ಅಗ್ನಿ ಅವಘಡಗಳ ಬಗ್ಗೆ ಹೆಚ್ಚು ಜಾಗರೊಕತೆ, ಮುನ್ನೆಚ್ಚರಿಕೆ ವಹಿಸಿ: ಅಗ್ನಿಶಾಮಕ ಠಾಣಾಧಿಕಾರಿ ಚಳಣ್ಣವರ
Be more vigilant and take precautions against fire accidents
ರಾಯಬಾಗ, 18 ; ಇತ್ತೀಚಿನ ದಿನಗಳಲ್ಲಿ ಅಗ್ನಿ ಅವಘಡಗಳು ಹೆಚ್ಚೆಚ್ಚು ಸಂಭವಿಸುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಜಾಗರೂಕತೆ ಮತ್ತು ಮುನ್ನೆಚ್ಚರಿಕೆ ಅತೀ ಅವಶ್ಯಕವೆಂದು ರಾಯಬಾಗದ ಅಗ್ನಿಶಾಮಕ ಠಾಣಾಧಿಕಾರಿ ರಮೇಶ ಚಳಣ್ಣವರ ಹೇಳಿದರು.
ಇತ್ತೀಚಿಗೆ ತಾಲೂಕಿನ ಬಸ್ತವಾಡ ಸರಕಾರಿ ಪ್ರೌಢಶಾಲೆಯಲ್ಲಿ ರಾಯಬಾಗ ಅಗ್ನಿಶಾಮಕ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಅಗ್ನಿ ಅವಘಡಗಳ ಕುರಿತ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಅವಘಡಗಳು ಆಕಸ್ಮಿಕತೆ, ಅಜಾಗರೂಕತೆ, ನಿರ್ಲಕ್ಷತನ ಮತ್ತು ಮುನ್ನೆಚ್ಚರಿಕೆಗಳ ಕೊರತೆಯಿಂದ ಘಟಿಸುತ್ತವೆ. ಅವಘಡ ಸಂಭವಿಸದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಅಗ್ನಿ ಅನಾಹುತದಿಂದ ಜೀವಹಾನಿ, ಆಸ್ತಿಹಾನಿ ಉಂಟಾಗುತ್ತಿದ್ದು ಅಡುಗೆ ಅನಿಲಗಳನ್ನು ಮನೆ, ಶಾಲೆ, ದೇವಸ್ಥಾನ, ಹೋಟೆಲ್ ಇನ್ನಿತರ ಸ್ಥಳಗಳಲ್ಲಿ ಬಳಸುವಾಗ ಮುಂಜಾಗ್ರತೆಯಿಂದ ಇರಬೇಕೆಂದು ಹೇಳಿದರು.
ಪ್ರಾತ್ಯಕ್ಷಿಕೆಯನ್ನು ಶಾಲಾ ಆವರಣದಲ್ಲಿ ಅಗ್ನಿನಂದಕ ಸಿಬ್ಬಂದಿಗಳಾದ ಗೋಪಾಲ ಬನಶಂಕರಿ, ಸಂಜೀವ ಕಾಂಬಳೆ, ನಿಂಗಪ್ಪ ನಾಯ್ಕ, ಭರಮು ಕುಂಭಾರ, ಶಿವರಾಜ ಪಾಂಡ್ರೆ, ಮಂಜುನಾಥ ಉಮರಾಣಿ ಮತ್ತು ಯಲ್ಲಪ್ಪ ಗಡದೆ ನಡೆಸಿಕೊಟ್ಟರು. ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಸುಖದೇವ ಕಾಂಬಳೆ ವಹಿಸಿದ್ದರು.
ಶಿಕ್ಷಕರಾದ ಗುರುಗೌಡ ಪಾಟೀಲ, ಮಂಗಲ ಕಾಂಬಳೆ, ಕಲ್ಮೇಶ ಕೋರೆ, ಎ ಎಮ್ ಮುಜಾವರ, ಹಾಲಪ್ಪ ಕಾಂಬಳೆ, ಗೀರೀಶ ಕಾಂಬಳೆ, ಅಮರ ಬಾಬಣ್ಣವರ, ಸಂಗಪ್ಪ ಕುಲಿಗೋಡ, ಗಾಯತ್ರಿ ಹೋಳ್ಕರ, ಶಾಂಭವಿ ಹೋಳ್ಕರ ಹಾಗೂ ವಿದ್ಯಾರ್ಥಿಗಳು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 