ಬೃಹತ್ ಗಾಂಜಾ ಪ್ರಕರಣ ಬೇಧಿಸುವಲ್ಲಿ ಬೆಳಗಾವಿ ನಗರ ಪೊಲೀಸರು ಯಶಸ್ವಿ: 6 ಆರೋಪಿಗಳ ಬಂಧನ
Belgaum City Police succeed in cracking huge ganja case: 6 accused arrested
ಬೆಳಗಾವಿ 22: ಬೃಹತ್ ಗಾಂಜಾ ಪ್ರಕರಣವೊಂದನ್ನು ಬೇಧಿಸುವಲ್ಲಿ ಬೆಳಗಾವಿ ನಗರ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 6ಜನರನ್ನು ಬಂಧಿಸಲಾಗಿದೆ ಎಂದು ಎಂದು ಬೆಳಗಾವಿ ನಗರ ಪೊಲೀಸ್ ಕಮೀಷನರ್ ಭೂಷಣ ಬೊರಸೆ ಹೇಳಿದರು.
ಬೆಳಗಾವಿಯ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಚಂದಗಡ ರಸ್ತೆಯಲ್ಲಿರುವ ದಾಭಾ ಒಂದರ ಬಳಿ ಶಂಕಾಸ್ಪದ ಕಾರನ್ನು ಪರೀಶೀಲನೆ ನಡೆಸಿದಾಗ ಸುಮಾರು 50 ಕೆಜಿಯಷ್ಟು ಗಾಂಜಾ ದೊರೆತಿದ್ದು, ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ ಕಡೆಯಿಂದ ಬೆಳಗಾವಿಗೆ ಎರಡು ಕಾರಿನಲ್ಲಿ ಬರುತ್ತಿದ್ದ ಗಾಂಜಾ ಧಂಧೆಯಲ್ಲಿ ಇಸ್ಮಾಯಿಲ್ ಹಾಗೂ ತಾಜೀರ್ ಎಂಬ ಆರೋಪಿಗಳನ್ನು ತಡೆದು ಪರೀಶೀಲನೆ ನಡೆಸಿದಾಗ ಅತಿದೊಡ್ಡ ಗಾಂಜಾ ಜಾಲ ಬಯಲಿಗೆ ಬಂದಿದೆ ಎಂದು ಹೇಳಿದರು.ಮಹಾರಾಷ್ಟ್ರದ ಕೊಲ್ಹಾಪುರದ ಪ್ರಥಮೇಶ, ಶಿವಕುಮಾರ ಅಸಾಬೆ, ಸಾತಾರಾದ ರಂಜಾನ್ ಜಮಾದಾರ, ಹುಕ್ಕೇರಿ ತಾಲೂಕಿನ ತೇಜಸ ವಜಾರೆ, ಸೇರಿದಂತೆ ಒಟ್ಟು ಆರು ಜನ ಆರೋಪಿಗಳು ಸೇರಿಕೊಂಡು ಸಾಗಿಸುತ್ತಿದ್ದ ಸುಮಾರು 50 ಕೆಜಿ ಗಾಂಜಾದೊಂದಿದೆ ಸಿಕ್ಕಿ ಬಿದ್ದಿದ್ದಾರೆ. ಅದಲ್ಲದೇ ಇವರ ಬಳಿಯಿದ್ದ 10 ಮೊಬೈಲ್‌ಗಳು, ಒಂದು ಮಚ್ಚು, ಒಂದು ತೂಕದ ಮಷಿನ್, 4000 ರೂ. ನಗದು ವಶಕ್ಕೆ ಪಡೆದು ಕೃತ್ಯಕ್ಕೆ ಬಳಿಸಿದ ಮೂರು ಕಾರನ್ನು ಪೊಲೀಸರು ವಶಪಡಿಸಿಕೊಂಡಿರುವುದಾಗಿ ಭೂಷಣ ಬೊರಸೆ ಅವರು ತಿಳಿಸಿದರು.
ಮೊದಲ ಬಾರಿಗೆ ಗಾಂಜಾ ಮಾರಾಟ ಜಾಲದ ಪ್ರಮುಖ ಆರೋಪಿ ಹಾಗೂ ದಲ್ಲಾಳಿ ಇಸ್ಮಾಯಿಲ್ ಅಲಿಯಾಸ್ ಸದ್ದಾಮ್‌ನನ್ನು ಪೊಲೀಸರು ಬಂಧಿಸಿದ್ದು, ಈತ ಮಧ್ಯಪ್ರದೇಶ ಹಾಗೂ ಓಡಿಸ್ಸಾದಿಂದ ಗಾಂಜಾ ತಂದು ಮಾರುತ್ತಿದ್ದ, ಹಾಗೂ ಪುಣೆ ಮತ್ತು ಮುಂಬೈನಿಂದ ಹೆರಾಯಿನ ಪೂರೈಕೆ ಮಾಡುತ್ತಿರುವುದಾಗಿ ತಿಳಿದಿದೆ. ಈ ಗಾಂಜಾ ದಾಳಿಯು ಇಲ್ಲಿಯವರೆಗೆ ನಡೆದಿರುವ ಅತಿ ದೊಡ್ಡ ಪ್ರಕರಣಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಸಿ.ಇ.ಎನ್ ಇನ್ಸ್ಪೆಕ್ಟರ್ ಬಿ ಆರ್ ಗಡ್ಡೆಕರ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ಸುಮಾರು ದಿನಗಳಿಂದ ಬೆನ್ನಟ್ಟಿ ನಡೆಸಲಾಗಿದೆ. ಈ ಪ್ರಕರಣ ಭೇದಿಸುದಕ್ಕಾಗಿ ಪಿಐ ಗಡ್ಡೆಕರ ಮುಂಬೈ ಹಾಗೂ ಇತರೆ ನಗರಗಳನ್ನು ಸುತ್ತಾಡಿ ಖಚಿತ ಮಾಹಿತಿ ಪಡೆದು ದಾಳಿಯ ರೂಪರೇಷೆಯನ್ನು ರಚಿಸಿ ಕೊನೆಗೆ ಒಂದು ದೊಡ್ಡ ಸಮಾಜ ಘಾತುಕ ಕೃತ್ಯವನ್ನು ಸೆದೆಬಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು. ಅಲ್ಲದೇ ಈ ಪ್ರಕರಣ ಭೇದಿಸಿದ ತಂಡಕ್ಕೆ ಬಹುಮಾನ ಘೋಷಿಸುವದಾಗಿ ತಿಳಿಸಿದರು.
ಪುಟ್ಟ ಚಲನಚಿತ್ರ ನೋಡಿಕೊಂಡು ಎಲ್ಲರೂ ಗ್ಯಾಂಗ್ ಸ್ಟಾರ್ ಆಗಲು ಸಾಧ್ಯವಿಲ್ಲ. ಈಗ ಬಂಧಿಸಿರುವ ಆರೋಪಿಗಳಿಂದ ವಶಪಡಿಸಿಕೊಂಡಿರುವ ಮೊಬೈಲಗಳನ್ನು ವಿಧಿವಿಜ್ಞಾನ ಪ್ರಯೋಗಲಾಯಕ್ಕೆ ಕಳುಹಿಸಿ ಗಾಂಜಾ ಜಾಲದ ಸಂಪರ್ಕದಲ್ಲಿರುವ ಆರೋಪಿಗಳ ಪತ್ತೆ ಹಚ್ಚಿ ಬಂಧಿಸಲಾಗುವುದು. ರಾಷ್ಟ್ರ ಮಟ್ಟದಲ್ಲಿ ಜಾಲ ಹೊಂದಿರುವ ಶಂಕೆಯನ್ನು ವ್ಯಕ್ತಪಡಿಸಿದ ಕಮೀಷನರ್ ಅವರು, ಗಾಂಜಾ ಜಾಲವನ್ನು ಬುಡಸಮೇತ ಕಿತ್ತು ಹಾಕಲಾಗುವುದೆಂದು ತಿಳಿಸಿದರು.ಡಿಸಿಪಿ ನಾರಾಯಣ ಭರಮನಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಹಾಗೂ ಸಿ.ಇ.ಎನ್ ಇನ್ಸ್ಪೆಕ್ಟರ್ ಬಿ ಆರ್ ಗಡ್ಡೆಕರ ಸೇರಿದಂತೆ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 