ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಘಟಕ ಬ್ಯಾಡಗಿ ಹಾಗೂ ಎಸ್ ಎಸ್ ಪಿ ಎನ್ ಸ್ಕೂಲ್ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆ

ಭಾರತ ವೀರಶೈವ  ಲಿಂಗಾಯತ ಮಹಾಸಭಾ ತಾಲೂಕ ಘಟಕ ಬ್ಯಾಡಗಿ ಹಾಗೂ ಎಸ್ ಎಸ್ ಪಿ ಎನ್  ಸ್ಕೂಲ್ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆ Bharat Veerashaiva Lingayat Mahasabha Taluka Unit Byadgi and SSPN School Jagajyoti Basaveshwara Jaya

ಬ್ಯಾಡಗಿ 21 :  ಅಖಿಲ ಭಾರತ ವೀರಶೈವ  ಲಿಂಗಾಯತ ಮಹಾಸಭಾ ತಾಲೂಕ ಘಟಕ ಬ್ಯಾಡಗಿ ಹಾಗೂ ಎಸ್ ಎಸ್ ಪಿ ಎನ್  ಸ್ಕೂಲ್ ಬ್ಯಾಡಗಿ ಇವರ ಸಂಯುಕ್ತಾಆಶ್ರಯದಲ್ಲಿ  ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು  ಸಮಾರಂಭದ  ಅಧ್ಯಕ್ಷತೆಯನ್ನು ವಿಶ್ವನಾಥ ಅಂಕಲಕೋಟಿ ಅಧ್ಯಕ್ಷರು ಅಖಿಲ ಭಾರತ ವೀರಶೈವ  ಲಿಂಗಾಯತ ಮಹಾಸಭಾ  ತಾಲೂಕು ಘಟಕ ಬ್ಯಾಡಗಿ  ಇವರು ವಹಿಸಿದ್ದರು. ಜಗಜ್ಯೋತಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರ ಮುಖಾಂತರ  ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.. ಅಧ್ಯಕ್ಷರಾದ ವಿಶ್ವನಾಥ ಅಂಕಲಕೋಟಿ ಮಾತನಾಡಿ ಬಸವೇಶ್ವರ ವಚನದೊಂದಿಗೆ ಛಲ ಬೇಕು ವಿದ್ಯಾರ್ಥಿಗಳಿಗೆ ಎಂಬ ವಚನವನ್ನು  ರಚಿಸಿ ಹೇಳಿದರು.

ಸುಭಾಸ ಯಲಿ  ಪ್ರಾಸ್ತಾವಿಕವಾಗಿ  ಮಾತನಾಡುವುದರ ಮೂಲಕ ಸಮಾರಂಭವನ್ನು ನಡೆಸಿಕೊಟ್ಟರು. ಲಿಂಗಯ್ಯ ಹಿರೇಮಠ ಸರ್ ಮಾತನಾಡಿ ಭಾರತ ವಿಶ್ವಗುರುವಾಗಿದೆ.  ಬಸವಣ್ಣನವರ ವಚನದಿಂದ ವಿಜೃಂಭಿಸುತ್ತಿದೆ ಎಂದು  ಬಸವಣ್ಣನವರ ಕೆಲವೊಂದು ವಚನಗಳನ್ನು ಹೇಳುವುದರ ಮೂಲಕ ಜಗಜ್ಯೋತಿ ಬಸವೇಶ್ವರರ ಬಗ್ಗೆ ಹೇಳಿದರು.. ಜಿ ಮಂಗಳ ಗುರುಮಾತೆ ಇವರು ಬಸವಣ್ಣನವರ ಹುಟ್ಟಿನಿಂದ ಅಂತ್ಯದ ನಡೆದ ಕೆಲವು ಘಟನೆಗಳನ್ನು ಮತ್ತು ಅವರ ವಚನಗಳನ್ನು ವಿದ್ಯಾರ್ಥಿಗಳಿಗೆ ಉಣಬಡಿಸಿದರು.. ವಿದ್ಯಾರ್ಥಿನಿ ಸಿಂಚನ ಬಾಗಲಕೋಟೆ ಪ್ರಾರ್ಥನೆ ಮತ್ತು  ಬಸವೇಶ್ವರರ ವಚನಗಳನ್ನು ಹೇಳಿದರು.

ಅಭಾವಿಲಿಂ ಮಹಾ ಸಭಾದ ಸದಸ್ಯರು ಭಾಗವಹಿಸಿದ್ದವರು,  ಲಿಂಗಯ್ಯ ಹಿರೇಮಠ ಸರ್‌. ಚಂದ್ರಣ್ಣ ಶೆಟ್ಟರ್‌. ಎಂ ಆರ್  ಹೊಂಬರಡಿ.. ಶಂಕರ್ ಗೌಡ್ರು ಪಾಟೀಲ. ರಮೇಶ್ ಮೂಟೆಬೆನ್ನೂರ. ಉಮೇಶ್ ಬಡ್ಡಿಯವರ. ಸಿದ್ದಲಿಂಗಪ್ಪ ವಾಲಿಶೆಟ್ಟರಠಿಟಿ  ಶಾಲೆಯ  ಪ್ರಾಚಾರ್ಯ ಸುಭಾಸ ಎಲಿ  ಸರ್‌. ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.  ಮತ್ತು ಇದೇ ಸಂದರ್ಭದಲ್ಲಿ ಲಿಂಗಯ್ಯ ಸರ್ ಹಿರೇಮಠ ಇವರನ್ನು ಸನ್ಮಾನಿಸಲಾಯಿತು..ರಮೇಶ್ ಮೋಟೆಬೆನ್ನೂರ ವಂದನಾರೆ​‍್ಣ ಮಾಡಿದರು.