ಸಂವಿಧಾನ ದಿನಾಚರಣೆ ಅಂಗವಾಗಿ ಸಸಿ ನೆಟ್ಟ ಭೀಮಾಶಂಕರ ಕನ್ನೂರ

ಸಂವಿಧಾನ ದಿನಾಚರಣೆ ಅಂಗವಾಗಿ ಸಸಿ ನೆಟ್ಟ ಭೀಮಾಶಂಕರ ಕನ್ನೂರ Bhimashankar Kannur plants saplings as part of Constitution Day celebrations


ಇಂಡಿ 27: ತಾಲೂಕಿನ  ಬಸನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕ್ಯಾತನಕೇರಿ ಗ್ರಾಮದಲ್ಲಿ ಬರುವ  ಅಮೃತ ಸರೋವರ ದಡದ ಮೇಲೆ ಸಂವಿಧಾನ ದಿನಾಚರಣೆ ಅಂಗವಾಗಿ  ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ  ಭೀಮಾಶಂಕರ ಕನ್ನೂರ ಅವರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಜೊತೆಗುಡಿ ಡಾ.ಬಿ.ಆರ್‌. ಅಂಬೇಡ್ಕರ್ ಹಾಗೂ ಭಾರತ ಸಂವಿಧಾನ ಪೀಠಿಕೆಗೆ ಪೂಜೆ ಸಲ್ಲಿಸಿ ಹೂ-ಪುಷ್ಪ ಸಮರ​‍್ಿಸಿದರು. ವ 

ಬಳಿಕ ಮಾತನಾಡಿ ಅವರು ಭಾರತ ಸಂವಿಧಾನದಲ್ಲಿ ಉಲ್ಲೇಖಿಸಿರುವ ಮೂಲಭೂತ ಕರ್ತವ್ಯಗಳು, ಹಕ್ಕುಗಳು ಮತ್ತು ಮೌಲ್ಯಗಳ ಕುರಿತು ಹಾಗೂ  ನೀರಿನ ಸಂರಕ್ಷಣೆ, ಸ್ವಚ್ಛತೆಯ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು  ಮಲ್ಲಿಕಾರ್ಜುನ ನಿಲಂಗಿ ರವರು ಸಂವಿಧಾನ ಪೀಠಿಕೆ ಯನ್ನು ಓದಿಸಿದರು. ಸಂವಿಧಾನ ದಿನಾಚರಣೆ ಪ್ರಯುಕ್ತ ಅಮೃತ ಸರೋವರ ದಂಡೆಯಲ್ಲಿ ವಿವಿಧ ಬಗೆಯ 15 ಸಸಿಗಳನ್ನು ನೆಡಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರುಗಳು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಖಿಂಇ  ಸ್ಥಳೀಯ ಜನಪ್ರತಿನಿಧಿಗಳು, ಯುವಕರು, ಶಾಲಾ ವಿದ್ಯಾರ್ಥಿಗಳು, ನರೇಗಾ ಕೂಲಿಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯಿತಿ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.