ಧಾರವಾಡ 02: ಧಾರವಾಡವು ಪೇಶ್ವೆ ಕಾಲದಿಂದ ಮರಾಠಿ ಭಾಗವಾದ ಬಾಂಬೆ ಪ್ರಾಂತ್ಯದ ಮುಂಬಯಿ ಕರ್ನಾ ಟಕದಲ್ಲಿ ಮರಾಠಿ ಪ್ರಭಾವದಲ್ಲಿದ್ದ ಪ್ರದೇಶ, ಸ್ವಾತಂತ್ರ್ಯ ಚಳುವಳಿ, ಖಿಲಾಪತ ಚಳುವಳಿ ಹಾಗೂ ಕನರ್ಾಟಕ ಏಕೀಕರಣ ಚಳುವಳಿಗಳನ್ನು ಮೈಗೂಡಿಸಿಕೊಂಡ ಧಾರವಾಡಿಗರಲ್ಲಿ, ಪುಣೆ, ಮುಂಬೈ ಬಿಟ್ಟರೆ ಧಾರವಾಡದಲ್ಲಿ ಹೆಚ್ಚು ಸ್ವಾತಂತ್ರ್ಯ ಚಳುವಳಿಯ ಕಿಚ್ಚು ಇತ್ತು. ಆ ಚಳುವಳಿಯ ನೇತಾರರಾಗಿ ಭೂಗತರರಾಗಿ, ಸ್ವಾತಂತ್ರ್ಯ ಕನಸು ಕಂಡವರಲ್ಲಿ ಭಾಲಚಂದ್ರ ಘಾಣೇಕರರು ಗಾಂಧೀಜಿ ಹಾಗೂ ಲೋಕಮಾನ್ಯ ಟಿಳಕರ ಪ್ರಭಾವಕ್ಕೆ ಒಳಗಾಗಿದ್ದರು. ಆಥರ್ಿಕವಾಗಿ ತೊಂದರೆಯಲ್ಲಿದ್ದರೂ ಸಹ ಅವರು ಎಂದೂ ಬದುಕಿನಲ್ಲಿ ಬಡತನ ಪ್ರದಶರ್ಿಸಿದೆ ಸ್ವಾಭಿಮಾನಿಯಾಗಿದ್ದರು ಎಂದು ಸಾಹಿತಿ ಶ್ರೀನಿವಾಸ ವಾಡಪ್ಪಿ ಹೇಳಿದರು.
ಕರ್ನಾ ಟಕ ವಿದ್ಯಾವರ್ಧಕ ಸಂಘವು, ಭಾಲಚಂದ್ರ ಘಾಣೇಕರ ದತ್ತಿ ಅಂಗವಾಗಿ ಸಂಘದಲ್ಲಿ ಆಯೋಜಿಸಿದ್ದ `ಭಾಲಚಂದ್ರ ಘಾಣೇಕರ ಅವರ ಗಾಂಧಿವಾದಿ ಬದುಕು ಮತ್ತು ಪುಸ್ತಕ ಪ್ರೇಮ' ವಿಷಯದ ಮೇಲೆ ಉಪನ್ಯಾಸ ನೀಡುತ್ತಾ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಚಳುವಳಿ, ನಾಡಿನ ಏಕೀಕರಣ ಚಳುವಳಿಗಳೆರಡನ್ನೂ ಮೈಮನಗಳಲ್ಲಿ ತುಂಬಿಕೊಂಡ ಘಾಣೇಕರರು, ಸ್ವಂತ ಉದ್ಯೋಗವಾಗಿ ಪುಸ್ತಕೋದ್ಯಮಕ್ಕೆ ಕೈ ಹಾಕಿದರು. ಪರಿಣಾಮ ಉತ್ತರ ಕರ್ನಾ ಟಕದ ಸಮಾಜ ಪುಸ್ತಕಾಲಯ ಕನ್ನಡ ಪುಸ್ತಕ ಮಾರಾಟ ಹಾಗೂ ಸಂಗ್ರಹಕ್ಕೆ ಅಗ್ರಗಣ್ಯವಾಗಿ ತಲೆ ಎತ್ತಿತು. ಒಂದು ಶತಮಾನದಿಂದ ನಿರಂತರವಾಗಿ ಇಂದಿಗೂ ಅತ್ಯಂತ ಉತ್ಕೃಷ್ಟ ಸಾಹಿತ್ಯ ಪ್ರಕಟಿಸುವ ಪ್ರಕಾಶನ ಸಮಾಜ ಪುಸ್ತಕಾಲಯವಾಗಿದೆ. ಮರಾಠಿ ಭಾಷಿಕರಾದರೂ ಕೂಡ ಅವರು ಕನ್ನಡವನ್ನು ತಮ್ಮ ಜೀವನದ ಉದ್ದೇಶ ಮಾಡಿಕೊಂಡು ಅನೇಕ ಸಾಹಿತ್ಯ, ಕಾದಂಬರಿ, ವಿಜ್ಞಾನ ಪುಸ್ತಕ ಸಂಗ್ರಹಗಳನ್ನು, ಮರಾಠಿ ಮತ್ತು ಬಂಗಾಲಿ ಸಾಹಿತ್ಯಗಳ ಭಾಷಾಂತರಗಳನ್ನು ಪ್ರಕಟಿಸಿ ಓದುಗರಿಗೆ ದೊರಕಿಸಿಕೊಡುವ ಕಾರ್ಯ ಶ್ಲಾಘನೀಯ ಎಂದರು.
ಭಾಲಚಂದ್ರ ಘಾಣೇಕರರದು ಹೋರಾಟದ ಜೀವನ. ಅದು ಸಮಾಜದ ಸ್ವಾತಂತ್ರ್ಯಕ್ಕಾಗಿ, ಶಿಕ್ಷಣ ಸಂಸ್ಕೃತಿಯ ಅಭಿವೃದ್ಧಿಗಾಗಿ ನಡೆಸಿದ ಹೋರಾಟ. ಭಾಲಚಂದ್ರರು ಧಾರವಾಡವನ್ನು ಸಾಂಸ್ಕೃತಿಕ ರಾಜಧಾನಿಯಾಗಿ ನಾಡಿನಲ್ಲಿ ಕಂಗೊಳಿಸುವಂತೆ ಶ್ರಮಿಸಿದ ಹಿರಿಯರು. ಇಂದಿನ ಯುವಕರು ಕೇವಲ ವಾಟ್ಸಪ್, ಫೇಸ್ಬುಕ್, ಟ್ವಿಟರ್, ಟಿ.ವಿ. ಮೋಬೈಲ್ ಬೆನ್ನುಬಿದ್ದು ಪುಸ್ತಕ ಸಂಸ್ಕೃತಿಯ ಪ್ರತೀಕವಾದ ಪುಸ್ತಕ ಪ್ರೇಮ, ವಾಚನಾಲಯ ಓದು-ಬರಹ ಮರೆತಿರುವುದು ಖೇದಕರ ಸಂಗತಿ ಎಂದರು. ಪುಸ್ತಕ ಓದುವ ಆನಂದವೇ ಬೇರೆ, ಅದನ್ನು ಆಸ್ವಾದಿಸಿಯೇ ಅನುಭವಿಸಬೇಕು. ಕನ್ನಡ ರಾಜ್ಯೋತ್ಸವವನ್ನು ಆಚರಿಸುವಾಗ ಕನ್ನಡಕ್ಕಾಗಿ ಶ್ರಮಿಸಿದ ಇಂಥ ಕನ್ನಡ ಕಟ್ಟಿದ ಧೀಮಂತರನ್ನು ನೆನೆಯುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಶೋಧಕರು ಮತ್ತು ವಿಶ್ರಾಂತ ಪ್ರಾಧ್ಯಾಪಕ ಡಾ. ಎಂ. ವಾಯ್. ಸಾವಂತರವರು ಮಾತನಾಡಿ, ಸ್ವಾತಂತ್ರ್ಯ ಚಳುವಳಿ ಹಾಗೂ ಕನರ್ಾಟಕ ಏಕೀಕರಣದಲ್ಲಿ ನರಸಿಂಹ ದಾಬಡೆ, ಶಂಕರ ಕುರ್ತಕೋಟಿ ಹಾಗೂ ಗಾಂಧಿಶಾಂತಿ ಪ್ರತಿಷ್ಠಾನದ ಸೇವೆಯನ್ನು 1970 ರಿಂದ ನೆನೆದು ಸಮಾಜ ಪುಸ್ತಕಾಲಯದೊಂದಿಗಿನ ಒಡನಾಟವನ್ನು ಸ್ಮರಿಸುತ್ತಾ ಸಾಹಿತ್ಯ ಪುಸ್ತಕಗಳ ಕರಡು ತಿದ್ದುಪಡಿಯೊಂದಿಗೆ ಪ್ರಕಟಣೆಯವರೆಗೂ ಶ್ರಮವಹಿಸಿ ಪುಸ್ತಕ ಪ್ರಕಟಣೆಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದರು. ಅನೇಕ ಗೆಜೆಟೆರಿಯನ್ಗಳನ್ನು ಕಾಯ್ದಿರಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಇದೇ ಆಧಾರದಲ್ಲಿ ಬ್ರಿಟಿಷ್ ಅಧಿಕಾರಿಗಳು ಧಾರವಾಡ ಗೆಜೆಟಿರಿಯನ್ ಪ್ರಾರಂಭಿಸಿದರು ಎಂದರು. ಮಹಾತ್ಮಾ ಗಾಂಧೀಜಿಯವರ ಬದುಕು, ಪುಸ್ತಕ ಓದು ಭಾಲಚಂದ್ರ ಘಾಣೇಕರರ ಮೇಲೆ ಹೆಚ್ಚು ಪ್ರಭಾವ ಬೀರಿತ್ತು. ಇವರೊಬ್ಬ ಅಪ್ಪಟ ಗಾಂಧೀವಾದಿಯಾಗಿ ಪುಸ್ತಕ ಪ್ರೇಮಿಯಾಗಿದ್ದರು ಎಂದರು.
ದಿ. ಭಾಲಚಂದ್ರ ಘಾಣೇಕರ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ದತ್ತಿ ದಾನಿಗಳಾದ ರವೀಂದ್ರ ಘಾಣೇಕರ ಇದ್ದರು.
ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಸ್ವಾಗತಿಸಿದರು. ಕೋಶಾಧ್ಯಕ್ಷ ಕೃಷ್ಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಶಾಂತೇಶ ಬ. ಗಾಮನಗಟ್ಟಿ ನಿರೂಪಿಸಿ, ವಂದಿಸಿದರು. ಶ್ರೇಯಾ ಕುಲಕಣರ್ಿ ಪ್ರಾಥರ್ಿಸಿದಳು.
ಡಾ. ಆನಂದ ಪಾಟೀಲ, ಜಿ. ಬಿ. ಹೊಂಬಳ, ನರಸಿಂಹ ಪರಾಂಜಪೆ, ಎನ್.ಪಿ. ಭಟ್, ಮಾರ್ಕಂಡೇಯ ದೊಡಮನಿ, ಎಸ್.ಎಂ. ರಾಚಯ್ಯನವರ, ಎಂ.ಬಿ. ಹೆಗ್ಗೇರಿ ಹಾಗೂ ಘಾಣೇಕರ ಪರಿವಾರದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.