ನವದೆಹಲಿ, ಜುಲೈ 08:ಶುದ್ಧ ಇಂಧನವನ್ನು ಅಳವಡಿಸಿಕೊಳ್ಳುವತ್ತ ಮತ್ತೊಂದು ಹೆಜ್ಜೆ ಇಟ್ಟಿರುವ ಭಾರತೀಯ ರೈಲ್ವೆ ನಡೆಸಿದ ಬ್ಯಾಟರಿ ಎಂಜಿನ್ ಚಾಲಿತ ರೈಲಿನ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.
ರೈಲ್ವೆಯ ಜಬಲ್ಪುರ್ ವಿಭಾಗದಲ್ಲಿ 'ನವದೂತ್' ಹೆಸರಿನ ಎಂಜಿನ್ ನಿರ್ಮಿಸಲಾಗಿದ್ದು, ಇದು ಡ್ಯುಯಲ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
'ನವದೂತ್' ಪರೀಕ್ಷಾ ಓಟದ ಯಶಸ್ಸಿನ ಬಗ್ಗೆ ತಿಳಿಸಲು ರೈಲ್ವೆ ಸಚಿವ ಪಿಯೂಷ್ ಗೋಯಲ್ ಎಂಜಿನ್ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. "ಈ ಬ್ಯಾಟರಿ ಚಾಲಿತ ರೈಲು ಉಜ್ವಲ ಭವಿಷ್ಯದ ಸಂಕೇತವಾಗಿದೆ, ಇದು ಡೀಸೆಲ್ನೊಂದಿಗೆ ವಿದೇಶಿ ವಿನಿಮಯವನ್ನು ಉಳಿಸುವಲ್ಲಿ ಮತ್ತು ಪರಿಸರವನ್ನು ಕಾಪಾಡುವಲ್ಲಿ ಪ್ರಮುಖ ಹೆಜ್ಜೆಯಾಗಿದೆ" ಎಂದು ಅವರು ಬರೆಕುಕೊಂಡಿದ್ದಾರೆ.