ಬೆಂಗಳೂರು-ಬೆಳಗಾವಿ ನೂತನ ವಂದೇ ಭಾರತ ರೈಲಿಗೆ ಹಾವೇರಿಯಲ್ಲಿ ಸ್ವಾಗತ
Bengaluru-Belagavi new Vande Bharat train welcomed in Haveri
ಹಾವೇರಿ 11: ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಂದೇ ಭಾರತ ರೈಲು ಸಂಚರಿಸುತ್ತಿರುವುದು ಭಾರತ ಆರ್ಥಿಕತೆಯಲ್ಲಿ ಬಹಳ ಪ್ರಭಲವಾಗಿ ಮುನ್ನುಗುತ್ತಿದೆ ಎನ್ನುವುದರ ಸಂಕೇತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ನಗರದ ರೇಲ್ವೆ ನಿಲ್ದಾಣದಲ್ಲಿ ಬೆಂಗಳೂರು - ಬೆಳಗಾವಿ ನೂತನ ವಂದೇ ಭಾರತ ರೈಲಿಗೆ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ರವರು ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದು, ಆ ರೈಲಿಗೆ ಹಾವೇರಿಯಲ್ಲಿ ಸ್ವಾಗತ ಮಾಡಿ, ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಹಾವೇರಿಗೆ ಇಂದು ಶುಭದಿನ ಎರಡನೇಯ ವಂದೇ ಭಾರತ ಎಕ್ಸ್‌ಪ್ರೆಸ್ ಹಾವೇರಿಯಲ್ಲಿ ನಿಲ್ಲುತ್ತಿದೆ. ಬೆಂಗಳೂರಿನಿಂದ ಬೆಳಗಾವಿಗೆ ಹೋಗುವ ಒಂದೇ ಭಾರತ ಎಕ್ಸ್‌ಪ್ರೆಸ್ ಹಾವೇರಿ ಜನರಿಗೂ ಸೇವೆ ಸಲ್ಲಿಸಲಿದೆ. ಅದಕ್ಕಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಅಭಿನಂದನೆಗಳು ಎಂದು ಹೇಳಿದರು.ಹಾವೇರಿಗೆ ವಂದೇ ಭಾರತ ರೈಲು ನಿಲ್ಲಬೇಕು ಎಂದು ಬಹಳಷ್ಟು ಒತ್ತಡ ಇತ್ತು. ಪಧಾನಿ ನರೇಂದ್ರ ಮೋದಿಯವರು ನಮಗೆ ಆಶೀರ್ವಾದ ಮಾಡಿ ಕೊಟ್ಟರು. ಪ್ರತಿ ದಿನ ಹುಬ್ಬಳ್ಳಿ ಬೆಂಗಳೂರು ನಡುವಿನ ವಂದೇ ಭಾರತ ರೈಲು ಪ್ರಯಾಣ ಮಾಡುತ್ತಿದೆ. ಹಾವೇರಿ ಜನತೆ ಒಂದು ವಂದೇ ಭಾರತ ರೈಲು ಕೇಳಿದರೆ, ಪ್ರಧಾನಿ ನರೇಂದ್ರ ಮೋದಿಯವರು ಎರಡು ವಂದೇ ಭಾರತ ರೈಲು ಕೊಟ್ಟಿದ್ದಾರೆ. ನಮಗೆಲ್ಲರಿಗೂ ಸಂತೋಷ ತಂದಿದೆ. ಆದರೆ, ಇದರ ಹಿಂದೆ ದೇಶ ಯಾವ ರೀತಿ ಪ್ರಗತಿ ಆಗುತ್ತಿದೆ ಎನ್ನುವ ಕಥೆ ಇದೆ. ರೈಲೆ ಮೊದಲು ಕಲಿದ್ದಿಲಿನಿಂದ ನಡೆಯುತ್ತಿತ್ತು. ಡಿಸೆಲ್ ಬಂತು. ಈಗ ವಿದ್ಯುದೀಕರಣ ಆಗಿವೆ. ಕರ್ನಾಟಕದಲ್ಲಿ ಶೇ 99 ರಷ್ಟು ವಿದ್ಯುದೀಕರಣ ಮತ್ತು ಡಬಲ್‌ಗೇಜ್ ಆಗಿವೆ. ಹೈಸ್ಪೀಡ್ ರೈಲುಗಳು ನರೇಂದ್ರ ಮೋದಿಯವರ ಕಾಲದಲ್ಲಿ ಪಾರಂಭ ಆಗಿವೆ. ಹಿಂದೇಕೆ ಆಗಲಿಲ್ಲ. ಈಗೇಕೆ ಆಗುತ್ತಿವೆ ಎನ್ನುವುದಕ್ಕೆ ನರೇಂದ್ರ ಮೋದಿಯವರ ದೂರದೃಷ್ಟಿ, ಭಾರತವನ್ನು ವಿಕಸಿತ ಭಾರತ, ಅತ್ಯಂತ ಪ್ರಭಲ ಭಾರತ ಮಾಡಲು ರೈಲ್ವೆ, ರಸ್ತೆ, ಸುಗಮವಾಗಿ ಇರಬೇಕೆಂದು ಅತಿ ಹೆಚ್ಚು ರೈಲುಗಳನ್ನು ಬಿಡುತ್ತಿದ್ದಾರೆ. ರೈಲು ಸುರಕ್ಷತೆಗೆ ಹೆಚ್ಚಿನ ಆದ್ಯತೆ, ರೈಲಿನಲ್ಲಿ ಊಟ,ಸೇವೆ ಉತ್ತಮಗೊಂಡಿದೆ. ರೈಲ್ವೆ ಚಿತ್ರಣವೇ ಬದಲಾಗಿದೆ ಎಂದರು.
ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ ಸಂಕನೂರ, ಡಿ.ಆರ್.ಎಂ ಮುದಿತ್ ಮಿತ್ತಲ್, ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ, ನಗರಸಭೆ ಅಧ್ಯಕ್ಷರಾದ ಶಶಿಕಲಾ ಮಾಳಗಿ,ಅಪರ ಜಿಲ್ಲಾಧಿಕಾರಿಗಳಾದ ನಾಗರಾಜ ಎಲ್,ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ಶಿರಕೋಳ ಸೇರಿದಂತೆ ರೇಲ್ವೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಅನೇಕರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 