ಬಂದ್ ಯಶಸ್ವಿಗೆ ಕೃತಜ್ಞತೆ ಸಲ್ಲಿಸಿದ ಭರತ್ ಬೊಮ್ಮಾಯಿ

ಬಂದ್ ಯಶಸ್ವಿಗೆ ಕೃತಜ್ಞತೆ ಸಲ್ಲಿಸಿದ ಭರತ್ ಬೊಮ್ಮಾಯಿ  Bharath Bommai expresses gratitude for the success of the bandh


ಶಿಗ್ಗಾವಿ, ಆ.26: ಪಟ್ಟಣದ ಹನುಮಾನ್ ದೇವಸ್ಥಾನದ ಬಳಿ ನಡೆದ ಘಟನೆಯನ್ನು ಖಂಡಿಸಿ ಶಿಗ್ಗಾವಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಯಾವುದೇ ಬೆದರಿಕೆ ಅಥವಾ ಒತ್ತಡಕ್ಕೆ ಮಣಿಯದೆ ಸ್ವಯಂಪ್ರೇರಿತರಾಗಿ ಬಂದ್ ಆಚರಿಸುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವುದು ಶ್ಲಾಘನೀಯ ಎಂದು ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ ಹೇಳಿದರು.  

ಶಿಗ್ಗಾವಿ ಪಟ್ಟಣದ ಜನರು ಸ್ವಯಂಪ್ರೇರಿತರಾಗಿ ನಡೆಸಿದ ಬಂದ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯಗಳ ವಿರುದ್ಧದ ಜನರ ಅಸಹಿಷ್ಣುತೆಯ ಪ್ರತೀಕವಾಗಿದೆ. ಬಂದ್ಗೆ ಸಹಕರಿಸಿ ಯಶಸ್ವಿಗೊಳಿಸಿದ ಶಿಗ್ಗಾವಿಯ ಸಮಸ್ತ ನಾಗರಿಕರು, ಎಲ್ಲ ವರ್ಗದ ಜನತೆ, ಅಂಗಡಿ ಮುಂಗಟ್ಟುಗಳ ಮಾಲೀಕರು, ಕೃಷಿಕರು ಹಾಗೂ ಎಲ್ಲ ಉದ್ಯಮಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.