿದ ಬಿಹಾರ್ ಚುನಾವಣೆ ಫಲಿತಾಂಶ- ಅರುಣಕುಮಾರ ಪೂಜಾರ
Bihar election results left Congress sleepless - Arun Kumar Pujara
ಕಾಂಗ್ರೆಸ್‌ನ್ನು ನಿದ್ದೆಗೆಡಿಸಿದ ಬಿಹಾರ್ ಚುನಾವಣೆ ಫಲಿತಾಂಶ- ಅರುಣಕುಮಾರ ಪೂಜಾರ
ರಾಣೆಬೆನ್ನೂರು 15: ಬಿಹಾರ್ ರಾಜ್ಯದ ಚುನಾವಣೆ ಫಲಿತಾಂಶವೂ ಭವಿಷ್ಯದಲ್ಲಿ ಕಾಂಗ್ರೆಸ್ ದಿವಾಳಿತನ, ಪತನಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು. ಅವರು ಶನಿವಾರ ಬಿಜೆಪಿ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ರೈತ ವಿರೋಧಿ ಸರ್ಕಾರವಾಗಿದ್ದು, ರೈತರ ಹೆಸರಿನಲ್ಲಿ ದರೋಡೆ ಮಾಡುತ್ತಲ್ಲಿದೆ. ರೈತರಿಗೆ ಬೆಂಬಲ ಬೆಲೆ ನೀಡದೆ ಅವರ ಮೇಲೆ ಇವರು ಇವರ ಮೇಲೆ ಅವರು ಎನ್ನುವಂತೆ ಆರೋಪ ಪ್ರತ್ಯಾರೋಪದಲ್ಲಿ ಕಾಲಾಹರಣ ಮಾಡುತ್ತಲ್ಲಿ ದೇ ಎಂದು ಆರೋಪಿಸಿದರು.
ರೈತರಿಗೆ ನ್ಯಾಯಯುತ ಬೆಲೆ ಇರಬೇಕು ಮತ್ತು ಕೊಡಬೇಕು ಇದು ಬಿಜೆಪಿ ಸಿದ್ಧಾಂತ.ಯಡಿಯೂರ್ಪ ಮತ್ತು ಬಸವರಾಜ್ ಬೊಮ್ಮಾಯಿ ಸರ್ಕಾರವಿದ್ದಾಗ ರೈತರ ನೆರವಿಗೆ ಧಾವಿಸಿ, ಮಾನವೀಯತೆ ಮೆರೆದಿರುವ ಏಕೈಕ ಸರ್ಕಾರ ನಮ್ಮದಾಗಿದೆ ಎಂದರು. ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದ್ದು ರೈತರ ನೆಮ್ಮದಿ ಕೆಡಿಸಿದೆ, ಕಬ್ಬಿಗೆ ಕೇವಲ 3300 ಮಾತ್ರ ಬೆಂಬಲ ಬೆಲೆ ನೀಡಿದೇ ರೈತರ ಬೇಡಿಕೆಯಂತೆ 3500 ನಿಗದಿಪಡಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ ಎಂದು ಕಿಡಿಕಾರಿದರು. ಮೆಕ್ಕೆಜೋಳ, ಭಕ್ತ ಇತರೆ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಆದರೆ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂಬ ನೀತಿ ಅನುಸರಿಸಿದೆ. ಇದನ್ನು ವಿರೋಧಿಸಿ ಇದೇ ನವೆಂಬರ್ 17, 2025 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಂಡು, ಪ್ರತಿಭಟನೆ ಯಶಸ್ವಿಗೊಳಿಸಬೇಕೆಂದು ಪೂಜಾರ್ ಅವರು ಮನವಿ ಮಾಡಿದರು. ಮಾಧ್ಯಮ ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸುಭಾಷ್ ಸಿರಿಗೇರಿ, ಡಾ. ಬಸವರಾಜ ಕೇಲಗಾರ, ನರಸಗೊಂಡರ, ಮಂಜುನಾಥ ಕಾಟಿ, ಕೆ ಶಿವಲಿಂಗಪ್ಪ, ಚೋಳಪ್ಪ ಕಸವಾಳ, ಸಿದ್ದಪ್ಪ ಚಿಕ್ಕಬಿದರಿ, ಪ್ರಕಾಶ ಪೂಜಾರ, ಮಣಿ ಪವಾರ, ಎ. ಬಿ.ಪಾಟೀಲ, ಎಸ್.ಎಸ್. ರಾಮಲಿಂಗಣ್ಣನವರ, ನಿಂಗರಾಜ ಕೋಡಿಹಳ್ಳಿ, ಕುಬೇರ್ಪ ಕೊಂಡಜ್ಜಿ, ಭಾರತಿ ಜಂಬಿಗಿ, ಚೆನ್ನಮ್ಮ ಗುರುಪಾದ್ಯೇವರಮಠ, ಅಮೋಘ ಬದಾಮಿ. ಮತ್ತಿತರರು ಇದ್ದರು. ಗೋಷ್ಠಿಗೂ ಮುನ್ನ, ಕಾರ್ಯಾಲಯದ ಆವರಣದಲ್ಲಿ ಬಿಹಾರ್ ಪಲಿತಾಂಶವನ್ನು ಸಂಭ್ರಮಿಸಿ ಭಾರಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 