ಕಲ್ಯಾಣ ಕರ್ನಾಟಕ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ
Best Woman Entrepreneur Award by Kalyan Karnataka Institute of Entrepreneurship and Industry
ಕಲ್ಯಾಣ ಕರ್ನಾಟಕ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ
ಗಂಗಾವತಿ 27: ಕಲ್ಯಾಣ ಕರ್ನಾಟಕ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಕಲಬುರ್ಗಿ ಈ ಸಂಸ್ಥೆಯಿಂದ ಕೊಡ ಮಾಡುವ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ, ಇಲ್ಲಿನ ನಗರದ ಸಗಟು ಓಷಧ ಮಾರಾಟಗಾರರಾದ ಸಂಧ್ಯಾ ಪಾರ್ವತಿ ಹೇರೂರ ಅವರಿಗೆ ಲಭಿಸಿದೆ.ಇವರೊಂದಿಗೆ ನಮ್ರತಾ ಪಟಾಟೆ, ಶೀತಲ ಗಿಲ್ಡಾ, ಕುಮಾರಿ ನಂದಿನಿ ರಘೊಜಿ ಇವರುಗಳಿಗೂ ಗಣರಾಜ್ಯೊತ್ಸವ ದಿನವಾದ ಜನವರಿ-29 ರಂದು ಈ ಕಲಬುರ್ಗಿಯ ಎಮ್.ಆರ್.ಎಮ್.ಸಿ. ಮೆಡಿಕಲ್ ಕಾಲೇಜಿನ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.2021 ರಲ್ಲಿ ಕರ್ನಾಟಕ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಮಹಾ ಮಂಡಳಿ ಬೆಂಗಳೂರು ಈ ಸಂಸ್ಥೆ ನೀಡುವ ಮಹಿಳಾ ಶ್ರೇಷ್ಠ ವ್ಯಾಪಾರಿ ಪ್ರಶಸ್ತಿಯನ್ನು ಮತ್ತು ಗಂಗಾವತಿಯ ಮಹಿಳಾ ಸಂಘದಿಂದ ನೀಡಲಾದ ಉತ್ತಮ ಮಹಿಳಾ ಪ್ರಶಸ್ತಿಯನ್ನು ಸಂಧ್ಯಾ ತಮ್ಮದಾಗಿಸಿಕೊಂಡಿದ್ದರು.ಪ್ರಸ್ತುತ ಗಂಗಾವತಿ ತಾಲೂಕು ವೀರಶೈವ ಮಹಾ ಸಭಾ ಘಟಕದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಸಂಧರ್ಭದಲ್ಲಿ ಸಣ್ಣ ಕೈಗಾರಿಕಾ ಖಾತೆಯ ಸಚಿವ ಶರಣಪ್ಪ ದರ್ಶನಾಪೂರ,ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಸಿ,ಮಾಜಿ ಸದಸ್ಯ ಅಮರನಾಥ ಪಾಟೀಲ್, ಕಲ್ಯಾಣ ಕರ್ನಾಟಕ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಬಿ.ಪಾಟೀಲ್, ಮಾಜಿ ಅಧ್ಯಕ್ಷ ಪ್ರಶಾಂತ ಎಸ್.ಮಾನಕರ್,ಉಪಾಧ್ಯಕ್ಷ ಚನ್ನ ಮಲ್ಲಿಕಾರ್ಜುನ ಅಕ್ಕಿ ಯಾದಗಿರಿ, ಕಾರ್ಯದರ್ಶಿ ಮಂಜುನಾಥ ಜೆವರ್ಗಿ, ಮಾಜಿ ಕಾರ್ಯದರ್ಶಿ ಶರಣಬಸಪ್ಪ ಎಮ್.ಪಪ್ಪಾ ಮತ್ತು ಸಂಸ್ಥೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.ಈ ಸಂಧರ್ಭದಲ್ಲಿ ಸಂಧ್ಯಾ ಅವರ ಪತಿ ಅಶೋಕಸ್ವಾಮಿ ಹೇರೂರ, ಮಕ್ಕಳಾದ ಡಾ.ಅಭಿಷೇಕಸ್ವಾಮಿ, ಡಾ.ಅಭಿಲಾಷಾ ಹಾಜರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 