ಅಂಜುಮನ್ ಸಂಸ್ಥೆ ಅಭಿವೃದ್ಧಿಗೆ ಕಂಕಣ ಬದ್ದರಾಗಿರಿ : ಶಾಸಕ ಪಠಾಣ
Be committed to the development of Anjuman organizations: MLA Pathana
ಅಂಜುಮನ್ ಸಂಸ್ಥೆ ಅಭಿವೃದ್ಧಿಗೆ ಕಂಕಣ ಬದ್ದರಾಗಿರಿ : ಶಾಸಕ ಪಠಾಣ
ಶಿಗ್ಗಾವಿ 21 : ಸಮಾಜದ ಸೇವೆ ಮಾಡಲು ಆ ಭಗವಂತ ಎಲ್ಲರಿಗೂ ಒಳ್ಳೆಯ ಅವಕಾಶ ಕೊಟ್ಟಿದ್ದಾನೆ ಅದನ್ನು ಸದುಪಯೋಗ ಪಡಿಸಿಕೊಂಡು ಅಂಜುಮನ್ ಸಂಸ್ಥೆ ಅಭಿವೃದ್ಧಿಗೆ ಕಂಕಣ ಬದ್ದರಾಗಿರಿ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ಪಟ್ಟಣದಲ್ಲಿ ನಡೆದ ಅಂಜುಮನ್-ಎ-ಇಸ್ಲಾಂ ಕಮಿಟಿ ಆಡಳಿತ ಮಂಡಳಿ ಚುನಾವಣೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಹಿ ತಿನಿಸಿ ಸನ್ಮಾನಿಸಿ ಮಾತನಾಡಿದ ಅವರು ಈ ಹಿಂದೆ ಇದ್ದ ಅಂಜುಮನ್ ಪದಾಧಿಕಾರಿಗಳಿಗೆ ಆಡಳಿತಾತ್ಮಕವಾಗಿ ಶಾಸಕರ ಸಂಪೂರ್ಣ ಬೆಂಬಲವಿರದ ಕಾರಣ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ ಆದರೆ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಹಾಗೂ ನಮ್ಮ ನಾಯಕರಾದ ಬಿ.ಝಡ್,ಜಮೀರ ಅಹ್ಮದ್ ಸಚಿವರಿರುವ ಕಾರಣ ಹೆಚ್ಚಿನ ಅನುಧಾನ ತರುವ ಜವಾಬ್ದಾರಿ ನನ್ನದು ಆದರೆ ನೀವೇಲ್ಲರೂ ಒಗ್ಗಟ್ಟಿನಿಂದ ಅಂದರೆ ಹಿಂದಿನ ಹಾಗೂ ಈಗ ಆಯ್ಕೆಯಾದ ಅಭ್ಯರ್ಥಿಗಳು ಸೇರಿ ಉತ್ತಮ ಕಾರ್ಯವನ್ನು ಮಾಡೋಣ ಹಾಗೂ ಉತ್ಸಾಹಿ ಯುವಕರ ಪಡೆ ಇರುವ ಕಾರಣ ಬರುವ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡಿ ಇತರರಿಗೆ ಮಾದರಿಯಾಗೋಣ ಎಂದರು. ಈ ಸಂದರ್ಭದಲ್ಲಿ ಗ್ಯಾರಂಟಿ ಅಧ್ಯಕ್ಷ ಎಸ್.ಎಫ್.ಮಣಕಟ್ಟಿ, ಗುಡ್ಡಪ್ಪ ಜಲದಿ, ಗೌಸಖಾನ ಮುನಸಿ, ಮುನ್ನಾ ಲಕ್ಷ್ಮೇಶ್ವರ, ಮುಕ್ತಾರಖಾನ ತಿಮ್ಮಾಪೂರ, ಚಂದ್ರು ಕೊಡ್ಲಿವಾಡ್, ಸುಲೇಮಾನ ಖಾಜೇಖಾನವರ, ಅಹ್ಮದಬಾಷಾ ಗುಲಾಮುದ್ದೀನ ಸೇರಿದಂತೆ ಆಯ್ಕೆಯಾದ ಅಭ್ಯರ್ಥಿಗಳಾದಸಲೀಂ ಅಹಮದ್ ಫರೋಕಿ, ಖಾಜಾ ಮೈನುದ್ದೀನ್ ಶ್ಯಾಬಾಳ , ಅಬ್ದುಲ್ ರೆಹಮಾನ್ ತೋಕಲ್ಲಿ , ಅಜೀಮಖಾನ್ ನಾಗಡ್ , ಮೊಹಮ್ಮದ್ ಜಾಫರ್ ನಿರ್ಮಣಿ , ಮೊಹಮ್ಮದ್ ಗೌಸ ಸವಣೂರ , ಆಫ್ಟಬ್ ಕಳಸ , ಮೊಹಮ್ಮದ್ ಖಾಜೇಖಾನವರ್ , ಮೌಲಾಲಿ ದೊಡ್ಮನಿ , ಲಿಯಾಕ್ತ್ ಅಹ್ಮದ್ ಭಮ್ಮೀಗಟ್ಟಿ , ಖಾಜಾ ಮೈನುದ್ದೀನ್ ಚೂಡಿದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 