2026ರ ಅಂತ್ಯಕಾಲಕ್ಕೆ ಬೆಂಕಿ ಮಳೆ ಆದೀತು ಎಚ್ಚರ: ಕಾಲಜ್ಞಾನವನ್ನು ಸಾರಿದ ಅರ್ಚಕ

2026ರ ಅಂತ್ಯಕಾಲಕ್ಕೆ ಬೆಂಕಿ ಮಳೆ ಆದೀತು ಎಚ್ಚರ: ಕಾಲಜ್ಞಾನವನ್ನು ಸಾರಿದ ಅರ್ಚಕ  Beware, it will rain fire by the end of 2026: Priest preaches time wisdom

ಲೋಕದರ್ಶನ ವರದಿ, 

ಜಮಖಂಡಿ 17: ರಬಕವಿ-ಬನಹಟ್ಟಿ ತಾಲ್ಲೂಕಿನ ಹನಗಂಡಿ ಗ್ರಾಮದಲ್ಲಿ ದಿಗಂಬರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಾಗೂ ಜಾತ್ರಾಮಹೋತ್ಸವದ ಅಂಗವಾಗಿ 2026ರ ಕಾಲಜ್ಞಾನದಲ್ಲಿ ಕರ್ನಾಟಕದಾಗ ಖುರ್ಚಿ ಸಲವಾಗಿ ಇಬ್ಬರ ಜಗಳ ಮೂರನೆದವರಿಗೆ ಲಾಭ, ಭಾರತ ದೇಶದ ಪ್ರಧಾನಿ ಕಂಟಕ ಬಾಳಬರತ್ತಾವ ಆದರೂ ಪರಿಹಾರ ಆಗತ್ತಾವ, 2026ರ ಅಂತ್ಯಕಾಲಕ್ಕೆ ಬೆಂಕಿ ಮಳೆ ಆದೀತು ಎಚ್ಚರ ಎಂದು ದೇವಸ್ಥಾನ ಅರ್ಚಕರು ಕಾಲಜ್ಞಾನವನ್ನು ಸಾರಿದರು. 

ಹನಗಂಡಿ ಗ್ರಾಮದ ದಿಗಂಬರೇಶ್ವರ ದೇವಸ್ಥಾನದಲ್ಲಿ ನಡೆದ 2026 ರ ಕಾಲಜ್ಞಾನವನ್ನು ಸಾರಿದ ಅವರು, ಮಳೆ 9 ಆಣೆ, 7 ಆಣಿ ಬೆಳೆ, ಮುಂಗಾರು ಮೂರು ಸುಳ್ಳು ಆಗತಾವ, ಹಿಂಗಾರಿ ಎರಡು ಹೋಗತಾವ, ಬೆಳೆಗೆ ಬೆಂಕಿ ರೋಗ ಬಾಳ ಐತಿ, ಬೆಲ್ಲ ಬಲ್ಲಾಂಗ್ ಮಾರತೈತಿ, ಗೋಧಿ, ಕಡಲೆ, ಅಡಕಿ ಕಾಳ ದಿನಸು ತುಟ್ಟಿಲೇ ಮಾರಿತು, ಶ್ರಾವಣ ತಿಂಗಳದಾಗ ಬೀರುಗಾಳಿ, ಭೂಕಂಪದ ಭಯ ಐತಿ, ಉತ್ತರ ದಿಕ್ಕಿನ ಒಂದ ದೇಶ ಭೂಪಟದಿಂದ ಮರೆಯಾದಿತು, ಕರ್ನಾಟಕದಾಗ ಖುರ್ಚಿ ಸಲವಾಗಿ ಇಬ್ಬರ ಜಗಳ ಮೂರನೆದವರಿಗಿ ಲಾಭ, ದಡ್ಡ ದಡ್ಡರು ಕೂಡಿಕೊಂಡ ದೊಡ್ಡವರಿಗೆ ಬೆಂಕಿ, ಧರ್ಮದ ದಾರಿಯಲ್ಲಿ ನಡಿರಿ, ಅಧರ್ಮ ಹಾಳ ಮಾಡಿತು, ಪತ್ರಿಯೊಂದ ಊರಾಗ ದುರ್ಗಾ ದೇವಿ ವಾರ ಸರಿಯಾಗಿ ಮಾಡಿದರ ಸುಖಾ ಐತಿ, ಕಾರ್ತಿಕ ಮಾಸದಾಗ ಭೂಮಿಗೆ ಕತ್ತಲು ಕವಿದಿತು ಎಚ್ಚರಿಕೆ ಇರಬೇಕು, 2026ರ ಅಂತ್ಯಕಾಲಕ್ಕೆ ಬೆಂಕಿ ಮಳೆ ಆದಿತು ಎಚ್ಚರ, ಭಾರತ ದೇಶದ ಪ್ರಧಾನಿ ಕಂಟಕ ಬಾಳಬರತ್ತಾವ ಆದರೂ ಪರಿಯಾರ ಆಗತ್ತಾವ ಎಂದು 2026ರ ಕಾಲಜ್ಞಾನವನ್ನು ದಿಗಂಬರೇಶ್ವರ ದೇವಸ್ಥಾನ ಅರ್ಚಕರು ಸಾರಿದರು. 

ಬೆಂಕಿಯ ಕೆನ್ನಾಲೆಯ ಅಗ್ನಿಯನ್ನು ಹಾಯ್ದು. ಬೆಂಕಿಯ ಕೆಂಡವನ್ನು ಸಿಂಪಡಿಸಿದರು. ನೀರು ತುಂಬಿದ ಬಿಂದಿಗೆಗಳಿಂದ ನೀರನ್ನು ಸುರಿದರು. ಯಾವ ದಿಕ್ಕಿನಲ್ಲಿ ಹೆಚ್ಚು ನೀರು ಸುರಿಯುತ್ತಾರೆ ಆ ದಿಕ್ಕಿನಲ್ಲಿ ಮಳೆಯಾಗುತ್ತದೆ ಎಂಬ ಅರ್ಥ. ಯಾವ ದಿಕ್ಕಿನಲ್ಲಿ ಬೆಂಕಿಯ ಕೆಂಡಗಳನ್ನು ಹಾರಿಸುತ್ತಾರೆ ಆ ದಿಕ್ಕಿನಲ್ಲಿ ಕೆಡಗಾಲ ಸಂಭವಿಸುತ್ತಿದೆಂದು ಅರ್ಥೈಸಿಕೊಳ್ಳುತ್ತಾರೆ. ಈ ಭಾಗದ ಜನರು. 2026 ರ ಕಾಲಜ್ಞಾನವನ್ನು ಕೇಳಲು ನಸುಕಿನ ಜಾವನದಲ್ಲಿ ಸಾವಿರಾರು ಭಕ್ತರು ಬಂದು ಕಾಲಜ್ಞಾನವನ್ನು ಕೇಳಿದರು. 

ದಿಗಂಬರೇಶ್ವರ ದೇವಸ್ಥಾನ ಅರ್ಚಕರಾದ ಸಿದ್ದಪ್ಪ ಪೂಜಾರಿ, ಹನುಮಂತ ಪಾಟೀಲ, ಶ್ರೀಶೈಲ ಪಾಟೀಲ, ಶಂಕರ ಪಾಟೀಲ, ಬಸವರಾಜ ಪಾಟೀಲ, ಮಲ್ಲಪ್ಪ ಪಾಟೀಲ ಕಾಲಜ್ಞಾನವನ್ನು ಸಾರಿದರು.