ಬೆಳಗಾವಿಯ ‘ಕಬಾಡಿಮ್ಯಾನ್’ ರಾಷ್ಟ್ರೀಯ ಟಿವಿ ವೇದಿಕೆಯಲ್ಲಿ
Belagavi’s ‘Kabadi Man’ on a national TV platform
ಬೆಳಗಾವಿ: ಬೆಳಗಾವಿಯ ಸ್ಟಾರ್ಟಅಪ್ ಹಾಗೂ ನವೋದ್ಯಮ ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣವೊಂದು ಒದಗಿಬಂದಿದ್ದು, ಸ್ಥಳೀಯ ಉದ್ಯಮಿಗಳಾದ ಸಿದ್ಧಾರ್ಥ ಮುತ್ಕೆಕರ್ ಹಾಗೂ ಚಿನ್ಮಯ್ ಮದ್ದಿನಮಠ ಅವರ ‘ಕಬಾಡಿಮ್ಯಾನ್’ ಇದೀಗ ವಂದೇ ಭಾರತಂ ಅನ್ಪ್ಲಗ್ಡ್ ಕಾರ್ಯಕ್ರಮದ ಮೂಲಕ ರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಛಾಪು ಮೂಡಿಸಿದೆ.
‘ಕಬಾಡಿಮ್ಯಾನ್’ ನಗರಗಳ ಮನೆಗಳು ಹಾಗೂ ವಾಣಿಜ್ಯ ಸಂಸ್ಥೆಗಳನ್ನು ಭಾರತದ ಅನೌಪಚಾರಿಕ ತ್ಯಾಜ್ಯ ನಿರ್ವಹಣಾ ವಲಯದೊಂದಿಗೆ ಸಂಪರ್ಕಿಸುವ ತಂತ್ರಜ್ಞಾನ ಆಧಾರಿತ ಮರುಬಳಕೆ ವೇದಿಕೆಯಾಗಿದೆ. ದೇಶದ 40 ಲಕ್ಷಕ್ಕೂ ಅಧಿಕ ಕಬಾಡಿವಾಲಾಗಳನ್ನು ಗ್ರಾಹಕರೊಂದಿಗೆ ಸಂಪರ್ಕಿಸುವ ಮೂಲಕ ತ್ಯಾಜ್ಯ ಸಂಗ್ರಹಣೆ ಮತ್ತು ಮರುಬಳಕೆ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈಗಾಗಲೇ ಬೆಳಗಾವಿ, ಬೆಂಗಳೂರು ಹಾಗೂ ಕೊಲ್ಹಾಪುರ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಬಾಡಿಮ್ಯಾನ್, ಸಾವಿರಾರು ಸ್ಕ್ರ್ಯಾಪ್ ಪಿಕಪ್ಗಳನ್ನು ಪೂರ್ಣಗೊಳಿಸಿದ್ದು, ಹಲವಾರು ಗ್ರಾಹಕರನ್ನು ತನ್ನ ವೇದಿಕೆಗೆ ಸಂಪರ್ಕಿಸಿದೆ. ನೂರಾರು ಕಬಾಡಿವಾಲಾಗಳೂ ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ನಗರಗಳಿಗೆ ವಿಸ್ತರಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 