ವಂಚನೆಕಾರರಿಂದ ಎಚ್ಚರವಹಿಸಿ : ಪಿಎಸೈ ಕಿರಣ್ ಸತ್ತಿಗೇರಿ
Beware of fraudsters: PSI Kiran Sattigeri
ಮಹಾಲಿಂಗಪುರ 03: ಆಕರ್ಷಕ ಯೋಜನೆಗಳು ಮತ್ತು ಹಲವು ಆಮಿಷಗಳಿಗೆ ಒಳಗಾಗದೆ, ಕಂಪ್ಯೂಟರ ಹಾಗೂ ಅಂತರ್‌ಜಾಲದ ಮೂಲಕ ಜಾಣರೇ ನಡೆಸುವ ಇಂತಹ ಕೃತ್ಯಗಳಿಂದ ರಕ್ಷಣೆ ಪಡೆಯಬೇಕು. ಈ ದಿಶೆಯಲ್ಲಿ ಪೊಲೀಸ ಇಲಾಖೆಯ ಇಂತಹ ಅರಿವಿನ ಕಾರ್ಯಕ್ರಮಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಮತ್ತು ಜನತೆ ಪಡೆದುಕೊಳ್ಳಬೇಕು. ಬ್ಯಾಂಕ್‌ನಿಂದ ಹಣ ತರುವಾಗ ಜಾಗೃತಿ ವಹಿಸಿ ಜೊತೆಗೆ ಗೋಹತ್ಯೆ ನಿಷೇಧ ಕಾನೂನು ಬಾಹಿರ ಚಟುವಟಿಕೆ ಎಂದು ಮಹಾಲಿಂಗಪುರ ಪೊಲೀಸ್ ಠಾಣಾಧಿಕಾರಿ ಕಿರಣ್ ಸತ್ತಿಗೇರಿ ಹೇಳಿದರು.
ಸಮೀಪದ ಗ್ರಾಮಗಳಾದ ಕೆಸರಗೊಪ್ಪ, ಮಾರಾಪುರ, ಸಂಗಾನಟ್ಟಿ, ಮದಬಾವಿ, ಡವಳೇಶ್ವರ ಗ್ರಾಮಗಳಿಗೆ ತೆರಳಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಸೈಬರ್ ಅಪರಾಧ, ರಸ್ತೆ ಸುರಕ್ಷತೆ, ಮಹಿಳೆ ಮತ್ತು ಮಕ್ಕಳ ರಕ್ಷಣೆ ಮುಂತಾದ ಅಪರಾಧಗಳ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಾಗಲಕೋಟ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೋಮವಾರ ಜಾಗೃತಿ ಜಾಥಾ ಕಾರ್ಯಕ್ರಮಡಲ್ಲಿ ಭಾಗವಹಿಸಿ ವರ್ಕ ಫ್ರಾಮ್ ಹೋಂ ಎಂಬ ವಾಟ್ಸಾಪ್ ಗ್ರುಪ್ ಬಗ್ಗೆಯೂ ಜನತೆ ಎಚ್ಚರದಿಂದಿದ್ದು, ಯಾವುದೇ ಮಾಹಿತಿಯನ್ನು ನೀಡಬಾರದು ಎಂದು ಸಲಹೆ ನೀಡಿದರು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಕೆಲವರು ದರ್ಬಳಕೆ ಮಾಡಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಆನಲೈನ್ ವ್ಯಹಾರಗಳಿಗೆ ಆಸೆಗೆ ಬಿದ್ದು, ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ, ಜಾಗರೂಕರಾಗಿರಿ ಎಂದರು
ನಂತರ ಪಿಎಸೈ ಮಧು ಎಲ್ ಮಾತನಾಡಿ ಬಾಲ್ಯವಿವಾಹ ಮಾಡುವುದು ಕಾನೂನು ಬಾಹಿರ ಅಪರಾಧ, ಎಂಬುದರ ಬಗ್ಗೆ ಜನ ತಿಳಿದುಕೊಳ್ಳಬೇಕು. ಬಾಲ್ಯವಿವಾಹ ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಿ.ಸೈಬರ್ ಅಪರಾಧಗಳು ಕೂಡ ಇತ್ತೀಚೆಗೆ ಹೆಚ್ಚಾಗಿವೆ. ತಮ್ಮ ಹಣವನ್ನು ಸೈಬರ್ ಅಪರಾಧದಲ್ಲಿ ಕಳೆದುಕೊಂಡರೆ ಒಂದು ಗಂಟೆ ಒಳಗೆ ಗೋಲ್ಡನ್ ಅವರ್ ಅಂತ ಇದ್ದು 1390 ನಂಬರ್ ಗೆ ಕರೆ ಮಾಡುವಂತೆ ತಿಳಿಸಿ.ವಾಹನ ಚಲಾವಣೆ ಪರವಾನಿಗೆಯ ಜೊತೆಗೆ ಹೆಲ್ಮೆಟ್ ಕಡ್ಡಾಯವಿರಲಿ, ಕಳ್ಳತನ ಬಗ್ಗೆ ಎಚ್ಚರಿಕೆ ಇರಲಿ.ಮಹಿಳೆಯರ ಕಾನೂನು ಜೊತೆಗೆ ಶಿಕ್ಷಣ,ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಕರ್ತವ್ಯ ಅತಿ ಮುಖ್ಯ ಎಂದರು.
ಪೊಲೀಸ್ ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 