ರಾಸಾಯನಿಕ ವಿಶ್ಲೇಷಣಾ ವರದಿ ನಂತರವೇ ಬಿಯರ್ ಮಾರಾಟಕ್ಕೆ ಬಿಡುಗಡೆ : ಅಬಕಾರಿ ಸಚಿವ ತಿಮ್ಮಾಪುರ
Beer will be released for sale only after chemical analysis report: Excise Minister Thimmapura
ಬೆಳಗಾವಿ ಸುವರ್ಣ ವಿಧಾನಸೌಧ ಡಿ.18: ಬ್ರಿವೇರಿಗಳಲ್ಲಿ ಉತ್ಪಾದನೆಯಾಗುವ ಬಿಯರ್ ಗಳಲ್ಲಿ ಇಥೈಲ್ ಆಲ್ಕೋಹಾಲ್ ಇರುವಿಕೆ ಮತ್ತು ಮಿಥೈಲ್ ಆಲ್ಕೋಹಾಲ್, Obnoxious ಮತ್ತು Substance ಇಲ್ಲದಿರುವಿಕೆಯನ್ನು ಖಚಿತಪಡಿಸಿಕೊಂಡು ಮಾನವ ಸೇವನೆಗೆ ಯೋಗ್ಯವಾಗಿದೆ ಎಂದು ರಾಸಾಯನಿಕ ವಿಶ್ಲೇಷಣಾ ವರದಿಯನ್ನು ನೀಡಲಾದ ನಂತರವೇ ಬಿಯರ್‌ನ್ನು ಮಾರಾಟಕ್ಕೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಅಬಕಾರಿ ಸಚಿವರು ಆರ್.ಜಿ.ತಿಮ್ಮಾಪುರ ತಿಳಿಸಿದ್ದಾರೆ.
ಅವರು ವಿಧಾನ ಪರಿಷತ್ ನಲ್ಲಿ ಶಾಸಕ ಶಿವಕುಮಾರ್ ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಅಬಕಾರಿ ಇಲಾಖೆಯಲ್ಲಿ 2 ರಾಸಾಯನಿಕ ಪ್ರಯೋಗಾಲಯಗಳು ಬೆಂಗಳೂರು ಮತ್ತು ಧಾರವಾಡದಲ್ಲಿ ಮಂಜೂರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ರಾಸಾಯನಿಕ ಪ್ರಯೋಗಾಲಯವು ಕಾರ್ಯನಿರ್ವಹಿಸುತ್ತಿದೆ. ಧಾರವಾಡದಲ್ಲಿನ ಪ್ರಯೋಗಾಲಯ ಪ್ರಾರಂಭಿಸಲು ಪರೀಶೀಲಿಸಲಾಗುತ್ತಿದ್ದು, ಅಬಕಾರಿ ಇಲಾಖೆಯಿಂದ ಖಾಸಗಿ ಪ್ರಯೋಗಾಲದ ಜೊತೆ ಯಾವುದೇ ಒಡಂಬಡಿಕೆ ಮಾಡಿಕೊಂಡಿರುವುದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ 2025-26 ನೇ ಸಾಲಿನ ಅಕ್ಟೋಬರ್ 2025 ರ ಅಂತ್ಯಕ್ಕೆ ಸ್ವತಂತ್ರ ಆರ್.ವಿ.ಬಿ (ಋಜಜಠಿಜಟಿಜಜಟಿಣ ಖಗಿಃ) 64 ಹಾಗೂ ವಿವಿಧ ರೀತಿಯ ಸನ್ನದಿಗೆ ಹೊಂದಿಕೊಂಡಂತಿರುವ ಆರ್.ವಿ.ಬಿ (ಂಣಣಚಿಛಿಜಜ ಖಗಿಃ) 915 ಹೀಗೆ, ಪ್ರಸ್ತುತ ಒಟ್ಟು 979 ಸಂಖ್ಯೆಯ ಆರ್.ವಿ.ಬಿ (ಪಬ್) ಸನ್ನದುಗಳು ಇರುತ್ತವೆ.
ಆರ್.ವಿ.ಬಿ ಸನ್ನದುಗಳಲ್ಲಿ 2023-24ನೇ ಆರ್ಥಿಕ ಸಾಲಿನಲ್ಲಿ 80.89 ಲಕ್ಷ ಲೀಟರ್ ಡ್ರಾಟ್ ಬಿಯರ್ ಹಾಗೂ 2024-25 ಆರ್ಥಿಕ ಸಾಲಿನಲ್ಲಿ 77.97 ಲಕ್ಷ ಲೀಟರ್ ಡ್ರಾಟ್ ಬಿಯರ್ ಮಾರಾಟವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 