ಕೃಷಿ ಸಾಲ ವಿತರಣೆಯಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಮೊದಲು: ಕಲ್ಲಪ್ಪ ಓಬಣ್ಣಗೋಳ

ಕೃಷಿ ಸಾಲ ವಿತರಣೆಯಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಮೊದಲು:  ಕಲ್ಲಪ್ಪ ಓಬಣ್ಣಗೋಳ Belgaum DCC Bank is first in agricultural loan disbursement: Kallappa Obannagol

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧಿಕಾರಿ ಸಿಬ್ಬಂದಿಗಳಿಗೆ ಒಂದು ದಿನದ ರಾಜ್ಯ ಮಟ್ಟದ ತರಬೇತಿ  ಕಾರ್ಯಕ್ರಮ 

ಬೆಳಗಾವಿ 25: ರಾಜ್ಯದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಕೃಷಿ ಸಾಲ ವಿತರಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಭಾಗದ ಕೃಷಿಕರ, ರೈತರ, ಗ್ರಾಮೀಣರ ಆಶಾಕಿರಣವಾಗಿದೆ ಎಂದು ಬೆಳಗಾವಿ ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಕಲ್ಲಪ್ಪ ಓಬಣ್ಣಗೋಡು ತಿಳಿಸಿದರು. 

ಇಲ್ಲಿನ ಗಾಂಧಿ ನಗರದ ಸಂಕಮ ಹೊಟೇಲ್ ಸಭಾಭವನದಲ್ಲಿ ಆಗಸ್ಟ್‌ 24 ರಂದು  ಭಾನುವಾರ , ಸಹಕಾರ ಇಲಾಖೆಯ,  ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು , ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್  ವತಿಯಿಂದ  ಆಯೋಜಿಸಲಾದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧಿಕಾರಿ ಸಿಬ್ಬಂದಿಗಳಿಗೆ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಬೆಳಗಾವಿ ಜಿಲ್ಲಾ ಕೇಂದ್ರ ಬ್ಯಾಂಕ್ ಇನ್ನೂ ಅಭಿವೃದ್ಧಿಯಾಗಬೇಕಾದರೆ ಸಿಬ್ಬಂದಿ ನಿಷ್ಠೆ, ಪ್ರಾಮಾಣಿಕ, ಹೊಸತನ ವಿಶೇಷ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಮೂಲಕ ಅಭಿವೃದ್ಧಿ ಹೊಂದಲು ಸಾಧ್ಯ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಯೂನಿಯನ್ ಹಮ್ಮಿಕೊಳ್ಳುವ ತರಬೇತಿ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ವೃತ್ತಿಯಲ್ಲಿ ನೈಪುಣ್ಯತೆಯನ್ನು ಪಡೆಯಬಹುದು ಎಂದರು. 

ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷರಾದ ಸುಭಾಷ್ ಡವಳೇಶ್ವರ ಉದ್ಘಾಟಿಸಿದರು. ಯೂನಿಯನ್ ಅಧ್ಯಕ್ಷ  ಬಸಗೌಡ ಡಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂಜು ಸೊನ್ನಪ್ಪನವರ, ನಿರ್ದೇಶಕರಾದ  ಈಶ್ವರಚಂದ್ರ ಬ. ಇಂಗಳಗಿ, ಬಸಪ್ಪ ಸಂತಿ, ಶಂಕರಗೌಡ ದೊಡ್ಡಗೌಡರ, ಬಸಗೌಡ ಪಾಟೀಲ, ವರ್ಧಮಾನ ಭೋಳಿ, ಸಹಕಾರ ಸಂಘಗಳ ಉಪನಿಬಂಧಕರು ರವೀಂದ್ರ ಪಾಟೀಲ, ಯೂನಿಯನ್ ಸಿ ಇ ಒ ಹಾಲಪ್ಪ ಜಗ್ಗಿನವರ ಸ್ವಾಗತಿಸಿದರು.  ಶ್ರೀಶೈಲ ಯಡಹಳ್ಳಿ ನಿರೂಪಿಸಿ, ವಂದಿಸಿದರು.