ಬುಡಾ ಕಚೇರಿಯ ಮಹಾದ್ವಾರಕ್ಕೆ ಶಂಕುಸ್ಥಾಪನೆ ಮಾಡಿದ ಸಚಿವ ಭೈರತಿ ಬಸವರಾಜ್

ಬಳ್ಳಾರಿ,ಜೂ 29: ನಗರದ ಹೆಚ್.ಆರ್.ಜಿ ಗವಿಯಪ್ಪ ವೃತ್ತದಲ್ಲಿರುವ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಮಹಾದ್ವಾರದ ಶಂಕುಸ್ಥಾಪನೆಯನ್ನು ಸೋಮವಾರ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಅವರು ನೆರವೇರಿಸಿದರು.

ಒಟ್ಟಾರೆ 59.15 ಲಕ್ಷ ರೂ.ಗಳ ಈ ಯೋಜನೆಯಡಿ ಪ್ರಾಧಿಕಾರದ ಆವರಣದ ಸುತ್ತ ಚೈನ್ ಲಿಂಕ್ ಮೆಶ್ ಗೇಟ್ ಅಳವಡಿಸಿಕೆ, ಸಸಿ ನೆಡುವುದು, ಠೇಕೂರ್ ಸುಬ್ರಮಣ್ಯಂ ಉದ್ಯಾನವನ ಅಭಿವೃದ್ಧಿ, ಸ್ವಾಗತ ಕಮಾನು, ವಿದ್ಯುತ್ ದೀಪಗಳ ಅಳವಡಿಕೆ ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಒಳಗೊಂಡಿರುತ್ತದೆ.

   ಈ ಸಂದರ್ಭದಲ್ಲಿ ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್, ಶಾಸಕ ಸೋಮಶೇಖರ್ ರೆಡ್ಡಿ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ರಾಬಕೋ ಹಾಲು ಒಕ್ಕೂಟದ ನಿದರ್ೆಶಕ ವೀರಶೇಖರ ರೆಡ್ಡಿ, ಬುಡಾ ಆಯುಕ್ತ ಈರಪ್ಪ ಬಿರಾದಾರ್, ಅಭಿಯಂತರರಾದ ರವಿಶಂಕರ, ಪಾಲಿಕೆ ಸದಸ್ಯರು, ಮುಖಂಡರು ಸೇರಿದಂತೆ ಇತರರು ಇದ್ದರು.