3 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ : ಶ್ರೀನಿವಾಸ ಮಾನೆ

3 ಕೋಟಿ ವೆಚ್ಚದಲ್ಲಿ  ರಸ್ತೆ  ಕಾಮಗಾರಿಗೆ  ಭೂಮಿಪೂಜೆ : ಶ್ರೀನಿವಾಸ ಮಾನೆ Bhoomi puja for road work costing Rs 3 crore: Srinivas Mane

ಲೋಕದರ್ಶನ ವರದಿ 

ಹಾನಗಲ್‌:ತಾಲೂಕಿನ ನೆಗವಣಗಿ ಕ್ರಾಸ್ ಬಳಿ ಶುಕ್ರವಾರ ಲೋಕೋಪಯೋಗಿ ಇಲಾಖೆಯಿಂದ 2024-25 ನೇ ಸಾಲಿನ ಅಪೆಂಡಿಕ್ಸ್‌ ಸಿ ರಾಜ್ಯ ಹೆದ್ದಾರಿಗಳ ನವೀಕರಣ ಅಡಿಯಲ್ಲಿ ? 3 ಕೋಟಿ ವೆಚ್ಚದಲ್ಲಿ ನವಲಗುಂದ, ಬನವಾಸಿ, ಮುಗವಳ್ಳಿ ರಾಜ್ಯ ಹೆದ್ದಾರಿಯ (ಹಾನಗಲ್ - ಬಂಕಾಪುರ ರಸ್ತೆ) ಆಯ್ದ ಭಾಗಗಳಲ್ಲಿ ರಸ್ತೆ ನವೀಕರಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. 

ಸತತ ಮಳೆಯಿಂದ ಹಲವು ರಸ್ತೆಗಳು ಹದಗೆಟ್ಟಿದ್ದು, ಇದೀಗ ರಸ್ತೆ ನವೀಕರಣಕ್ಕೆ ಚಾಲನೆ ನೀಡಲಾಗಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚುವ ಮೂಲಕ ಸುಗಮ ಸಂಚಾರ ಅನುವು ಮಾಡಿಕೊಡಲಾಗುತ್ತಿದೆ. ತಾಲೂಕಿಗೆ ? 50 ಕೋಟಿ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಅನುದಾನ ಲಭಿಸಿದ್ದು, ಈ ಪೈಕಿ ಹೆಚ್ಚು ಅನುದಾನವನ್ನು ರಸ್ತೆಗಳ ಸುಧಾರಣೆಗೆ ಬಳಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಶಾಸಕ ಮಾನೆ ತಿಳಿಸಿದರು. 

ಕರಗುದರಿ ಗ್ರಾಪಂ ಅಧ್ಯಕ್ಷ ಹೇಮಂತ ಲಮಾಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಕೆಎಂಎಫ್ ನಿರ್ದೇಶಕ ಚಂದ್ರ​‍್ಪ ಜಾಲಗಾರ, ಮುಖಂಡರಾದ ಉಮೇಶ ದೊಡ್ಡಮನಿ, ಕುಮಾರ ಲಮಾಣಿ, ರವಿ ಲಮಾಣಿ, ಬಸವಣ್ಣೆಪ್ಪ ಓಲೇಕಾರ, ಅಕ್ಬರಬಾಷಾ ಇನಾಂದಾರ, ಚನ್ನಪ್ಪ ಪಾಟೀಲ,  ನವೀನ, ಈರಯ್ಯ ಹಿರೇಮಠ, ಪ್ರವೀಣ ಹಿರೇಮಠ, ಬಸಣ್ಣ ವಾಲಿಕಾರ, ಲೋಕೋಪಯೋಗಿ ಇಲಾಖೆಯ ಎಇಇ ದೇವರಾಜು ಸೇರಿದಂತೆ ಗ್ರಾಪಂ ಸದಸ್ಯರು, ಹಲವು ಪ್ರಮುಖರು ಇದ್ದರು.