ಭರತ್ ಕಂದಕೂರಗೆ ಪ್ರಶಸ್ತಿ
Bharat Kandakura gets award
ಕೊಪ್ಪಳ 30: ಬೆಂಗಳೂರು ಫೋಟೋಗ್ರಾಫಿಕ್ ಕ್ಲಬ್ ಆಯೋಜಿಸಿದ್ದ ’ಕರ್ನಾಟಕದ ಜಾತ್ರೆ ಮತ್ತು ಉತ್ಸವಗಳು’ ಕುರಿತ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಹಕ ಭರತ್ ಕಂದಕೂರ ಅವರಿಗೆ ಬಹುಮಾನ ಲಭಿಸಿದೆ.ದೊಡ್ಡಬಳ್ಳಾಪುರದ ಸುಧೀರ್ ಭಜನೆ ಹಟ್ಟಿ ಅವರ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಚಿತ್ರ (ಪ್ರಥಮ ಸ್ಥಾನ), ದೊಡ್ಡಬಳ್ಳಾಪುರದ ಬಿ.ಎನ್.ಉಮಾಶಂಕರ್ ಅವರ ಗೋಕಾಕದ ಭಂಡಾರ ಜಾತ್ರೆ ಚಿತ್ರ (ದ್ವಿತೀಯ ಸ್ಥಾನ), ‘ಪ್ರಜಾವಾಣಿ’ಯ ಕೊಪ್ಪಳ ಛಾಯಾಗ್ರಾಹಕ ಭರತ್ ಕಂದಕೂರ ಅವರ ಅಂಜನಾದ್ರಿ ಬೆಟ್ಟದ ಹನುಮ ಮಾಲೆ ಚಿತ್ರ (ತೃತೀಯ ಸ್ಥಾನ) ಪಡೆದಿವೆ.ಮುಂದಿನ ವರ್ಷದ ಛಾಯಾಚಿತ್ರ ಸ್ಪರ್ಧೆಗೆ ’ಕನಾಟಕದ ಹಬ್ಬ ಮತ್ತು ಆಚರಣೆಗಳು’ ಎನ್ನುವ ವಿಷಯ ಆಯ್ಕೆ ಮಾಡಲಾಗಿದ್ದು, ಛಾಯಾಗ್ರಾಹಕರು ಭಾಗಿಯಾಗಬಹುದು ಎಂದು ಕ್ಲಬ್ ಅಧ್ಯಕ್ಷ ಟಿ.ಕೆಂಪಣ್ಣ ತಿಳಿಸಿದ್ದಾರೆ. ಪ್ರಶಸ್ತಿಯು ನಗದು ಹಾಗೂ ಪುರಸ್ಕಾರ ಒಳಗೊಂಡಿದ್ದು ಏಪ್ರಿಲ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಚಿತ್ರ ಶೀರ್ಷಿಕೆಗಳು: ಭರತ್ ಕಂದಕೂರ್ರಶಸ್ತಿ ತಂದುಕೊಂಡು ಅಂಜನಾದ್ರಿ ಬೆಟ್ಟದ ಚಿತ್ರ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 