ಭೀರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ

ಭೀರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ Bhiralingeshwara God's Festival

ಲೋಕದರ್ಶನ ವರದಿ 

ತಾಂಬಾ 10 : ಅಥರ್ಗಾ ಗ್ರಾಮದ ಬೀರಲಿಂಗೇಶ್ವರ ದೊಡ್ಡ ಹಬ್ಬದ ಜಾತ್ರಾ ಮಹೋತ್ಸವವು ದಿ.13 ರಿಂದ 15ರವರೆಗೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ದಿ.13ರಂದು 7ಗ್ರಾಮಗಳ ಫಲ್ಲಕ್ಕಿಗಳ ಆಗಮನ ವಾಗಲಿದೆ. ದಿ.14ರಂದು ಬೆಳಿಗ್ಗೆ 7ಗಂಟೆಗೆ ಗಂಗಸೀತಾಳ ಮಾಡಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಫಲ್ಲಕ್ಕಿಗಳ ಭವ್ಯ ಮೇರವಣಿಗೆ ಜರುಗುವದು. ನಂತರ ರಾತ್ರೀ.7.30ಕ್ಕೆ ಧರ್ಮಸಭೆ ನಡೆಯಲಿದೆ ಶ್ರೀ ಮುರಘೇಂದ್ರ ಸ್ವಾಮಿಗಳು ಸಾನಿಧ್ಯ ವಹಿಸುವರು. ಈಶಪ್ರಸಾದ ಸ್ವಾಮಿಗಳು ಸಮ್ಮಖ ವಹಿಸುವರು. ಸಂಸದ ರಮೇಶ ಜಿಗಜಿಣಗಿ ಘನ ಅಧ್ಯಕ್ಷತೆ ವಹಿಸಲಿದ್ದಾರೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಮಾಜಿ ಜಿಪಂ ಅಧ್ಯಕ್ಷರಾದ ಸೋಮನಾಥ ಕಳ್ಳಿಮನಿ ಉದ್ಘಾಟಿಸುವರು. ಬಿಜೆಪಿ ಮುಖಂಡರಾದ ದಯಾಸಾಗರ ಪಾಟೀಲ, ಕಾಸುಗೌಡ ಬಿರಾದಾರ ಜೋತಿ ಬೆಳಗಿಸುವರು. ಜೆಡಿಎಸ್ ತಾಲೂಕಾ ಅಧ್ಯಕ್ಷರಾದ ಬಿ.ಡಿ.ಪಾಟೀಲ, ಗ್ರಾಪಂ ಅಧ್ಯಕ್ಷ ನಾಗುಗೌಡ ಪಾಟೀಲ ಪೋಟೊ ಪೂಜೆ ನೇರವೆರಿಸುವರು.  

ಬಿ.ಸಿ.ಸಾವುಕಾರ, ಜೆಟ್ಟೆಪ್ಪ ರವಳಿ ಡೋಳ್ಳು ನುಡಿಸುವರು, ಪ್ರಕಾಶ ಚವ್ಹಾಣ, ವಿರಾಜ ಚವ್ಹಾಣ ಸಸಿಗೆ ನೀರುಣಿಸುವರು. ಶರಣಪ್ಪ ಸಿಂದಗಿ, ಮೌಲಾನ ಚಿಕ್ಕರೂಗಿ, ಗಣಪತಿ ಭಾಣಿಕೋಲ, ಅಶೋಕಗೌಡ ಬಿರಾದಾರ, ಬಸವರಾಜ ಕನ್ನೂರ, ಶ್ರೀಶೈಲ ನಾಗಣಸೂರ, ಜೆಟ್ಟೆಪ್ಪ ಲೋಣಿ, ಹಣಮಂತರಾಯ ಬಿರಾದಾರ, ರೇವಣುಗೌಡ ಅಂಕಲಗಿ, ಸಿದ್ದರಾಯ ಲೋಣಿ, ಜಯರಾಮ ರಾಠೋಡ, ಶಿವಾನಂದ ನಿಂಬಾಳ, ಗೀರೀಶ ಚಾಂದಕವಟೆ, ರಾವುತಪ್ಪ ಹುಲ್ಲುರ, ಅಯುಬ ನಾಟೀಕಾರ, ಅನೀಲ ರಬಶೇಟ್ಟಿ, ಶಂಕ್ರೇಪ್ಪ ಪೂಜಾರಿ, ಸದಾಶಿವ ಕಟ್ಟಿಮನಿ, ಅನಿತಾ ರಾಠೋಡ, ಶ್ರೀಶೈಲ ವನಜಕರ, ಲಕ್ಷ್ಮಣ ಹಿರೇಕುರಬರ, ಸುಬಾಸ ಚೀಲಿ ಮುಖ್ಯ ಅಥಿತಿಗಳಾಗಿ ಆಗಮಿಸುವರು ನಂತರ 9ಗಂಟೆಗೆ ಅಮೋಘಸಿದ್ದ ಢೋಳ್ಳಿನ ಸಂಘ ಉಮದಿ ಮಾನಸಿದ್ದ ಮಾರಾಯರು, ಭೀರಲಿಂಗೇಶ್ವರ ಡೋಳ್ಳಿನ ಸಂಘ ಸುಮೀತ್ರಾ ಮುಗಲ್ಯಾಳ ಅವರ ನಡುವೆ ಡೋಳ್ಳಿನ ಹಾಡಿಕೆಯ ಸ್ಪರ್ಧೆ ಜರುಗಲಿದೆ. ದಿ.15ರಂದು ಬೇಳಿಗ್ಗೆ 9ಗಂಟೆಗೆ ತಾಂಬಾ ಗ್ರಾಮದ ಶ್ರೀಲಕ್ಷ್ಮೀದೇವಿ ಗಾಯನ ಸಂಘದವರಿಂದ ಮಾಯಮ್ಮ ದೇವಿಯ ಆಟ ಜರುಗುವದು. ಪಟ್ಟದ ಪೂಜಾರಿಗಳಾದ ಶ್ರೀಶೈಲ ಪೂಜಾರಿ, ಭೀಮರಾಯ ಪೂಜಾರಿ, ಸಿದ್ದರಾಮ ಪೂಜಾರಿ, ರಮಾನಂದ ಡೋಣಿ, ಗುರು ಪೂಜಾರಿ, ಮಾದೇವ ಪೂಜಾರಿ, ಮಾದೇವಪ್ಪ ಪೂಜಾರಿ ಈ ಆಟದಲ್ಲಿ ಉಪಸ್ಥಿತರಿರುವರು. ನಂತರ ಸಂಜೆ 5ಗಂಟೆಗೆ 7ಗ್ರಾಮದ ಪಲ್ಲಕ್ಕಿಗಳ ಬೇಟಿ ತಗೆದುಕೊಂಡು ತಮ್ಮ ತಮ್ಮ ಗ್ರಾಮಗಳಿಗೆ ನಿಗರ್ಮಿಸುವವು 3ದಿನ ಸತತ ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರಾ ಕಮೀಟಿಯ ಮುಖಂಡರಾದ ಬೀರ​‍್ಪ ಮಲ್ಲಪ್ಪ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.