ಪ್ರೋಟೋ ಕಾಲ್ನಲ್ಲಿ ಸಚಿವರ ಹೆಸರು ಇಲ್ಲದ್ದಕ್ಕೆ ಭೂಮಿಪೂಜೆ ರದ್ದು
Bhoomi Puja cancelled as minister's name not in protocol
ಶಿರಹಟ್ಟಿ 29: ತಾಲೂಕಿನ ಮಾಗಡಿ ಗ್ರಾಮದಲ್ಲಿ ನೆರವೇರಿಸಬೇಕಾಗಿದ್ದ ಆಯುಷ್ಮಾನ್ ಆರೋಗ್ಯ ಕೇಂದ್ರ ಭೂಮಿಪೂಜೆ ಕಾರ್ಯಕ್ರಮದ ಬ್ಯಾನರ್ನಲ್ಲಿ ಆರೋಗ್ಯ ಸಚಿವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರ ಹೆಸರನ್ನು ಹಾಕದಿದ್ದಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಕೆಎಚ್‌ಎಸ್ಡಿಪಿ ಇಂಜೀನಿಯರ್ ಸಾಗರ ಅವರನ್ನು ತರಾಟಗೆ ತೆಗೆದುಕೊಂಡ ಘಟನೆ ಜರುಗಿತು. ಗುತ್ತಿಗೆದಾರರು ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ತಡವಾಗಿ ಗಮನಕ್ಕೆ ತರಲಾಗಿದ್ದರ ಬಗ್ಗೆ ಹಾಗೂ ತಾಲೂಕು ಗ್ಯಾರಂಟಿ ಅಧ್ಯಕ್ಷರ ಹೆಸರನ್ನು ಪ್ರೋಟೋ ಕಾಲ್ನಲ್ಲಿ ಹಾಕಿಲ್ಲ ಎಂದು ವೀರಯ್ಯ ಮಠಪತಿಯವರು ಗುತ್ತಿಗೆದಾರರ ವಾಗ್ವಾದ ನಡೆಯಿತು.
ತಾಲೂಕು ಗ್ಯಾರಂಟಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ ವೀರಯ್ಯ ಮಠಪತಿಯವರು ಹಾಗೂ ಕಾಂಗ್ರೆಸ್ ಕಾರ್ರಕರ್ತರು ಬ್ಯಾನರ್ ತೆಗೆದು ಭೂಮಿಪೂಜೆ ಮಾಡುವದಾದರೆ ನಮ್ಮದೇನು ತಕರಾರಿಲ್ಲ. ಕಾಂಗ್ರೆಸ್ನವರು ಈ ಕಾರ್ಯಕ್ರಮವನ್ನು ಅಡ್ಡಪಡಿಸಿಲ್ಲ. ಭೂಮಿ ಪೂಜೆ ಮಾಡುವದಾದರೆ ನಮ್ಮದೇನು ತಕರಾರಿಲ್ಲ ಎಂದು ಹೇಳಿದರು. ಭೂಮಿಪೂಜೆ ಸ್ಥಳಕ್ಕೆ ಶಾಸಕ ಡಾ. ಚಂದ್ರು ಲಮಾಣಿಯವರು 2 ಗಂಟೆಗೆ ಕಾಮಗಾರಿ ಕಾರ್ಯಕ್ರಮ ಉದ್ಥಾಟನೆಯನ್ನು ಮಾಡಬೇಕಾಗಿತ್ತು. ನಾಲ್ಕು ಗಂಟೆಯಾದರೂ ಬರಲೇ ಇಲ್ಲ. ಒಟ್ಟಿನಲ್ಲಿ ಶಾಸಕರು ಭೂಮಿಪೂಜೆ ಮಾಡಬೇಕಾಗಿದ್ದ ಕಾಮಗಾರಿ ರದ್ದಾಯಿತು. ಈ ಸಂದಭದಲ್ಲಿ ಪ್ರಕಾಶ ಹೋರಿ, ದ್ಯಾಮಣ್ಣ ಸಾಸಳ್ಳಿ ಸಂಜೀವರಡ್ಡಿ ವೆಂಕರಡ್ಡಿ, ಉದಯ ಕೆ. ಮಾಗಡಿ, ಫಕ್ಕೀರೇಶ ನಡುವಿನಕೇರಿ, ಪವನ ಇಳಗೇರ, ಹಜರೇಸಾಬ ನಧಾಫ್ ಹಾಗೂ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 