ಕದಮಂಡಲಗಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

 ಕದಮಂಡಲಗಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ Bhoomi Puja for road construction work in Kadamandal

ಲೋಕದರ್ಶನ ವರದಿ 

ಕದಮಂಡಲಗಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ 

ಬ್ಯಾಡಗಿ 11: ತಾಲ್ಲೂಕಿನ ಕದರಮಂಡಲಗಿಯಿಂದ ಬೆಳೆಕೇರಿಗೆ ಹೋಗಲಿರುವ ರಸ್ತೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ರೂ. 50 ಲಕ್ಷ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಬಸವರಾಜ ಶಿವಣ್ಣನವರ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. 

ನಂತರ ಮಾತನಾಡಿದ ಅವರು ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ರಸ್ತೆ ನಿರ್ಮಿಸಲಾಗುತ್ತಿದೆ. ಕದರಮಂಡಲಗಿಯಿಂದ ಬೆಳಕೇರಿಗೆ ತೆರಳಲಿರುವ ರಸ್ತೆ ಹಾಳಾಗಿದ್ದು ಈ ರಸ್ತೆ ದುರಸ್ತಿಗೆ ಇಂದು ಚಾಲನೆ ನೀಡಿ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಈ ಭಾಗದ ಜನರು ಈ ರಸ್ತೆಯ ಸದುಪಯೋಗ ಪಡೆದುಕೊಳ್ಳಬೇಕೆಂದರು.ಜಿಲ್ಲಾ ಗ್ಯಾರಂಟಿ ಉಪಾಧ್ಯಕ್ಷ ಸುರೇಶ ಹುಳಬುತ್ತಿ ಮಾತನಾಡಿ ಶಾಸಕರ ಅವಿರತ ಶ್ರಮದಿಂದ ಇಂದು ತಾಲ್ಲೂಕಿನಲ್ಲಿ ಹಂತ ಹಂತವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದುತ್ತಿದೆ. ಇವರ ಸಹಕಾರದಿಂದ ಕದರಮಂಡಲಗಿ ಪಂಚಾಯತ ಸೇರಿದಂತೆ ಕ್ಷೇತ್ರದ ವ್ಬಯಾಪ್ತಿಯಲ್ಲಿ ಬರಲಿರುವ ಎಲ್ಲ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದಾರೆಂದು ಹೇಳಿದರು. 

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕರಿ ಲಿಂಗಪ್ಪನವರ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಸಿಮಿ, ಧುರೀಣರಾದ ರಮೇಶ ಸುತ್ತಕೋಟಿ, ಈರಣ್ಣ ಮಲ್ಲಾಡದ, ದ್ಯಾಮನಗೌಡ ಚಿಕ್ಕನ ಗೌಡ, ದುರ್ಗೇಶ ಗೋಣೆಮ್ಮನವರ, ಗೀರೀಶ ಇಂಡಿಮಠ, ಹನುಮಂತ ಬಂಬಲಾಪುರ, ನಾಗರಾಜ, ಇಂಜೀನೀಯರ ಆಂಜನೇಯ, ಗುತ್ತಿಗೆದಾರ ಗಂಗಾಧರ ಕರಬಸಣ್ಣನವರ ಸೇರಿದಂತೆ ಇತರರಿದ್ದರು.