ಮೂಲಹಕ್ಕುಗಳು-ಕರ್ತವ್ಯಗಳ ಕುರಿತಾಗಿ ಉಪನ್ಯಾಸ

ಲೋಕದರ್ಶನ ವರದಿ

ಬಸವನಬಾಗೇವಾಡಿ 03:  ಸಂವಿಧಾನ ವಿವಿಧ ತೆರನಾದ ಹಕ್ಕುಗಳನ್ನು ನೀಡಿದ್ದು ಹಕ್ಕುಗಳ ಸ್ವಾತಂತ್ರ್ಯದ ಹೆಸರಲ್ಲಿ ಶೋಷಣೆ ಸರಿಯಲ್ಲ ಹೊಂದಾಣಿಕೆ ರಾಜೀ ಮುಖಾಂತರ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬೇಕೆಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ವೀರನಗೌಡ ಪಾಟೀಲ ಹೇಳಿದರು.

     ಸ್ಥಳೀಯ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಕಾಮರ್ಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ "ಮೂಲಹಕ್ಕುಗಳು-ಕರ್ತವ್ಯಗಳು"  ಕುರಿತಾಗಿ ಉಪನ್ಯಾಸ ಹಾಗೂ "ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಂವಿಧಾನದ ಮುಖಾಂತರ ಆಸ್ತಿ ಹೊಂದುವ ಸೇರಿದಂತೆ ವಿವಿಧ ಹಕ್ಕುಗಳನ್ನು ನೀಡಿದ್ದು ಅವುಗಳ ದುರುಪಯೋಗವಾಗದಂತೆ ಕರ್ತವ್ಯಗಳನ್ನು ಅನುಸರಿಸಬೇಕೆಂದು ಹೇಳಿದರು.

    ಸಣ್ಣಪುಟ್ಟ ವಿಚಾರಕ್ಕಾಗಿ ನ್ಯಾಯಾಲಯ ಮೇಟ್ಟಿಲು ಹತ್ತಿದಾಗ ಪರಸ್ಪರ ರಾಜೀ ಸಂಧಾನ ಮುಖಾಂತರ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ನೆಮ್ಮದಿ-ಸಂತಸವು ಕುಟುಂಬದಲ್ಲಿ ಇಮ್ಮಡಿಯಾಗುತ್ತದೆ ಅಲ್ಲದೆ ಸಮಯ ಹಾಗೂ ಹಣವು ಉಳಿತಾಯವಾಗುತ್ತದೆ ಎಂದು ಹೇಳಿದ ಅವರು ಮೆಗಾ ಲೋಕ ಅದಾಲತ್ ವೇಳೆಯಲ್ಲಿ ರಾಜೀಸಂಧಾನಕ್ಕೆ ಮುಂದಾಗಬೇಕು ಜೊತೆಗೆ ನ್ಯಾಯಾಲಯದ ಸಮಯವೂ ಉಳಿತಾಯವಾಗುತ್ತದೆ ಹೇಳಿದರು.

     ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಶ್ರೀಮತಿ ರೇಣುಕಾ ರಾಯ್ಕರ ಮಾತನಾಡಿ ಹೆಣ್ಣು ಮಕ್ಕಳಿಗೆ ಹಕ್ಕುಗಳು ಸಿಗುವ ಹಾಗೇ ಪ್ರತಿಯೊಬ್ಬರು ನಿಗಾವಹಿಸಬೇಕು, ಮಹಿಳೆ ಆಸ್ತಿ, ಹಕ್ಕೂಗಳನ್ನು ಪಡೆದುಕೊಳ್ಳುವ ಜೊತೆಗೆ ಗೌರವಯುತ ಜೀವನ ನಡೆಸಲು ಸಹಕಾರ ನೀಡಬೇಕೆಂದು ಹೇಳಿದರು.

     ನ್ಯಾಯವಾದಿ ಎಸ್.ಎಸ್.ಕೋಳೂರ ಮೂಲಹಕ್ಕುಗಳು-ಕರ್ತವ್ಯಗಳ ಕುರಿತಾಗಿ ಉಪನ್ಯಾಸ ನೀಡಿದರು, ಸಿವ್ಹಿಲ್ ನ್ಯಾಯಾಧೀಶರಾದ ಅಶ್ವಿನಿ ಹತ್ತಿಹೊಳಿ, ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶರಾದ ಶಿವರಾಜ ಎಚ್.ಎಸ್, ವಕೀಲರ ಸಂಘದ ಅಧ್ಯಕ್ಷ ಎನ್.ಎಸ್.ಪಾಟೀಲ, ನ್ಯಾಯವಾದಿ ಬಿ.ಆರ್.ಅಡ್ಡೋಡಗಿ, ಸಿ.ಆರ್.ಸುಭಾನಪ್ಪವರ, ಎನ್.ಬಿ.ಕಯಳಗೇರಿ ಇತರರು ಉಪಸ್ಥಿತರಿದ್ದರು, ನ್ಯಾಯವಾದಿ ವಿ.ಬಿ.ಮತರ್ೂರ ಸ್ವಾಗತಿಸಿದರು, ರಾಚಯ್ಯ ಗಣಕುಮಾರ ನಿರೂಪಿಸಿದರು, ಎಸ್.ಡಿ.ಸುಕಾಲಶೆಟ್ಟಿ ವಂದಿಸಿದರು.