ರಾಜಕೀಯವಾಗಿ ಟೀಕೆ ಮಾಡುವಾಗ ಆರೋಗ್ಯಕರವಾಗಿರಬೇಕು
Be healthy when criticizing politics
ರಾಣೇಬೆನ್ನೂರು 28 ; ಯಾವುದೇ ಪಕ್ಷವಿರಲಿ, ಯಾರೇ ಇರಲಿ ಸಾರ್ವಜನಿಕವಾಗಿ ಏನೇ ಮಾತನಾಡಬೇಕಾದರೂ ಅದರಲ್ಲಿ ಅರ್ಥವಿರಬೇಕು ಅನರ್ಥಕ್ಕೆ ಎಡೆ ಮಾಡಿಕೊಡುವಂತೆ ಇರಬಾರದು. ಟೀಕೆಗಳು ಮಾಡುವಾಗ ಆರೋಗ್ಯಕರವಾಗಿರಬೇಕು. ಮಾತನಾಡುವಾಗ ಅತಿ ಸೂಕ್ಷ್ಮತೆ,ಅದರ ಪರಿಣಾಮ ಏನಾಗಬಹುದು ಎನ್ನುವುದನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು ಇಲ್ಲದೆ ಹೋದರೆ ಜನರು ನಾವು ಯಾರು?. ತಮ್ಮ ಯೋಗ್ಯತೆ ಏನು?. ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಹೇಳಿದರು.
ಗುರುವಾರ ವಾಗೀಶ ನಗರದ ಕೆ.ಬಿ. ಕೋಳಿವಾಡ ಸಭಾವನದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ತಿಂಗಳುಗಳಿಂದ ನಿಂಗರಾಜ ಕೋಡಿಹಳ್ಳಿ ಮತ್ತು ಮಾಜಿ ಶಾಸಕ ಅರುಣ್ ಕುಮಾರ ಪೂಜಾರ ಕಾಂಗ್ರೆಸ್ ಪಕ್ಷದ ಅಹಿಂದ ಮುಖಂಡರ ಬಗ್ಗೆ ಅಹಿತಕರ, ಮತ್ತು ಹಗುರವಾಗಿ ಮಾತನಾಡುತ್ತಾ ಕಾಂಗ್ರೆಸ್ ಡ್ಯಾಮೇಜಿಗೆ ಪ್ರಯತ್ನಿಸುತ್ತಿದ್ದಾರೆ, ಅವರ ಹೇಳಿಕೆಯ ನಡೆ ಬಿಜೆಪಿ ಪಕ್ಷದವರಿಗೆ ಶೋಭೆ ತರುವುದಿಲ್ಲ ಎಂದರು. ಮಾಜಿ ಸಭಾಪತಿಗಳು ಮತ್ತು ಹಾಲಿ ಶಾಸಕರು ಕಾಂಗ್ರೆಸ್ ಪಕ್ಷವು, ಪಕ್ಷದಲ್ಲಿರುವ ಹಿರಿಯ ಮುಖಂಡರಿಗೆ ಏನು? ಯಾವ ಸ್ಥಾನಮಾನ ಕೊಟ್ಟಿದ್ದಾರೆ ಎಂದು ಕೇಳಲು ತಮಗೆ ಹಕ್ಕೇನಿದೆ? ಎಂದು ಬಲವಾಗಿ ಪ್ರಶಸ್ತಿಸಿದರು.
ನಮ್ಮ ಹಿರಿಯ ನಾಯಕರು ಮತ್ತು ಹಾಲಿ ಶಾಸಕರು ಸಮಾನತೆ ಹರಿಕಾರರು. ತಾವು ರಾಜಕೀಯಕ್ಕೆ ಬಂದಾಗಿನಿಂದಲೂ ಬಂದಿಲ್ಲ ಒಂದು ರೀತಿಯಲ್ಲಿ ಸ್ಥಾನ.ಮಾನ ಗೌರವ ಅವಕಾಶ ಕೊಟ್ಟಿದ್ದಾರೆ. ಹಾಗಾದ್ರೆ ಬಿಜೆಪಿಯಲ್ಲಿ ಅಹಿಂದೆ ಎಲ್ಲಿದೆ?. ಅಹಿಂದ ನಾಯಕರಿಗೆ ಎಷ್ಟು ಅವಕಾಶ ಮಾಡಿ ಕೊಟ್ಟಿದ್ದೀರಿ?.ಎನ್ನುವುದನ್ನು ಕೂಡಲೇ ಬಹಿರಂಗ ಪಡಿಸಿ ಸಾರ್ವಜನಿಕವಾಗಿ ಚರ್ಚೆಗೆ ಬರಬೇಕು ಎಂದು ಪುಟ್ಟಪ್ಪ ಸವಾಲೆಸದರು. ಕಾಂಗ್ರೆಸ್ ಪಕ್ಷ 150 ವರ್ಷಗಳ ಇತಿಹಾಸ ಹೊಂದಿರುವ ಬಹುದೊಡ್ಡ ಪಕ್ಷ ಇತಿಹಾಸದಿಂದಲೂ ಪಕ್ಷವು ತತ್ವ ಮತ್ತು ಸಿದ್ದಾಂತವೇ ಅಹಿಂದ. ನಮ್ಮ ಪಕ್ಷದಲ್ಲಿ ಮುಖಂಡರಿದ್ದಾರೆ. ಹೈಕಮಾಂಡ್ ಇದೆ ಏನೇ ಮಾಡಬೇಕಾದರೂ ಚರ್ಚೆಯ ಮುನ್ನೇಲೆಗೆ ಬರಬೇಕು.
ಇಲ್ಲಿ ಹಿರಿಯರ ಮಾತಿಗೆ ಗೌರವ ಇದೆ. ಇಂತಹ ತತ್ವಧಾರಿತ ಪಕ್ಷದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಲು ಮುಂದಾದಲ್ಲಿ ನಾವು ಸಹ ನಿಜವಾದ ರಾಜಕೀಯ ಮಾಡಬೇಕಾಗುತ್ತದೆ? ಎಂದು ಅವರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾವ್ಯಾವ ಸಂದರ್ಭದಲ್ಲಿ ಅಂದಿನ ನಾಯಕರು ಯಾರ್ಯಾರಿಗೆ ಎಷ್ಟೆಷ್ಟು ಅವಕಾಶಗಳು ಸ್ಥಾನ-ಮಾನಗಳು ಕೊಟ್ಟಿದ್ದಾರೆ, ಬೆಳೆಸಿದ್ದಾರೆ ಎನ್ನುವುದನ್ನು ದಾಖಲಾತಿ ಸಮೇತ ವಿವರಿಸಿದ ನಗರಸಭಾ ಸದಸ್ಯ ಶಶಿಧರ್ ಬಸೇನಾಯಕರ, ಶೇರುಖಾನ್ ಕಾಬೂಲಿ, ರವೀಂದ್ರಗೌಡ ಪಾಟೀಲ, ಕೃಷ್ಣಪ್ಪ ಕಂಬಳಿ, ಸಿದ್ದಣ್ಣ ಅಂಬಲಿ, ಚಂದ್ರಣ್ಣ ಬೇಡರ, ಬೀರ್ಪ ಲಮಾಣಿ, ಷಣ್ಮುಖಪ್ಪ ಕಂಬಳಿ, ಇರ್ಫಾನ್ ದಿಡಗೂರ, ಮತ್ತಿತರರು ಮತ್ತೊಬ್ಬರು ಹೇಳುವ ಮಾತು ಕೋಡಿಹಳ್ಳಿ ಕೇಳಬಾರದು. ರಾಜಕೀಯ ಮಾಡಬೇಕಾದರೆ ನಿಮ್ಮ ಸ್ವಂತ ಬುದ್ಧಿಯಿಂದ ರಾಜಕೀಯ ಮಾಡಿ. ಸಾಕಷ್ಟು ಅವಕಾಶಗಳಿವೆ ಏಕೆ ಕಾಲ ಹರಣ ಮಾಡುತ್ತೀರಿ ಎಂದು ಮುಖಂಡರು ಕಿಡಿ ಕಾರಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 