ಬಳ್ಳಾರಿ: ವಿಶೇಷ ಕೈಮಗ್ಗ ಮೇಳ ವಸ್ತ್ರ ವೈಭವ

ಬಳ್ಳಾರಿ 10: ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಕೇವಲ ನಗರ ಮಾತ್ರ ಸೀಮಿತವಾಗದೇ ತಾಲೂಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿಸ್ತರಿಸಬೇಕು ಎಂದು ಜಿಪಂ ಅಧ್ಯಕ್ಷತೆ ಭಾರತಿ ತಿಮ್ಮಾರೆಡ್ಡಿ ಹೇಳಿದರು. 

ನಗರದ ಗಾಂಧಿಭವನದಲ್ಲಿ ಶುಕ್ರವಾರದಂದು ನವದೆಹಲಿಯ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಮಂತ್ರಾಲಯ, ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ(ಕಾವೇರಿ ಹ್ಯಾಂಡ್ ಲೂಮ್ಸ್), ಬಳ್ಳಾರಿ ಜಿಪಂ ಕೈಮಗ್ಗ ಮತ್ತು ಜವಳಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಕೈಮಗ್ಗ ಮೇಳ ವಸ್ತ್ರ ವೈಭವ-2020 ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. 

ಕೈಮಗ್ಗ ಮತ್ತು ನೇಕಾರರು ತಯಾರಿಸಿದ ಬಟ್ಟೆಗಳನ್ನು ಧರಿಸಿದಲ್ಲಿ  ಚರ್ಮದ ಖಾಯಿಗಳು ಬರುವುದಿಲ್ಲ. ಕೈಮಗ್ಗ ಉತ್ಪನ್ನಗಳು, ವಿವಿಧ ರೀತಿಯ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಇನ್ನೂ ಹೆಚ್ಚಿನ ಪ್ರಚಾರವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು ಕೈಮಗ್ಗ ಮತ್ತು ಕಾಟನ್ ವಸ್ತುಗಳನ್ನು ಹೆಚ್ಚಾಗಿ ಬಳಸಬೇಕು ಎಂದು ಯುವಕರಿಗೆ ಕರೆ ನೀಡಿದರು.  

ಶಾಸಕರಾದ ಕೆ.ಸಿ.ಕೊಂಡಯ್ಯ ಅವರು ಮಾತನಾಡಿ, ಈ ವಸ್ತ್ರ ಮೇಳದಲ್ಲಿ ಕೈಮಗ್ಗ ಹಾಗೂ ಕಾಟನ್ ಉತ್ಪನ್ನಗಳನ್ನು ಒಂದೇ ಸೂರಿನಡಿಯಲ್ಲಿ ಮಾರಾಟವಾಗುತ್ತಿರುವುದು ಸಂತೋಷ ವಿಷಯ. ನಮ್ಮ ದೇಶದಲ್ಲಿ ಮೊದಲು ರೈತ ನಂತರ ಬಟ್ಟೆಯನ್ನು ಮಾಡುವ ನೇಕಾರ. ಈ ತಂತ್ರಜ್ಞಾನ ಯುಗದಲ್ಲಿ ಬಟ್ಟೆಗಳನ್ನು ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸುವಂತಹ ಯಂತ್ರಗಳು ಬಂದಿದೆ ನೇಕಾರರ ವೃತ್ತಿಯಲ್ಲಿ ನೇಕಾರರಿಗೆ ಕನಿಷ್ಠ ವೇತನವನ್ನು ನಿಗದಿಪಡಿಸಲು ಸಕರ್ಾರದ ಗಮನಕ್ಕೆ ಅಧಿಕಾರಿಗಳಿಗೆ ತರಬೇಕು ಎಂದು ಸೂಚಿಸಿದರು. 

ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ ಅವರು ಮಾತನಾಡಿದರು. ಕೈಮಗ್ಗ ಇಲಾಖೆಯ ಅಧಿಕಾರಿ ವಿಠಲರಾಜ್ ಅವರು ಸ್ವಾಗತಿಸಿ ವಂದಿಸಿದರು. 

ಈ ಸಂದರ್ಭದಲ್ಲಿ ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಇಲಾಖೆಯ ಅಪರ ನಿದರ್ೆಶಕರಾದ ಆನಂದ್ ವಿ.ಕಿತ್ತೂರು, ಕೈಮಗ್ಗ ಮತ್ತು ಜವಳಿ ಇಲಾಖೆಯ ಉತ್ತರ ವಲಯದ ಜಂಟಿ ನಿರ್ದೇಶಕರಾದ ಬಿ.ಶ್ರೀಧರ ನಾಯಕ ಸೇರಿದಂತೆ ಮುಖಂಡರುಗಳಾದ ಎ.ಮಂಜುನಾಥ, ಶೀಲಾ ಬ್ರಹ್ಮಯ್ಯ ಇತರರು ಇದ್ದರು.