ಕೆಂಪವಾಡದಲ್ಲಿ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆ ಆಚರಣೆ
Bharatiya Janata Party Foundation Day Celebrations in Kempevada
ಲೋಕದರ್ಶನ ವರದಿ
ಕಾಗವಾಡ, 06 : ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ್ ಕಾರ್ಖಾನೆಯ ಕಛೇರಿಯಲ್ಲಿ ಮಾಜಿ ಸಚಿವರು ಕಾರ್ಖಾನೆಯ ಅಧ್ಯಕ್ಷ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವನ್ನು ಸೋಮವಾರ ದಿ. 06 ರಂದು ಆಚರಿಸಲಾಯಿತು.
ಈ ವೇಳೆ ಶ್ರೀಮಂತ ಪಾಟೀಲ ಮಾತನಾಡಿ, ನಿರಂತರ ಪ್ರಯತ್ನದಿಂದ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಿದ ನಮ್ಮ ಎಲ್ಲ ಹಿರಿಯ ನಾಯಕರನ್ನು ಸ್ಮರಿಸುತ್ತಾ, ಹಗಲಿರುಳು ಪಕ್ಷಕ್ಕಾಗಿ ದುಡಿಯುವ ದುರ್ಲಭ ಕಾರ್ಯಕರ್ತರನ್ನು ನೆನೆಯುತ್ತಾ ಸಂಕಲ್ಪ, ಸೇವೆ ಮತ್ತು ಸಮರೆ್ಣಯಿಂದ ಬಿಜೆಪಿಯನ್ನು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆಸಿದ ಪ್ರತಿಯೊಬ್ಬ ಕಾರ್ಯಕರ್ತರಿಗೆ ಬಿಜೆಪಿ ಸ್ಥಾಪನಾ ದಿನದ ಶುಭಾಶಯಗಳು ತಿಳಿಸಿದ ಅವರು, ಪಕ್ಷದ ಪ್ರತಿಯೊಂದು ಹೆಜ್ಜೆಯಲ್ಲೂ ಕಾರ್ಯಕರ್ತರ ತ್ಯಾಗ, ಹಿರಿಯರ ಮಾರ್ಗದರ್ಶನ ಮತ್ತು ಜನರ ವಿಶ್ವಾಸವಿದೆ. ನಮ್ಮ ಸಂಘಟನೆಯ ಶಕ್ತಿಯನ್ನು ಮತ್ತಷ್ಟು ಬಲಪಡಿಸಿ, ಜನಸೇವೆಗಾಗಿ ನಿಷ್ಠೆಯಿಂದ ಮುಂದುವರೆಯುವ ಸಂಕಲ್ಪ ಮಾಡೋಣವೆಂದರು.
ಈ ಸಮಯದಲ್ಲಿ ಬಿಜೆಪಿ ಕಾಗವಾಡ ಮಂಡಲ ಅಧ್ಯಕ್ಷ ಅರುಣಕುಮಾರ ಗಣೇಶವಾಡಿ, ಮುಖಂಡರಾದ ಕಿರಣ ಯಂದಗೌಡರ, ಸುಭಾಸ ಮಾಳಿ, ಬಾಬು ಹೊಸಮನಿ, ರಮೇಶ ಘೋಡಸೆ, ಶಿವಾನಂದ ಮುಜಗೋನವರ, ವಕೀಲರಾದ ಉಮೇಶ ಮನೋಜ, ಶಶಿಕಾಂತ ನಡೋಣಿ ಸೇರಿದಂತೆ ಹಲವಾರು ಗಣ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 