ಬಳ್ಳಾರಿ: ರೈಲ್ವೆ ನಿಲ್ದಾಣದಿಂದ ವೃದ್ಧ ನಾಪತ್ತೆ; ಪತ್ತೆಗೆ ಮನವಿ
Bellary: Elderly man goes missing from railway station; appeal to find him
ಬಳ್ಳಾರಿ 27: ಬಳ್ಳಾರಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 70 ವರ್ಷದ ವೃದ್ಧರೊಬ್ಬರು ನಾಪತ್ತೆಯಾಗಿದ್ದು, ಅವರ ಬಗ್ಗೆ ಮಾಹಿತಿ ಸಿಕ್ಕರೆ ತಕ್ಷಣ ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಘಟನೆಯ ವಿವರ:
ತಮಿಳುನಾಡಿನ ಕೊಯಮತ್ತೂರಿನ ಶಿವನಂದಪುರಂ ಸರ್ವಣಪಟ್ಟಿಯ 4ನೇ ವಾರ್ಡ್ ನ ನಿವಾಸಿಯಾದ ಸಿ.ರಾಮು (70 ವರ್ಷ) ಅವರು ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ. ಏಪ್ರಿಲ್ 12 ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ನಾನು ತಿರುಪತಿಗೆ ಹೋಗಿ ಅಲ್ಲಿಂದ ಕೊಯಮತ್ತೂರಿಗೆ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಇದುವರೆಗೆ ಅವರು ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ. ಈ ಕುರಿತು ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ವ್ಯಕ್ತಿಯ ಚಹರೆ ವಿವರ:*
ಎತ್ತರ 4.7 ಅಡಿ, ಸಾಧಾರಣ ಮೈಕಟ್ಟು, ಕುಬ್ಜ ದೇಹ ಹೊಂದಿದ್ದು, ಎಡಗಣ್ಣಿನ ಪಕ್ಕದಲ್ಲಿ ಸಣ್ಣ ಕಪ್ಪು ಮಚ್ಚೆ ಇದೆ. ತಲೆಯಲ್ಲಿ ಕೂದಲಿಲ್ಲ (ಬೋಳು ತಲೆ), ಬಿಳಿ ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾರೆ. ಕಾಣೆಯಾದಾಗ ಬಿಳಿ ಶರ್ಟ್ ಮತ್ತು ನೀಲಿ ರಂಗಿನ ಪಂಚೆ ಧರಿಸಿದ್ದರು. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.
ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯ ಆದಲ್ಲಿ ಸಾರ್ವಜನಿಕರು ಬಳ್ಳಾರಿ ರೈಲ್ವೆ ಪಿ.ಎಸ್. ಮೊ.9480802131, ಬೆಂಗಳೂರು ರೈಲ್ವೆ ಕಂಟ್ರೋಲ್ ರೂಮ್ ಮೊ.9480802140 ಗೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ? 