ಬೀಳೂರು ಅಜ್ಜನ ಶಿಕ್ಷಣ ಸೇವೆ ಇಂದಿಗೂ ಆದರ್ಶ: ಡಾ. ಕಟಗಿಹಳ್ಳಿಮಠ
Beeluru Ajja's service in the field of education remains exemplary to this day: Dr. Katagihallimatha
ಲೋಕದರ್ಶನ ವರದಿ
ಬಾಗಲಕೋಟೆ 03 : ಜನರಲ್ಲಿ ಶಿಕ್ಷಣ, ಸಂಸ್ಕಾರ, ಸದಾಚಾರ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮಠಗಳ ಪರಂಪರೆ ಪ್ರಮುಖವಾಗಿದ್ದು, ಶಿಕ್ಷಣ ಕ್ರಾಂತಿಯಲ್ಲಿ ಬೀಳೂರು ಗುರುಬಸವ ಮಹಾಸ್ವಾಮಿಗಳ ಶ್ರಮ ಸ್ಮರಣೀಯವಾಗಿದೆ ಎಂದು ಬಿವ್ಹಿವ್ಹಿ ಸಂಘದ ಆಡಳಿತಾಧಿಕಾರಿಗಳಾದ ಡಾ. ವ್ಹಿ.ಎಸ್. ಕಟಗಿಹಳ್ಳಿಮಠ ಹೇಳಿದರು.
ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಿವಿವಿ ಸಂಘದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮವನ್ನು ಬೀಳೂರು ಗುರುಬಸವ ಮಹಾಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಾಧಕರ ಹುಟ್ಟು ಮತ್ತು ಬೆಳವಣಿಗೆಗೆಗಳು ಲೋಕಸಹಜವಾಗಿರುವುದಿಲ್ಲ ಅದಕ್ಕಾಗಿ ಅವರನ್ನು ಅವತಾರ ಪುರುಷರು ಎನ್ನುತ್ತೇವೆ ಅಂತವರಲ್ಲಿ ಬೀಳೂರು ಅಜ್ಜನವರು ಒಬ್ಬರು ಎಂದರು.
ನೂರಾರು ವರ್ಷಗಳ ಹಿಂದಿನಿ ಇತಿಹಾಸದಲ್ಲಿ ಎಸ್.ಎಸ್.ಎಲ್.ಸಿ ಶಿಕ್ಷಣಕ್ಕೂ ಪರದಾಡುವ ಪರಿಸ್ಥಿತಿ ಅಂಚೆ ಪತ್ರಗಳನ್ನೂ ಓದುವ ಸಾಮರ್ಥ್ಯ ಇರದಂತಹ ಅನಕ್ಷರತೆ ಇತ್ತು. ಇಂತಹ ಸಂದರ್ಭದಲ್ಲಿ ಅಥಣಿ ಮುರಘೇಂದ್ರ ಸ್ವಾಮೀಜಿ, ಬಿಳೂರು ಗುರು ಬಸವ ಸ್ವಾಮೀಜಿ ಹಾಗೂ ಬಿದರಿಯ ಕುಮಾರ ಸ್ವಾಮೀಜಿಗಳ ನಿಷ್ಠೂರ ಸನ್ಯಾಸತ್ವ, ಶಿವಯೋಗ, ಹಠಯೋಗದಿಂದ ಆಧ್ಯಾತ್ಮಿಕ ಬೆಳವಣಿಗೆ,ಸಮಾಜ ಸೇವೆ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮಾಡಿದ ಸಾಧನೆ ಅಪಾರವಾಗಿದೆ. ಬೀಳೂರು ಅಜ್ಜನವರು ಬಾಲ್ಯದಲ್ಲಿಯೇ ತೇಜಸ್ಸು ಹಾಗೂ ಕಾರ್ಯನಿಷ್ಠೆಯನ್ನು ಹೊಂದಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 