21ರಂದು ಬೆಳಗಾವಿ ವಲಯ ಮಟ್ಟದ ಯುವ ಕವಿಗೋಷ್ಠಿ

21ರಂದು ಬೆಳಗಾವಿ ವಲಯ ಮಟ್ಟದ ಯುವ ಕವಿಗೋಷ್ಠಿ Belgaum zonal level youth poetry conference on the 21st

ಬೆಳಗಾವಿ 17: ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಅವರು ಬೆಳಗಾವಿಯ ಕನ್ನಡ ಭವನದ ಸಹಯೋಗದೊಂದಿಗೆ ಬೆಳಗಾವಿ ವಯಲ ಮಟ್ಟದ ಯುವ ಕವಿಗೋಷ್ಠಿಯನ್ನು ಆಯೋಜಿಸಿದೆ.ಈ ಮೂಲಕ ಯುವ ಕವಿಗಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಉದ್ದೇಶವಿದೆ. ಅಲ್ಲದೆ ಪ್ರಮುಖವಾಗಿ ಸೌಹಾರ್ದದ ಬದುಕಿಗೆ ಭರವಸೆ  ತುಂಬುವುದು ಅವಶ್ಯಕವಾಗಿದೆ. ಕವಿಗೋಷ್ಠಿಯೊಂದಿಗೆ  ವಿದ್ವಾಂಸರ ಉಪನ್ಯಾಸ ಮತ್ತು ಸಂವಾದವೂ ಇರಲಿದೆ. ಇಂಥದೊಂದು ವಿಶಿಷ್ಟ ಕಾರ್ಯಕ್ರಮಕ್ಕೆ ಬೆಳಗಾವಿ ಸಾಕ್ಷಿಯಾಗಲಿದೆ. 

ಬೆಳಗಾವಿ ವಲಯ ಮಟ್ಟದ (ಕಿತ್ತೂರು ಕರ್ನಾಟಕ )ದ ಬೆಳಗಾವಿ, ಉತ್ತರಕನ್ನಡ, ವಿಜಯಪುರ, ಬಾಗಲಕೋಟ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯ ಯುವ ಪ್ರತಿಭೆಗಳನ್ನು ಗುರುತಿಸಲು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬೆಳಗಾವಿ ವಲಯ ಮಟ್ಟದ ಯುವ ಕವಿಗೋಷ್ಠಿಯನ್ನು ಜುಲೈ 21ರಂದು  ಬೆಳಗಾವಿಯ ಕನ್ನಡ ಭವನದಲ್ಲಿ ಹಮ್ಮಿಕೊಂಡಿದೆ.          

21ರಂದು ಮುಂಜಾನೆ 10.30ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಕನ್ನಡ ಭವನದ ನಿರ್ದೇಶಕ ಡಾ ಬಸವರಾಜ ಜಗಜಂಪಿ ವಹಿಸಿಕೊಳ್ಳಲಿದ್ದಾರೆ. ಅಕಾಡೆಮಿ ರಿಜಿಸ್ಟ್ರಾರ್ ಎನ್ ಕರಿಯಪ್ಪ ಹಾಗೂ ಅಕಾಡೆಮಿ ಸದಸ್ಯರಾದ ಡಾ ಅರ್ಜುನ ಗೊಳಸಂಗಿ ಅವರ ಗೌರವ ಉಪಸ್ಥಿತಿ ಇರಲಿದೆ. 

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು ಯುವ ಕವಿಗೋಷ್ಠಿಯ ಆಯೋಜನೆಯ ಸದಸ್ಯ ಸಂಚಾಲಕಿ  ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಆಶಯ ನುಡಿಗಳನ್ನಾಡಲಿದ್ದಾರೆ. ಅಕಾಡೆಮಿ ಸದಸ್ಯರಾದ ಮಹಾದೇವ ಬಸರಕೋಡ, ಡಾ ಮಲ್ಲಿಕಾರ್ಜುನ ಮಾನ್ಪಡೆಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ 

ಮಧ್ಯಾಹ್ನ 11.30 ರಿಂದ 1ಗಂಟೆಗೆ ಯುವ ಕವಿಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಹಾವೇರಿಯ ದೇವರಾಜ ಹುಣಸಿಕಟ್ಟಿ, ಇವರು ವಹಿಸಿಕೊಳ್ಳಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ 7 ಜಿಲ್ಲೆಯಿಂದ 23  ಕವಿಗಳನ್ನು ಆಯ್ಕೆ ಮಾಡಲಾಗಿದೆ.  

ವಿಜಯಪುರ ಜಿಲ್ಲೆಯ ಸುಮಿತ್ ಮೇತ್ರಿ, ದೇವೂ ಮಾಕೊಂಡ, ರವಿಕುಮಾರ ಜಾಧವ, ಸಾಯಬಣ್ಣ ಮಲ್ಲಪ್ಪ ಮಾದರ, ಬಾಗಲಕೋಟೆಯ ಜಿಲ್ಲೆಯ ಚೇತನ್ ನಾಗರಾಳ, ಡಾ. ಲಿಂಗಪ್ಪ ಜಿ. ಗಗ್ಗರಿ, ಶಿವಕುಮಾರ ಕರನಂದಿ, ಸುರೇಶ ಎಲ್‌. ರಾಜಮಾನೆ, ಗದಗ ಜಿಲ್ಲೆಯ ಸಿದ್ದು ಸತ್ಯಣ್ಣವರ, ರೇಣುಕಾ ಪೂಜಾರ, ಎಸ್‌.ಕೆ. ಆಡಿನ, ಉತ್ತರಕನ್ನಡ ಜಿಲ್ಲೆಯ ರವಿ ಕಂಬಳಿ, ಯಶಸ್ವಿನಿ ಶ್ರೀಧರ ಮೂರ್ತಿ, ಮಾಲತಿ ಭಟ್, ಬೆಳಗಾವಿಯ ಅಜೀತ ಪಾತ್ರೋಟ, ಇಮ್ತಿಯಾಜ ಶಿರಸಂಗಿ, ಸುನಂದಾ ಭರಮನಾಯ್ಕರ, ಶಿವರಾಜ ಕಾಂಬಳೆ, ಹಾವೇರಿಯ ರಟ್ಟಿಹಳ್ಳಿ ರಾಘವಾಂಕುರ, ಶಿವರಾಜ ಸ. ಅರಳಿ, ಧಾರವಾಡದ ಡಾ. ಸುಮಾ ವಸಂತ ಸಾವಂತ, ಕಿರಣ ವಾಯ್ ಅರಮನಿ, ಇವರು ಕವಿಗೋಷ್ಠಿಗೆ ಆಯ್ಕೆಯಾದ ಕವಿಗಳಾಗಿದ್ದು ಕವನ ವಾಚನ ಮಾಡಲಿದ್ದಾರೆ.  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಮಹಾದೇವ ಬಸರಕೋಡ ಅವರು ಗೋಷ್ಠಿ ನಿರ್ವಹಣೆ ಮಾಡಲಿದ್ದಾರೆ. 

ಕವಿಗೋಷ್ಠಿ ನಂತರ ಕಾವ್ಯ- ಅನುಸಂಧಾನ ವಿಷಯ ಕುರಿತಾಗಿ ಉಪನ್ಯಾಸ ಸಂವಾದ ಗೋಷ್ಠಿಯಲ್ಲಿ ಸಾಹಿತ್ಯ  ಓದಿನ ಖುಷಿ, ಕಾವ್ಯ- ನಮಗೇಕೆ ಬೇಕು? ಈ ವಿಷಯಗಳ ಕುರಿತಾಗಿ ವಿಚಾರಗೋಷ್ಠಿ ಮತ್ತು ಸಂವಾದ ನಡೆಯಲಿದ್ದು ಹಿರಿಯ ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಯವರು ಉಪನ್ಯಾಸ ನೀಡಿ ಕವಿಗಳೊಂದಿಗೆ ಸಂವಾದ ಮಾಡಲಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರಿನ ರಿಜಿಸ್ಟ್ರಾರ್  ಎನ್, ಕರಿಯಪ್ಪ ಅವರು ಹಾಗೂ ಯುವ ಕವಿಗೋಷ್ಠಿ ಆಯೋಜನೆಯ ಅಕಾಡೆಮಿಯ ಸದಸ್ಯ ಸಂಚಾಲಕಿ, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.