ಬೆಣ್ಣಿಹಳ್ಳಿ ಇಂಚಗೇರಿ ಮಾಧವಾನಂದ ಮಠಕ್ಕೆ 10 ಲಕ್ಷ ರೂ. ಅನುದಾನ: ಈರಣ್ಣಾ ಕಡಾಡಿ
Bennihalli Inchageri Madhavananda Matha gets Rs. 10 lakh grant: Iranna Kadadi
ಚಿಕ್ಕೋಡಿ 31: ಬೆಣ್ಣಿಹಳ್ಳಿಯ ಇಂಚಗೇರಿ ಮಾಧವಾನಂದ ಮಠದ ಪ್ರಸಾದ ನಿಲಯ ನಿರ್ಮಾಣಕ್ಕಾಗಿ ಸಂಸದರ ಅನುದಾನದಲ್ಲಿ 10 ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಬೆಣ್ಣಿಹಳ್ಳಿಯ ಇಂಚಗೇರಿ ಮಾಧವಾನಂದ ಮಠದ ಪ್ರಸಾದ ನಿಲಯ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು. ಬೆಣ್ಣಿಹಳ್ಳಿಯ ಸಾರ್ವಜನಿಕ ಉಪಯೋಗಕ್ಕಾಗಿ ಈ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.
ಆಧ್ಯಾತ್ಮವೆಂದರೆ ಎಲ್ಲವನ್ನೂ ಮರೆತು ಭಕ್ತಿಯಲ್ಲಿ ಮಿಂದೆಳುವುದು. ದೇಶದ ವಿಭಿನ್ನ ಸಂಸ್ಕೃತಿಗಳಲ್ಲಿಯೂ ಏಕತೆ ಕಾಣಬಹುದು. ನೂರಾರು ಪರಂಪರೆಗಳಿದ್ದರೂ ತಿರುಳು ಒಂದೇ ಶಾಂತಿ, ಸಹಜ ಜೀವನ. ಸಂಪ್ರದಾಯ ಬೇರೆಯಾದರೂ ಎಲ್ಲರ ಉದ್ದೇಶ ಒಂದೇ ಧರ್ಮ. ಜೀವನದಲ್ಲಿ ಭಕ್ತಿ ಅಳವಡಿಸಿಕೊಂಡು ಪುಣ್ಯದ ದಾರಿಯಲ್ಲಿ ಸಾಗಲು ಆಧ್ಯಾತ್ಮಿಕ ಒಳ್ಳೆಯ ಮಾರ್ಗ ಎಂದರು.
ಮಾಜಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ ಮಾತನಾಡಿ, ಇಂಚಗೇರಿ ಸಂಪ್ರದಾಯ ಮಠಗಳ ಸೇವಾ ಚಟುವಟಿಕೆಗಳನ್ನು ಕೊಂಡಾಡುವ ಮೂಲಕ ಪ್ರಸಾದ ನಿಲಯಕ್ಕೆ ಅನುದಾನ ನೀಡಿರುವ ಈರಣ್ಣಾ ಕಡಾಡಿ ಅವರನ್ನು ಅಭಿನಂಧಿಸಿ ಮತ್ತೊಮ್ಮೆ ರಾಜ್ಯಸಭೆ ಸದಸ್ಯರಾಗಿ ಸಮಾಜ ಸೇವೆ ಮಾಡಬೇಕು ಎಂದರು.
ಇಂಚಗೇರಿಯ ಮುಕುಂದ ಮಹಾರಾಜರು, ಬೆಳವಿಯ ಮೃತ್ಯುಂಜಯ ಮಹಾರಾಜರು, ರಾಮಣ್ಣಾ ಮಹಾರಾಜರು, ಅಪ್ಪಾಸಾಹೇಬ ಮಹಾರಾಜರು, ಸದಾಶಿವ ಮಹಾರಾಜರು, ನ್ಯಾಯವಾದಿ ಎಂ.ಐ.ಬೆಂಡವಾಡೆ ಸೇರಿದಂತೆ ಅನೇಕರು ಹಾಜರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 