ಅಥಣಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ - ಚಿದಾನಂದ ಸವದಿ
Bhoomi Puja for development works in Athani constituency – Chidanand Savadi
ಅಥಣಿ 26: ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಅಥಣಿ ಮತಕ್ಷೇತ್ರದಲ್ಲಿ ಜನಪರ ಮತ್ತು ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು. ಶೇಗುಣಸಿ, ತಂಗಡಿ, ಕೊಟ್ಟಲಗಿ, ಶಿರಹಟ್ಟಿ ಆರ್ಸಿ ಸೆಂಟರ್ ಹಾಗೂ ಶಿರಹಟ್ಟಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶಾಸಕ ಲಕ್ಷ್ಮಣ ಸವದಿ ಅವರು ಗ್ರಾಮೀಣ ಭಾಗಗಳಲ್ಲಿ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣ, ಪ್ರಮುಖ ರಸ್ತೆ ಕಾಮಗಾರಿಗಳು, ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ, ವಿದ್ಯುತ್ ವಿತರಣಾ ಕೇಂದ್ರಗಳು ಹಾಗೂ ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಅಥಣಿ ಪಟ್ಟಣ ಸೇರಿದಂತೆ ಸಂಪೂರ್ಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅವರು ಬದ್ಧರಾಗಿದ್ದಾರೆ ಎಂದು ಹೇಳಿದರು.
ವಿವಿಧ ಕಾಮಗಾರಿಗಳಿಗೆ ಚಾಲನೆ
ಶೇಗುಣಸಿ ಗ್ರಾಮದಲ್ಲಿ ಶೇಗುಣಸಿ-ಹಳಿಂಗಳಿ ರಸ್ತೆ ಡಾಂಬರೀಕರಣ, ತಂಗಡಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯ ಭವನ ನಿರ್ಮಾಣ, ಕೊಟ್ಟಲಗಿ ಗ್ರಾಮದಿಂದ ಕನಮಡಿ ಗಡಿವರೆಗಿನ ರಸ್ತೆ ಅಭಿವೃದ್ಧಿ, ಶಿರಹಟ್ಟಿ ಆರ್ಸಿ ಸೆಂಟರ್ನಲ್ಲಿ ಸಿಸಿ ರಸ್ತೆ ಹಾಗೂ ಶಿರಹಟ್ಟಿ ಗ್ರಾಮದ ಚಂದ್ರಗಿರಿ ಸದಾಶಿವ ಮಠದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಚಿದಾನಂದ ಸವದಿ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಣ್ಣ ವಾಳಿ, ಎ.ಸಿ. ಪಾಟೀಲ, ಮಂಜು ಹೊಳಿಕಟ್ಟಿ, ಸಿದ್ದು ಬಡವಗೋಳ, ಬಸಪ್ಪ ಹಾದಿಮನಿ, ಬಾಬಾಸಾಹೇಬ ಮನಗುಳಿ, ಬಾಲಾಸಾಹೇಬ ಪಾಟೀಲ, ವಿಠ್ಠಲ ಮನಗುಳಿ, ರಾಮಪ್ಪ ನಿಷ್ಪತ್ತಿ, ಪೀರು ಹಾದಿಮನಿ, ಶಿವಾನಂದ ಮಾಳಗಾಂವಿ, ಅರ್ಜುನ ನಾಯಕ, ತುಕಾರಾಮ ಭಜಂತ್ರಿ, ಬಾಬಾಸಾಹೇಬ ಮೋರೆ, ಹಣಮಂತ ಪಾಟೀಲ, ಅಜಿತ್ ಪಾಟೀಲ, ಬಿಸಲಪ್ಪ ನಾಯಕ, ರಾಮಚಂದ್ರ ಪಾಟೀಲ, ಹಜರತ್ ಮುಲ್ಲಾ, ರಿಯಾಜ್ ಪಾಟೀಲ, ಗುರು ದಾಶ್ಯಾಳ, ಪ್ರದೀಪ ಕರಡಿ, ಸಿದ್ರಾಮ ಬಿಳ್ಳೂರ, ಶಿವಾನಂದ ತೇಲಿ, ರಾಘು ದೊಡ್ಡನಿಂಗಪ್ಪಗೋಳ, ಗುರುಬಸು ಬಂಡರಗೋಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 