ವೀರ್ ಸಾರ್ವಕರ್ಗೆ ಭಾರತರತ್ನ ಪಕ್ಷದ ಧ್ಯೇಯ; ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ

ಮುಂಬೈ, ಅ 15:    ಮಹಾರಾಷ್ಟ್ರದಲ್ಲಿ  ಇದೇ 21 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ತನ್ನ  ಚುನಾವಣಾ ಪ್ರಣಾಳಿಕೆಯನ್ನು  ಮಂಗಳವಾರ ಬಿಡುಗಡೆ ಮಾಡಿದೆ. 

ಭಾರತೀಯ ಜನತಾಪಕ್ಷದ  ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪಕ್ಷದ  ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.   

ಮಹಾತ್ಮ ಜ್ಯೋತಿಬಾಪುಲೆ, ಸಾವಿತ್ರಿಬಾಯಿ ಪುಲೆ   ಹಾಗೂ ವೀರ್ಸಾವರ್ಕರ್ ಅವರಿಗೆ ಭಾರತ ರತ್ನ ಪುರಸ್ಕಾರ  ಕಲ್ಪಿಸುವುದು ಪಕ್ಷದ ಧ್ಯೇಯ ಎಂದು  ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.   

ರಾಜ್ಯದಲ್ಲಿ  ಸಂಚಲನ ಸೃಷ್ಟಿಸಿರುವ  ಪಿ ಎಂ ಸಿ ಬ್ಯಾಂಕ್ ಹಗರಣವನ್ನು ಚುನಾವಣೆಯ ನಂತರ  ಕೇಂದ್ರ ಸರ್ಕಾರದ ಗಮನಕ್ಕೆ ತಂದು ಬಾಧಿತ ಠೇವಣಿದಾರರಿಗೆ  ನ್ಯಾಯ ದೊರಕಿಸಿಕೊಡುವುದಾಗಿ, ತಾವು ವೈಯಕ್ತಿವಾಗಿ ಈ ವಿಷಯದಲ್ಲಿ ಮುತುವರ್ಜಿ ವಹಿಸಿ ನ್ಯಾಯ ತೊರಕಿಸಿಕೊಡಲು ಪ್ರಯತ್ನಿಸುವುದಾಗಿ   ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್  ಈ ಸಂದರ್ಭದಲ್ಲಿ ಭರವಸೆ ನೀಡಿದರು. 

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ  ಮಾಡಿಕೊಂಡಿರುವ  ಮಿತ್ರ ಪಕ್ಷ ಶಿವಸೇನೆ ಜಂಟಿ ಪ್ರಣಾಳಿಕೆಗೆ ಆದ್ಯತೆ ನೀಡದೆ,  ಪ್ರತ್ಯೇಕವಾಗಿ  ತನ್ನ ಚುನಾವಣಾ ಪ್ರಣಾಳಿಕೆಯನ್ನು ಪ್ರಕಟಿಸಿದೆ.