ಬೇಡ್ತಿ-ವರದಾ ನದಿ ಜೋಡಣೆ ರೈತರಿಗೆ ಅನುಕೂಲ
Bedi-Varada river linking will benefit farmers
ಬೇಡ್ತಿ-ವರದಾ ನದಿ ಜೋಡಣೆ ರೈತರಿಗೆ ಅನುಕೂಲ
ಬ್ಯಾಡಗಿ 05: ಬೇಡ್ತಿ-ವರದಾ ನದಿ ಜೋಡಣೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಯುಕ್ತವಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದಲ್ಲಿ ಮಾತ್ರ ಅನ್ನದಾತನಿಗೆ ಫಲ ಸಿಗುತ್ತದೆ ಆದ್ದರಿಂದ ಎರಡೂ ಸರ್ಕಾರಗಳು ಇಚ್ಚಾಶಕ್ತಿ ತೋರಿಸಿ ಯೋಜನೆಯನ್ನು ಫಲಪ್ರದವಾಗುವಂತೆ ನೋಡಿಕೊಳ್ಳುವಂತೆ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಬಳ್ಳಾರಿ ಅವರು ಈ ನದಿ ಜೋಡಣೆಗಾಗಿ ಹಲವಾರು ವರ್ಷಗಳಿಂದ ನೂರಾರು ರೈತರು ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ಆದರೂ ಇಲ್ಲಿಯವರೆಗೂ ಈ ಯೋಜನೆ ಜಾರಿಗೆ ತರಲು ಸರಕಾರಗಳು ವಿಫಲವಾಗಿವೆ. ಯೋಜನೆ ಜಾರಿಗೆ ಬಂದಲ್ಲಿ ಸಾವಿರಾರು ರೈತರಿಗೆ ಇದರ ಪ್ರಯೋಜನ ದೊರೆಯಲಿದೆ. ಈ ನೀರಾವರಿ ಯೋಜನೆಯಿಂದ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದಂತಾಗಲಿದೆ.ಜಿಲ್ಲೆಯ ಶಾಸಕರು ಸಚಿವರು ಹಾಗೂ ಸಂಸದರು ಈ ಯೋಜನೆಯ ಬಗ್ಗೆ ಅಧಿವೇಶನದಲ್ಲಿ ಹೆಚ್ಚಿನ ಸಮಯ ಪಡೆದುಕೊಂಡು ಚರ್ಚಿಸಿ ಯೋಜನೆ ಜಾರಿಗೆ ತರಲು ಮುಖ್ಯ ಮಂತ್ರಿಗಳ ಮೇಲೆ ಒತ್ತಡ ತರುವಂತೆ ಸೂಚಿಸಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಸಾಕಷ್ಟು ನೀರು ಸಮುದ್ರದ ಪಾಲಾಗುತ್ತಿದೆ ಇದನ್ನು ತಡೆಗಟ್ಟಿ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದಿದ್ದಾರೆ.ಅ.10 ರಂದು ಹಾವೇರಿ ಹಾಗೂ ಗದಗ ಜಿಲ್ಲೆಯಲ್ಲಿ ಚುನಾಯಿತ ಪ್ರತಿನಿಧಿಗಳು ಜಾಗೃತಿ ಸಭೆ ಮಾಡುತ್ತಿದ್ದು, ಈ ಸಭೆಯಲ್ಲಿ ಎಲ್ಲ ರೈತ ಸಂಘಟನೆಗಳು ಭಾಗವಹಿಸಿ ಈ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ಹಾಗೂ ತಿಳುವಳಿಕೆ ನೀಡಬೇಕಿದೆ. ಬೇಡ್ತಿ-ವರದಾ ನದಿ ಜೋಡಣೆಯು ಜಾರಿಯಾದಲ್ಲಿ ನಮ್ಮ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದ್ದರಿಂದ ಹೆಚ್ಚಿನ ರೈತರು ಜಾಗೃತಿ ಸಭೆಗೆ ಆಗಮಿಸಿದಾಗ ಈ ಯೋಜನೆಯನ್ನು ಜಾರಿಗೆ ಬಂದಲ್ಲಿ ಸಾಕಷ್ಟು ರೈತರಿಗೆ ಫಲಪ್ರದವಾಗುಲಿದೆ ಎಲ್ಲಾ ರೈತ ಸಂಘಟನೆಗಳು ಓಕ್ಕೂರಲ್ಲಾಗಿ ಭಾಗವಹಿಸಿ ಯೋಜನೆ ಯಶಸ್ವಿಯಾಗಿಲು ಸಹಕರಿಸುವಂತೆ ಒತ್ತಾಯಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 