ಭಗೀರಥ ಮಹರ್ಷಿ ಮನುಕುಲದ ಉದ್ದಾರಕ : ಮಹಾಂತೇಶ ಹಿಟ್ಟಿನಮಠ
Bhagirath Maharshi is the uplifter of mankind : Mahantesh Hittinamatha
ಲೋಕದರ್ಶನ ವರದಿ
ಮಹಾಲಿಂಗಪುರ 24 : ತನ್ನ ಪೂರ್ವಜರ ಮುಕ್ತಿಗಾಗಿ ಸ್ವರ್ಗದಲ್ಲಿದ್ದ ಪವಿತ್ರ ಗಂಗಾನದಿಯನ್ನು ಕಠಿಣ ತಪಸ್ಸಿನ ಮೂಲಕ ಭೂಮಿಗೆ ಕರೆತಂದ ಮಹಾನ್ ಛಲವಾದಿ ಭಗೀರಥ ಮಹರ್ಷಿ ಮನುಕುಲದ ಉದ್ದಾರಕರಾಗಿದ್ದರು ಎಂದು ಜಿಲ್ಲಾ ಪಂಚಾಯತ್ ಬಾಗಲಕೋಟ ಮಾಜಿ ಅಧ್ಯಕ್ಷರಾದ ಮಹಾಂತೇಶ ಹಿಟ್ಟಿನಮಠ ಹೇಳಿದರು. ಅವರು ನಗರದ ಕೆಂಗೇರಿ ಮಡ್ಡಿಯಲ್ಲಿರುವ ಮಹರ್ಷಿ ಭಗೀರಥ ದೇವಸ್ಥಾನದ ಭವನದಲ್ಲಿ ಮಹರ್ಷಿ ಭಗೀರಥ ಉಪ್ಪಾರ ಸಮಾಜ ಸೇವಾ ಸಂಘ ಮಹಾಲಿಂಗಪುರ ಇವರ ಆಶ್ರಯದಲ್ಲಿ ಮಹರ್ಷಿ ಭಗೀರಥ ದೇವಸ್ಥಾನದ 16ನೇ ವಾರ್ಷಿಕೋತ್ಸವ ಮತ್ತು ಭಗೀರಥ ಜಯಂತ್ಯೋತ್ಸವ ಹಾಗೂ ಭಗೀರಥ ಜಾತ್ರಾಮಹೋತ್ಸವದ ಧಾರ್ಮಿಕ ಸಭೆಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಗರ ಮಹಾರಾಜನ ವಂಶಸ್ಥನಾದ ಭಗೀರಥನು ತನ್ನ ಪೂರ್ವಜರ ಪಾಪಗಳನ್ನು ತೊಳೆದು ಮುಕ್ತಿ ನೀಡಲು ಗಂಗೆಯನ್ನು ಭೂಲೋಕಕ್ಕೆ ತರಲು ಸಂಕಲ್ಪಿಸಿ ಶಿವನನ್ನು ಕುರಿತು ಘೋರ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಆತನ ಜಟೆಯಿಂದ ಗಂಗೆಯು ಭೂಮಿಗೆ ಹರಿದುಬರುವಂತೆ ಮಾಡಿ ಜೀವ ಸಂಕುಲ ಉದ್ದರಿಸಿದ ಮಹಾ ತಪಸ್ವಿ ಎಂದರು.
ನಂತರ ಮಾತನಾಡಿದ ಭಾರತೀಯ ಸಂಸ್ಕೃತಿ ಇಡೀ ವಿಶ್ವದಲ್ಲಿಯೇ ವಿಶೇಷತೆ ಹೊಂದಿದ್ದು.ಅನೇಕ ದಾರ್ಶನಿಕರು, ಸಾಧು ಸಂತರು, ಸತಪುರುಷರನ್ನು ಜಗತ್ತಿಗೆ ಕೊಡುಗೆ ನೀಡಿದೆ ಅವರೆಲ್ಲರೂ ಸಕಲ ಮನುಕುಲಕ್ಕೆ ದಾರೀದೀಪವಾಗಿದ್ದರೆ ಅಂಥವರಲ್ಲಿ ಮಹರ್ಷಿ ಭಗೀರಥರು ಪ್ರಮುಖರು. ಎಂದರು. ತೇರದಾಳ್ ಮತಕ್ಷೇತ್ರದ ಕಾಂಗ್ರೆಸ್ ನಾಯಕಿ ಕವಿತಾ ಕೊಣ್ಣೂರು ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಸಿ ಮಾತನಾಡಿ ಮಹಾರಾಜರಾಗಿದ್ದ ಭಗೀರಥರು ತ್ಯಾಗ, ಹಟ, ಛಲದಿಂದ ಸಾಧನೆ ಮಾಡಿದರು ಪ್ರತಿಯೊಬ್ಬರೂ ತಮ್ಮ ಗುರಿ ಮುಟ್ಟಲು ಅಥವಾ ಸಾಧನೆ ಮಾಡಲು ಭಗೀರಥರ ಸತತ ಪರಿಶ್ರಮ, ತ್ಯಾಗ, ಛಲ, ಸದ್ಗುಣಗಳನ್ನು ಅನುಸರಿಸಬೇಕು, ಎಲ್ಲ ದಾರ್ಶನಿಕರ ಜೀವನ ಚರಿತ್ರೆ, ಜೀವನಗಾಥೆ, ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಆರ್ಥಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಯಾವುದೇ ಸಮುದಾಯದ ಸಂಖ್ಯಾಬಲ ಮುಖ್ಯ ಅಲ್ಲ ಅದು ಎಷ್ಟರ ಮಟ್ಟಿಗೆ ಸಂಘಟನೆಯಾಗಿದೆ ಎನ್ನುವುದೇ ಮುಖ್ಯ ಎಂದರು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪಪೂ ಪ್ರಭು ಮಹಾಸ್ವಾಮಿಗಳು ಚಿಮ್ಮಡ ಸಗರ ಚಕ್ರವರ್ತಿಯು ಅಶ್ವಮೇಧ ಯಾಗವನ್ನು ಮಾಡುವಾಗ ಯಾಗದ ಕುದುರೆಯನ್ನು ಇಂದ್ರನು ಕದ್ದು ಕಪಿಲ ಮುನಿಗಳ ಆಶ್ರಮದಲ್ಲಿ ಕಟ್ಟುತ್ತಾನೆ. ಅದನ್ನು ಹುಡುಕಿಕೊಂಡು ಬಂದ ಸಗರನ 60 ಸಾವಿರ ಮಕ್ಕಳು ಕಪಿಲ ಮುನಿಗಳಿಗೆ ಅಪರಾಧವೇಸುಗುತ್ತಾರೆ. ಕೋಪಗೊಂಡ ಮುನಿಗಳು ಅವರನ್ನು ಸುಟ್ಟು ಭಸ್ಮ ಮಾಡುತ್ತಾರೆ. ಆ ಭಸ್ಮರಾಶಿಯನ್ನು ಮುಟ್ಟಿದರೆ ಮಾತ್ರ ಅವರಿಗೆ ಮುಕ್ತಿ ದೊರೆಯುತ್ತದೆ. ಅದಕ್ಕಾಗಿ ಸ್ವರ್ಗದಲ್ಲಿರುವ ಗಂಗೆಯನ್ನು ಭೂಮಿಗೆ ತರಬೇಕಾಗುತ್ತದೆ ಆದರೆ ಸಗರನಾಗಲಿ ಆತನ ಮಗ ಅಂಜುಂತನಾಗಲಿ, ಭಗೀರಥನ ತಂದೆ ದೀಲೀಪನಾಗಲಿ ಇದರಲ್ಲಿ ಯಶಸ್ವೀಯಾಗಲಿಲ್ಲ. ತನ್ನ ಪೂರ್ವಜರ ಉದ್ದಾರಕ್ಕಾಗಿ ಭಗೀರಥನು ಸಿಂಹಾಸನವನ್ನು ತ್ಯಜಿಸಿ ಹಿಮಾಲಯಕ್ಕೆ ತೆರಳಿ ದೇವಗಂಗೆಯನ್ನು ಕುರಿತು ಘೋರ ತಪಸ್ಸನ್ನು ಮಾಡಿದ. ಅವನ ತಪಸ್ಸಿಗೆ ಮೆಚ್ಚಿದ ಗಂಗೆಯು ಪ್ರತ್ಯಕ್ಷಳಾಗಿ "ನಾನು ಭೂಮಿಗೆ ಇಳಿಯಲು ಸಿದ್ದಳಿದ್ದೇನೆ. ಆದರೆ ನನ್ನ ರಭಸವನ್ನು ತಡೆದುಕೊಳ್ಳುವ ಶಕ್ತಿ ಭೂಮಿಗಿಲ್ಲ ನನ್ನ ರಭಸವನ್ನು ತಡೆಯಬಲ್ಲವರು ಯಾರು ಎಂದು ಕೇಳುತ್ತಾಳೆ.
ಶಿವನೊಬ್ಬನೇ ಗಂಗೆಯ ರಭಸವನ್ನು ತಡೆಯಬಲ್ಲವನು ಎಂದು ತಿಳಿದ ಭಗೀರಥನು ಶಿವನನ್ನು ಕುರಿತು ಮತ್ತೆ ಕಠಿಣ ತಪಸ್ಸನ್ನು ಮಾಡುತ್ತಾನೆ. ಶಿವನು ಭಗೀರಥನ ಭಕ್ತಿಗೆ ಮೆಚ್ಚಿ ಗಂಗೆಯು ತನ್ನ ಜಟೆಯ ಮೂಲಕ ಹರಿಯುವಂತೆ ಅನುಗ್ರಹಿಸುತ್ತಾನೆ. ಹೀಗೆ ಗಂಗೆಯು ಶಿವನ ಜಟೆಯಲ್ಲಿ ಹರಿದು ನಂತರ ಭೂಮಿಗೆ ಇಳಿದು ಭಗೀರಥನ ಹಿಂದೆ ಸಾಗುತ್ತಾಳೆ. ದಾರಿಯಲ್ಲಿ ಜಹ್ನು ಎಂಬ ಮಹರ್ಷಿಯ ಆಶ್ರಮ ಮುಳುಗುತ್ತದೆ ಮುನಿಯು ಕೋಪಗೊಂಡು ಗಂಗೆಯನ್ನು ಪಾನ ಮಾಡುತ್ತಾನೆ ನಂತರ ಭಗೀರಥನ ಮಹರ್ಷಿಯ ಪ್ರಾರ್ಥನೆಗೆ ಮೆಚ್ಚಿ ಗಂಗೆಯನ್ನು ತನ್ನ ಕಿವಿಯ ಮೂಲಕ ಹೊರಬಿಡುತ್ತಾರೆ ಇದರಿಂದ ಗಂಗೆಗೆ" ಜಾಹ್ನವಿ " ಎಂಬ ಹೆಸರು ಬರುತ್ತದೆ. ಗಂಗೆಯು ಭಗೀರಥನ ಹಿಂದೆ ಸಾಗುತ್ತಾ ಪಾತಾಳವನ್ನು ತಲುಪಿ ಸಗರನ ಮಕ್ಕಳ ಭಸ್ಮರಾಶಿಯನ್ನು ಸ್ಪರ್ಶಿಸಿ ಅವರಿಗೆ ಮುಕ್ತಿ ನೀಡುತ್ತಾಳೆ.ಎಂದರು ನಂತರ ಮಾತನಾಡಿದ ಶ್ರೀಮತಿ ಗೀತಾ ತೆಗ್ಗಿಹಾಳ ತಂದೆ ತಾಯಿ ಮಕ್ಕಳಿಗೆ ಮೊದಲು ಸಂಸ್ಕಾರ ಕೊಡಿ ಸಂಸ್ಕಾರ ಪಡೆದ ಮಕ್ಕಳು ಸುಂದರ ಜೀವನ ರೂಪಿಸಿಕೊಳ್ಳುತ್ತಾರೆ. ಬಡತನ ಶಾಶ್ವತ ಅಲ್ಲ ಕಷ್ಟ್ ಪಟ್ಟು ಓದಿದರೆ ಬಡತನವನ್ನು ಕಿತ್ತೂಹಾಕಬಹುದು ಮನೆಯಲ್ಲಿ ಏನೇ ಕಷ್ಟ್ ಇದ್ದರು ಓದು ಕಲಿಸುವುದನ್ನು ನಿಲ್ಲಿಸಬೇಡಿ.
ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ಬದಲು ಪುಸ್ತಕ ಕೊಡಿ ಮೊಬೈಲ್ ಬಳಕೆ ಎಷ್ಟು ಒಳ್ಳೆಯದು ಇದೆ ಆದರ ಎರದಷ್ಟು ಅಪಾಯಕಾರಿಯಾಗಿದೆ. ಪಾಲಕರು ಮಕ್ಕಳ ಮೇಲೆ ನಿರಂತರ ನಿಗಾ ಇಡಬೇಕು. ಮಕಳಲ್ಲಿ ಆಗುವ ಬದಲಾವಣೆ ಆಗಾಗ ಗಮಸಿ ಅವರಿಗೆ ಉಪಯುಕ್ತ ಸಲಹೆ ಸೂಚನೆ ಕೊಟ್ಟು ಸರಿ ದಾರಿಗೆ ತರಬೇಕು. ಮಕ್ಕಳ ಮೇಲೆ ಸಾಮಾಜಿಕ ಜಾಲ ತಾಣಗಳು ಅತ್ಯಂತ ಕೆಟ್ಟ ಪರಿಣಾಮ ಬಿರುತ್ತಿವೆ. ಮಕ್ಕಳನ್ನು ತಮ್ಮ ಆಕರ್ಷಣೆ ಮಾಡುತ್ತಿವೆ. ಮಕ್ಕಳ ಉನ್ನತ ಶಿಕ್ಷಣಕ್ಕೆ ನಾನು ಸಮಾಜದ ಋಣ ತೀರಿಸುವ ಪ್ರಯತ್ನವಾಗಿ ಮಕ್ಕಳ ಓದಲು ಗ್ರಂಥಾಲಯ ಬಹಳ ಅವಶ್ಯಕತೆ ಇದೆ ಅದಕ್ಕೆ ವ್ಯವಸ್ಥೆ ಮಾಡಿದರೆ ಅದಕ್ಕೆ ಬೇಕಾಗುವ ಎಲ್ಲ ಪುಸ್ತಕಗಳನ್ನು ಕೊಡುಗೆ ನೀಡುವುದಾಗಿ ವಾಗ್ದಾನ ಮಾಡಿದರು. ಭಗೀರಥ ಹೆಸರಿನಲ್ಲಿಯೇ ಅದ್ಭುತವಾದ ಶಕ್ತಿ ಇದೆ. ಸಾಕ್ಷಾತ ಶಿವನ ಸ್ವರೂಪವೆ ಭಗೀರಥರು. ತಮ್ಮ ತಪಸ್ಸಿನ ಫಲದಿಂದ ಗಂಗೆಯನ್ನು ಹರಿಸಿ ಜಗತ್ತಿನ ಜಲಕ್ಷಾಮ ನಿಗಿಸಿದರು ಅವರ ತತ್ವ ಸಂದೇಶಗಳು ಸರ್ವಕಾಲಿಕ ಶ್ರೇಷ್ಠವಾಗಿವೆ ಎಂದರು.
ಭವ್ಯ ಮೆರವಣಿಗೆ : ಜಗದ್ಗುರು ಮಹಾಲಿಂಗೇಶ್ವರ ದೇವಸ್ಥಾನದಿಂದ ಶ್ರೀಗಳ ಪೂಜೆಯಿಂದ್ ಸಕಲ ಮಂಗಲವಾದ್ಯ ಮುತೈದೆಯರ ಕುಂಭ ಮೇಳ ಆರತಿಯೊಂದಿಗೆ ಆರಂಭಗೊಂಡ ಮೆರವಣಿಗೆ ನಡುಚೌಕಿ, ಜವಳಿ ಬಜಾರ, ಗಾಂಧಿ ವೃತ್ತ, ಪುರಸಭೆ, ಭಗೀರಥ ವೃತ್ತ, ಶಾದಿ ಮಹಲ್, ಕೆಂಗೇರಿ ಮಡ್ಡಿ ಕನಕ ಸಾಯಿ ವೃತ್ತ, ಅಂಬೇಡ್ಕರ್ ವೃತ್ತ,ದ ಮೂಲಕ ಭಗೀರಥ ದೇವಸ್ಥಾನ ತಲುಪಿತು.
ವಿಶೇಷ ಪೂಜೆ : ಬೆಳ್ಳಿಗ್ಗೆ ಹೋಮ ಹವನ ಮಹಾ ಪೂಜೆ ಜರುಗಿತ್ತು ಭಗೀರಥರ ಮೂರ್ತಿಗೆ ವಿಶೇಷ ಅಲಂಕಾರ ಮಾಡಿದ್ದು ನೋಡುಗ ಭಕ್ತರ ಕಣ್ಮನ ತುಂಬಿಕೊಂಡು ಪುನೀತರಾದರು. ಈ ಸಂಧರ್ಭದಲ್ಲಿ ಬೆಳಗಲಿಯ ಸಿದ್ದರಾಮ ಸ್ವಾಮೀಜಿ,ಏನ್ ಆರ್ ಲಾತುರ, ಸಂಗಪ್ಪ ಹಲ್ಲಿ ಸುರೇಶ ಲಾತುರ, ಡಾ. ಬಿ ಡಿ ಸೊರಗಾವಿ, ಮಾತನಾಡಿದರು. ರಮೇಶ್ ಲಾತುರ, ದೇವೇಂದ್ರ ಲಾತುರ, ಎಂ ಎಲ್ ಜಿಟ್ಟದ, ಪ್ರಶಾಂತ್ ಚಿಲ್ಲಾಪುರ, ಶಂಕರಗೌಡ ಪಾಟೀಲ, ಚನ್ನಬಸು ಹೊಸೂರ್, ಪರ್ಪ ಬ್ಯಾಕೋಡ, ಭೀಮಶಿ ಸಸಾಲಟ್ಟಿ, ಬಸಪ್ಪ ಗೋಪಾಳಿ, ಭೀಮಶಿ ಪಾಟೀಲ, ಶಂಕರ ಸಿದ್ದಾಪುರ, ಯಲ್ಲಪ್ಪ ದೊಬಸಿ, ಸುರೇಶ ಪಾಟೀಲ, ಹಣಮಂತ ಉಪ್ಪಾರ, ಶ್ರೀಶೈಲ್ ದೊಡ್ಡಮನಿ, ಅಲ್ಲಪ್ಪ ಗುಂಜಿಗಾವಿ, ಬಸವರಾಜ್ ನಾಗನೂರ, ಲಕ್ಕಪ್ಪ ಲಾತುರ, ಪರ್ಪ ಹುದ್ದಾರ, ಅಶೋಕ್ ಸಿದ್ದಾಪುರ, ಮಲ್ಲಪ್ಪ ಲಾತುರ, ಚನ್ನಪ್ಪ ಪುರಾಣಿಕ, ಅರ್ಜುನ್ ಸಣ್ಣಕ್ಕಿ, ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಷ್ಣು ಲಾತುರ ನಿರೂಪಿಸಿ ವಂದಿಸಿದರು. ಅನೇಕ ಗಣ್ಯ ಮಾನ್ಯರನ್ನು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಹಾಪ್ರಸಾದ ಜರುಗಿತು.
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 